ಚಾಮರಾಜನಗರ: ಭಾರತ್ ಜೋಡೋ ಯಾತ್ರೆಯ ಎರಡನೇ ದಿನವಾದ ಶನಿವಾರದಂದು ನಂಜನಗೂಡಿನ ಬ್ರಿಡ್ಜ್ ಬಳಿ ನಿಂತಿದ್ದ ಮೆಡಿಕಲ್ ವಿದ್ಯಾರ್ಥಿನಿಯನ್ನ ಕರೆದು 1.5 ಕಿ.ಮೀಗೂ ಹೆಚ್ಚು ದೂರ ಹೆಜ್ಜೆ ಹಾಕಿದ ರಾಹುಲ್ ಗಾಂಧಿ, ಫಿಟ್ನೆಸ್, ಆಯುರ್ವೇದ ಮಾತುಕತೆ ನಡೆಸಿದ್ದಾರೆ.
ನಂಜನಗೂಡು ಪಟ್ಟಣದ ವಿದ್ಯಾನಗರ ಬಡಾವಣೆ ನಿವಾಸಿ ಅನುಷಾ ಎಂಬ ವೈದ್ಯಕೀಯ ವಿದ್ಯಾರ್ಥಿನಿ ಬ್ರಿಡ್ಜ್ ಬಳಿ ನಿಂತಿದ್ದ ವೇಳೆ ಅವರನ್ನು ತಮ್ಮ ಬಳಿ ಕರೆದ ರಾಹುಲ್ ಗಾಂಧಿ, ಏನು ಮಾಡುತ್ತಿದ್ದೀರಿ? ಎಂದೆಲ್ಲಾ ವಿಚಾರಿಸಿ ಆಯುರ್ವೇದ ವ್ಯಾಸಂಗದ ಬಗ್ಗೆ ಮಾಹಿತಿ ಪಡೆದರು. ಆಯುರ್ವೇದದಲ್ಲಿ ರೋಗ ಪತ್ತೆ, ರೋಗ ನಿರೋಧಕ ಶಕ್ತಿ, ಚಿಕಿತ್ಸಾ ವಿಧಾನದ ಬಗ್ಗೆ ಕೇಳಿ ತಿಳಿದುಕೊಂಡರು.
ಇದನ್ನೂ ಓದಿ: ಆಕ್ಸಿಜನ್ ದುರಂತ: ಅಪ್ಪನ ನೆನೆದು ಭಾವುಕಳಾದ ಬಾಲಕಿ.. ಕಂದನ ಮಾತಿಗೆ ಕಣ್ಣೀರಿಟ್ಟ ಜನ
ಬಳಿಕ ಫಿಟ್ನೆಸ್ ಬಗ್ಗೆ ಮಾತನಾಡಿದ ರಾಗಾ, ಆಯುರ್ವೇದದ ಮೂಲಕ ನಮ್ಮ ದೇಹವನ್ನು ಹೇಗೆ ಫಿಟ್ ಆಗಿ ಕಾಪಾಡಿಕೊಳ್ಳಬೇಕು ಎಂದು ಟಿಪ್ಸ್ ಕೇಳಿದ್ದಾರೆ. ಜೊತೆಗೆ ಭಾರತ್ ಜೋಡೋ ಯಾತ್ರೆಯಿಂದ ಏನಾದರೂ ಅನಾನುಕೂಲ ಆಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಅನುಷಾ, ತೊಂದರೆ ಏನು ಆಗಿಲ್ಲ, ಜನರಿಗಾಗಿಯೇ ಮಾಡುತ್ತಿರುವ ಯಾತ್ರೆ ಇದಾಗಿದೆ ಎಂದಿದ್ದಾರೆ.