ETV Bharat / state

ಕೊರೊನಾ ಕಾರಣಕ್ಕೆ ಬೆಲೆ ಏರಿಕೆ ಆಗುತ್ತಿದೆ, ಆ ಮೇಲೆ ಎಲ್ಲವೂ ಸರಿ ಹೋಗುತ್ತೆ.. ಕೋಟ ಶ್ರೀನಿವಾಸ ಪೂಜಾರಿ

author img

By

Published : Jul 16, 2021, 5:31 PM IST

ಇಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಚಾಮರಾಜೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಾಯಕತ್ವ ಬದಲಾವಣೆಗೆ ಕುರಿತಂತೆ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದರು..

ಕೋಟಾ ಶ್ರೀನಿವಾಸ ಪೂಜಾರಿ
Minister Kota Srinivas Poojary

ಚಾಮರಾಜನಗರ : ಆಡಳಿತಾತ್ಮಕ ವಿಚಾರವಾಗಿ ಮುಖ್ಯಮಂತ್ರಿ ಬಿ‌ ಎಸ್‌ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದಾರೆ. ಅವರ ಪ್ರವಾಸ ಆಡಳಿತದ ಒಂದು ಭಾಗವಾಗಿದ್ದು, ಯಾವುದೇ ನಾಯಕತ್ವ ಗೊಂದಲವಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಚಾಮರಾಜೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಬಗ್ಗೆ ನಮಗೆ ಯಾವುದೇ ಗೊಂದಲಗಳಿಲ್ಲ. ಉತ್ತಮ ಆಡಳಿತವನ್ನು ಸಿಎಂ ಹಾಗೂ ಪಕ್ಷ ಸಂಘಟನೆಯನ್ನು ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ. ದೆಹಲಿ ಯಾತ್ರೆಗೆ ವಿಶೇಷ ಅರ್ಥ ಬೇಡ ಎಂದರು.

ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಕೊರೊನಾ ಕಾರಣಕ್ಕಾಗಿ ಬೆಲೆ ಏರಿಕೆ ಆಗುತ್ತಿದ್ದು, ಬಳಿಕ ಎಲ್ಲವೂ ಪರಿಹಾರವಾಗಲಿದೆ. ಬೆಂಗಳೂರಿಗೆ ತೆರಳಿದ ಬಳಿಕ ಚಾಮರಾಜೇಶ್ವರ ದೇಗುಲ ಅಭಿವೃದ್ಧಿಗಾಗಿ ಒಂದು ತಂಡ ಕಳುಹಿಸಿ ವರದಿ ಪಡೆದು ಎಲ್ಲಾ ಭರವಸೆಗಳನ್ನು ಈಡೇರಿಸಲಾಗುವುದು. ನೂತನ ರಥದ ಕಾರ್ಯವು ಮುಗಿಯುತ್ತಿದೆ ಎಂದು ತಿಳಿಸಿದರು.

ಪರಂಪರೆಯಂತೆ ಅರ್ಚಕರು : ತಮಿಳುನಾಡಿನ ಮುಜರಾಯಿ ದೇಗುಲಗಳಲ್ಲಿ ದಲಿತ ಅರ್ಚಕರನ್ನು ನೇಮಿಸಿರುವಂತೆ ಕರ್ನಾಟಕದಲ್ಲೇನಾದರು ಆ ರೀತಿ ಮಾಡುವ ಚಿಂತನೆ ಇದೆಯೇ ಎಂಬ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿ, ಅ ರೀತಿಯ ಯಾವುದೇ ಚಿಂತನೆಗಳು ಇಲ್ಲ. ದೇವಾಲಯದ ಪರಂಪರೆ, ಇತಿಹಾಸದಂತೆ ಅರ್ಚಕರು ನೇಮಕವಾಗಲಿದ್ದಾರೆ ಎಂದು ಉತ್ತರಿಸಿದರು.

ಓದಿ: ಜುಲೈ 20ಕ್ಕೆ ಪಿಯು ಫಲಿತಾಂಶ ಪ್ರಕಟ: ಗ್ರೇಡ್ ಬದಲು ಅಂಕಗಳ ಆಧಾರದಲ್ಲಿ ರಿಸಲ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.