ETV Bharat / state

'ನಮ್ಮನ್ನು ಜಗ್ಗಬಾರದೆಂದು ಅವರನ್ನೇ ಜಗ್ಗಿದ್ದೇವೆ': ಆಪರೇಷನ್​ ಹಸ್ತ ಒಪ್ಪಿಕೊಂಡ ಸತೀಶ್​ ಜಾರಕಿಹೊಳಿ

Satish Jarakiholi on operation Congress: ಆಪರೇಷನ್​ ಹಸ್ತ ವಿಚಾರವನ್ನು ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ.

author img

By

Published : Aug 20, 2023, 1:43 PM IST

satish jarakiholi
ಸತೀಶ್​ ಜಾರಕಿಹೊಳಿ
ಸತೀಶ್​ ಜಾರಕಿಹೊಳಿ ಹೇಳಿಕೆ

ಚಾಮರಾಜನಗರ: "ನಮ್ಮನ್ನು ಜಗ್ಗಬಾರದು ಎಂದೇ ನಾವು ಅವರನ್ನು ಜಗ್ಗಿದ್ದೇವೆ" ಎಂದು ಹೇಳುವ ಮೂಲಕ ಆಪರೇಷನ್​ ಹಸ್ತ ವಿಚಾರವನ್ನು ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಒಪ್ಪಿಕೊಂಡರು. ಚಾಮರಾಜನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಬಿಜೆಪಿಗರು ಸುಮ್ಮನಿರುವವರಲ್ಲ. ಡಿಸ್ಟರ್ಬ್​ ಮಾಡುತ್ತಲೇ ಇರುತ್ತಾರೆ. ರಾಜಕೀಯದಲ್ಲಿ ಇವೆಲ್ಲ ಇದ್ದಿದ್ದೇ" ಎಂದರು.

"ವಿವಿಧ ಪಕ್ಷಗಳಿಂದ 20 ಮಂದಿ ಕಾಂಗ್ರೆಸ್​ಗೆ ಬರಲಿದ್ದಾರೆ. ಆಪರೇಷನ್​ ಕಮಲ ಸಂಬಂಧ ಆಡಳಿತ ನಡೆಸುವವರಿಗೆ 24 ತಾಸು ಕೂಡ ಭಯ ಇದ್ದೇ ಇರುತ್ತದೆ" ಎಂದು ಹೇಳಿದರು. ಬಳಿಕ ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯಿಸಿ, "ಲೆಟರ್ ಬರೆದವರ ವಿವರ ಇಲ್ಲ, ಪುರಾವೆ ಇಲ್ಲ, ಸತ್ಯವೇ ದೂರವಾದ ಸಂಗತಿಗಳು ಅವೆಲ್ಲ. ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ" ಎಂದು ಹೇಳಿದರು.

ಮುಂದಿನ ಬಾರಿಯೂ ಕೇಂದ್ರದಲ್ಲಿ ನಾವೇ ಅಧಿಕಾರ ಹಿಡಿಯುತ್ತೇವೆ ಎಂಬ ಮೋದಿ ವಿಶ್ವಾಸಕ್ಕೆ ಉತ್ತರಿಸಿ, "ಅವರ ಅಭಿಪ್ರಾಯ ಹೇಳಲು ಅವರು ಸ್ವತಂತ್ರರು. ಎಲ್ಲವನ್ನೂ ಜನರು ತೀರ್ಮಾನ ಮಾಡುತ್ತಾರೆ" ಎಂದು ನುಡಿದರು.

'ಬಾಂಬೆ ಬಾಯ್ಸ್ ಪರಿಸ್ಥಿತಿ ಅಯೋಮಯ': ಕಾಂಗ್ರೆಸ್ ಕಚೇರಿಯಲ್ಲಿ ದೇವರಾಜ್ ಅರಸ್ ಜಯಂತಿಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, "ಬಾಂಬೆ ಬಾಯ್ಸ್ ಪರಿಸ್ಥಿತಿ ಎಡಬಿಡಂಗಿಗಳ ರೀತಿ ಆಗಿದೆ. ಬಿಜೆಪಿಯವರು ಎಲ್ಲಾ ಶಾಸಕರನ್ನು ಭ್ರಷ್ಟರನ್ನಾಗಿ ಮಾಡಿದ್ದಾರೆ" ಎಂದು ಕಿಡಿಕಾರಿದರು.

