ಚಾಮರಾಜನಗರ: ಕೋವಿಡ್-19 ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ರೂಪಿಸಿರುವ 'ಮಾಸ್ಕ್ ಡೇ'ಯನ್ನು (ಮುಖಗವಸು ದಿನ) ಇಂದು ಚಾಮರಾಜನಗರ ಜಿಲ್ಲಾದ್ಯಂತ ಜಾಥಾ ಮೂಲಕ ಆಚರಿಸಿ, ಅರಿವು ಮೂಡಿಸಲಾಯಿತು.
ಜಿಲ್ಲಾಡಳಿತದ ವತಿಯಿಂದ ನಗರದ ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಜಿಲ್ಲಾಡಳಿತ ಭವನದವರೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಎಸ್ಪಿ ಎಚ್.ಡಿ.ಆನಂದಕುಮಾರ್, ಡಿಎಚ್ಒ ಡಾ.ರವಿ, ನಗರಸಭೆ ಆಯುಕ್ತ ರಾಜಣ್ಣ ನೇತೃತ್ವದಲ್ಲಿ ಜಾಥಾ ನಡೆಸಲಾಯಿತು.
ಕೆಎಸ್ಆರ್ ಟಿಸಿ ವತಿಯಿಂದ ವಿಭಾಗೀಯ ನಿಯಾಂತ್ರಣಾಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ಸಿಬ್ಬಂದಿ ಮಾಸ್ಕ್ ಧರಿಸಿ ಪ್ರಯಾಣಿಕರಿಗೆ ಮಾಸ್ಕ್ ಧರಿಸುವಂತೆ ಅರಿವು ಮೂಡಿಸಿದರು.
ಬಸ್ಸಿನಲ್ಲಿ ಬಲವಂತಕ್ಕೆ ಮುಖಗವಸು ಹಾಕಿಕೊಳ್ಳದೇ ಅಡ್ಡಾಡುವಾಗ, ಬೇರೆಯವರೊಂದಿಗೆ ಮಾತನಾಡುವಾಗ ಮಾಸ್ಕ್ ಧರಿಸಿ ಎಂದು ತಿಳಿ ಹೇಳಿದರು. ಹನೂರು, ಕೊಳ್ಳೇಗಾಲ ತಾಲೂಕು ಆಡಳಿತ ವತಿಯಿಂದ ಮಾಸ್ಕ್ ಧರಿಸುವಂತೆ ಅರಿವು ಮೂಡಿಸಲಾಯಿತು.