ಚಾಮರಾಜನಗರ: ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವ ಈಶ್ವರಪ್ಪ ನಿರ್ಬಂಧದ ನಡುವೆಯೂ ಹನೂರು ತಾಲೂಕಿನ ಮಲೆ ಮಹದೇಶ್ವರನ ದರ್ಶನ ಪಡೆದಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಜೂನ್ 19 ರಿಂದ 21 ರ ವರೆಗೆ ದೇಗುಲ ಪ್ರವೇಶಕ್ಕೆ ಭಕ್ತಾಧಿಗಳಿಗೆ ನಿರ್ಬಂಧ ವಿಧಿಸಿ ಡಿಸಿ ಆದೇಶಿಸಿದ್ದರು. ಆದರೆ ಸಚಿವರು ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿ, ದೇಗುಲದಲ್ಲಿ ವಿಶೇಷ ಪೂಜೆ ಮಾಡಿಸಿರುವುದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ 19 ರಿಂದ 21 ರ ವರೆಗೆ ಮಲೆಮಹದೇಶ್ವರ ದೇಗುಲ ಪ್ರವೇಶಕ್ಕೆ ಭಕ್ತಾಧಿಗಳಿಗೆ ನಿರ್ಬಂಧ ವಿಧಿಸಿ ಡಿಸಿ ಆದೇಶಿಸಿದ್ದರು. ಆದರೆ, ಕಾನೂನು ಜನ ಸಾಮಾನ್ಯರಿಗೆ ಮಾತ್ರ ಕಾನೂನು ಅನ್ವಯವಾಗುವುದೇ? ಜನಪ್ರತಿನಿಧಿಯಾಗಿ ಅವರು ಕ್ಷೇತ್ರದಲ್ಲೇ ತಂಗಿ, ದೇಗುಲದಲ್ಲಿ ವಿಶೇಷ ಪೂಜೆ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ಷೇಪಿಸಿದ್ದಾರೆ.
ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ನಿರ್ಬಂಧದ ನಡುವೆ ಈಶ್ವರಪ್ಪ ಮಲೆಮಹದೇಶ್ವರನ ದರ್ಶನ ಪಡೆಯುವ ಫೋಟೋಗಳು ನೆಟ್ಟಿಗರಿಗೆ ಆಹಾರವಾಗದಿರಲೆಂದು ಫೋಟೋ ತೆಗೆಯದಂತೆ ಸಿಬ್ಬಂದಿಗೆ ತಾಕೀತು ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.