ಕೊಳ್ಳೇಗಾಲ: ಆಗಾಗ ಮನೆ ಬಿಟ್ಟು ಹೋಗಿ ಮತ್ತೆ ಹಿಂದಿರುಗಿ ಬರುತ್ತಿದ್ದ ಮಾನಸಿಕ ಅಸ್ವಸ್ಥೆಯೋರ್ವರು ತಿಂಗಳಾದರೂ ಬಂದಿಲ್ಲ ಎಂದು ಆಕೆಯ ಅಣ್ಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸತ್ತೇಗಾಲ ಗ್ರಾಮದ ಅಗ್ರಹಾರ ನಿವಾಸಿ ದುಂಡಿ (35) ಕಾಣೆಯಾದ ಮಾನಸಿಕ ಅಸ್ವಸ್ಥೆ. ಈಕೆ ಆಗಾಗ್ಗೆ ಒಬ್ಬಳೇ ಹೊರಗೆ ಹೋಗಿ ವಾಪಸ್ ಬರುತ್ತಿದ್ದಳು. ಆದರೆ ಕಳೆದ ಜು.16 ರ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಮಧ್ಯರಾತ್ರಿ ಎದ್ದು ಹೋದವಳು ಹಿಂತಿರುಗಿ ಬಂದಿಲ್ಲ ಎಂದು ಅಣ್ಣ ಸೋಮು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಸ್ವಸ್ಥೆಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.