ಕೊಳ್ಳೇಗಾಲ(ಚಾಮರಾಜನಗರ): ಮಾಸ್ಕ್ ಡೇ ಪ್ರಯುಕ್ತ ತಾಲೂಕು ಆಡಳಿತ, ಆರೋಗ್ಯ ಇಲಾಖೆ, ನಗರಸಭೆ ವತಿಯಿಂದ ಕೊಳ್ಳೇಗಾಲದಲ್ಲಿ ಸಾಮಾಜಿಕ ಅಂತರದಲ್ಲಿ ಮುಖಗವಸು ಜಾಗೃತಿ ಪಾದಯಾತ್ರೆ ಆಯೋಜಿಸಲಾಗಿತ್ತು.
ಸಾಮಾಜಿಕ ಅಂತರದೊಂದಿಗೆ ಮಾಸ್ಕ್ ಡೇ ಜನ ಜಾಗೃತಿ ಕಾರ್ಯಕ್ರಮ ಆಚರಿಸಿದ್ದು, ಅಂಗನವಾಡಿ ಕಾರ್ಯಕರ್ತರು, ಅಶಾ ಕಾರ್ಯಕರ್ತರು, ಪೌರ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದರು. ಇನ್ನೂ ರೋಟರಿ ಸಂಸ್ಥೆಯು ಸಹ ಇದಕ್ಕೆ ಸಾಥ್ ನೀಡಿತು.
ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದ ತಹಶೀಲ್ದಾರ್ ಕುನಲ್, ಸರ್ಕಾರದ ನಿರ್ದೇಶನದಂತೆ ಮಾಸ್ಕ್ ಡೇ ಆಚರಿಸಲಾಗುತ್ತಿದೆ. ಇದರ ಉದ್ದೇಶ ಕೋವಿಡ್ ತಡೆಗೆ ಬೇಕಾದ ಸುರಕ್ಷತಾ ಕ್ರಮಗಳಾದ ಸಾಮಾಜಿಕ ಅಂತರ, ಮುಖಗವಸು ಧಾರಣೆ, ಆಗಾಗ ಕೈಗಳನ್ನು ಸಾನಿಟೈಸ್ ಮಾಡಿ ಶುಚಿಯಿಂದ ಇರಿಸುವುದಾಗಿದೆ. ಜನತೆ ಕೊರೊನಾ ಸೋಂಕಿನಿಂದ ದೂರವಿರಲು ಈ ಸೂಚನೆಗಳನ್ನು ಪಾಲಿಸಬೇಕಾಗಿದೆ ಎಂದರು.