ಚಾಮರಾಜನಗರ: ಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ಹನೂರು ತಾಲೂಕಿನ ಕಾಡಂಚಿನ ಗ್ರಾಮ ಪಚ್ಚೆದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾಸ್ತವ್ಯ ಮಾಡಿದರು.
ಈ ವೇಳೆ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ 2 ನಿಮಿಷವಷ್ಟೇ ಇದ್ದ ಹನೂರು ಶಾಸಕ ಆರ್.ನರೇಂದ್ರ ಬಳಿಕ ಕೊಳ್ಳೇಗಾಲದ ತಮ್ಮ ಮನೆಗೆ ತೆರಳಿದರು. ಈ ಬಗ್ಗೆ ಕುರಿತು ಸ್ಥಳೀಯರು ಕಿಡಿಕಾರಿದ್ದು, ಸಚಿವರೊಂದಿಗೆ ವಾಸ್ತವ್ಯ ಮಾಡದಿದ್ದ ಮೇಲೆ ಸಚಿವರೊಂದಿಗೆ ಮಲಗುವ ಶಾಸ್ತ್ರ ಮಾಡಿ ಫೋಟೋವೇಕೆ ತೆಗೆಸಿಕೊಳ್ಳಬೇಕಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಸ್ಥಳೀಯ ಯುವಕ ನಾಗರಾಜ್ ಮಾತನಾಡಿ, ಸಚಿವರೊಂದಿಗೆ ಮಲಗುವ ಶಾಸ್ತ್ರ ಮಾಡಿ ಶಾಸಕ ಆರ್.ನರೇಂದ್ರ ತೆರಳಿರುವುದು ಸರಿಯಲ್ಲ, ಅವರೊಂದಿಗೆ ವಾಸ್ತವ್ಯ ಮಾಡಬಹುದಾಗಿತ್ತು. ಅವರು ಭವಿಷ್ಯದಲ್ಲಿ ನಮ್ಮ ಕಷ್ಟ ಕೇಳುತ್ತಾರೆ ಅನಿಸುವುದಿಲ್ಲ. ಸಚಿವರೇ ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಸಚಿವ ಸುರೇಶ್ ಕುಮಾರ್ ನಾಲ್ವರು ಆರ್ ಎಸ್ ಎಸ್ ಕಾರ್ಯಕರ್ತರೊಂದಿಗೆ ವಾಸ್ತವ್ಯ ಹೂಡಿದರು. ಕಳೆದ ಬಾರಿಯೂ ಇಬ್ಬರು ಆರ್ ಎಸ್ ಎಸ್ ಕಾರ್ಯಕರ್ತರೊಂದಿಗೆ ವಾಸ್ತವ್ಯ ಹೂಡಿದ್ದರು.