ಇದನ್ನೂ ಓದಿ: ಆಪರೇಷನ್ ಹಸ್ತ ಟೀಕೆ: ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದೇನು?

"ಬಾಂಬೆ ಬಾಯ್ಸ್ ಸ್ಥಿತಿ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದರು ಎನ್ನುವಂತಾಗಿದೆ. ತಾವು ತೋಡಿದ ಬಾವಿಗೆ ಬಿಜೆಪಿಗರು ತಾವೇ ಬಿದ್ದಿದ್ದಾರೆ. ಬಿಜೆಪಿಯವರು ತೋಡಿದ ಹಳ್ಳ ಅದಾಗಿತ್ತು. ಎಲ್ಲರ ದಿಕ್ಕು ತಪ್ಪಿಸಿ ಎಡಬಿಡಂಗಿತರ ಮಾಡಿದ್ದಾರೆ. ಬಡವರ ಪರವಾಗಿ ಇರೋದು ಕಾಂಗ್ರೆಸ್ ಪಕ್ಷ ಒಂದೇ" ಎಂದು ಹೇಳಿದರು.

ಆಪರೇಷನ್​ ಹಸ್ತ- ಸಿ.ಟಿ.ರವಿ ಪ್ರತಿಕ್ರಿಯೆ: ನಿನ್ನೆಯಷ್ಟೇ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, "ರಾಜ್ಯ ಕಾಂಗ್ರೆಸ್ ಸರ್ಕಾರವು ಅತಿಯಾಗಿ ವರ್ತಿಸಿದರೆ ಹಸ್ತಕ್ಕೆ ಆಪರೇಷನ್ ಹೇಗೆ ಮಾಡಬೇಕೆಂದು ನಮಗೆ ಗೊತ್ತಿದೆ. ಹಸ್ತಕ್ಕೆ ಆಪರೇಷನ್ ಮಾಡಿದರೆ ಏನಾಗುತ್ತದೆ ಎಂಬುದನ್ನು ನಾನೀಗ ಹೇಳುವುದಿಲ್ಲ" ಎಂದಿದ್ದಾರೆ.

"ಅನಿಶ್ಚಿತತೆ, ಅರಾಜಕೀಯ ಪರಿಸ್ಥಿತಿ ಬಂದಾಗ ಶಾಸಕರಿಗೆ ಬಿಜೆಪಿಯೇ ಪರ್ಯಾಯ ಎನಿಸಿತ್ತು. ಈಗ ಪೂರ್ಣ ಬಹುಮತ ಇದೆ. ಅತಿಯಾಗಿ ಮಾಡಲು ಹೋದರೆ ಪರಿಸ್ಥಿತಿ ಕೆಟ್ಟದ್ದಾಗಲಿದೆ. ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತ ಪಡೆದು ಆಡಳಿತ ನಡೆಸುತ್ತಿದೆ. ಒಳ್ಳೆಯ ಆಡಳಿತ ನಡೆಸುವ ಗುರಿ ಇಟ್ಟುಕೊಳ್ಳಬೇಕು. ಇಲ್ಲದೇ ಇರುವುದನ್ನು ಮಾಡಲು ಹೊರಟರೆ ಸುಮ್ಮನೆ ಕುಳಿತುಕೊಳ್ಳುವವರು ನಾವಲ್ಲ. ನಾವೇನಾದರೂ ಮಾಡಿದರೆ ಮೇಲೇಳಲು ಆಗಲ್ಲ. ನಾವೇನು ಮಾಡುತ್ತೇವೆಂದು ಹೇಳುವುದಿಲ್ಲ" ಎಂದು ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ಆಪರೇಷನ್​ ಹಸ್ತದ ಯಾವ ನಾಟಕವೂ ವರ್ಕೌಟ್ ಆಗಲ್ಲ: ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಲೇವಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.