ETV Bharat / state

ಬೈಕ್​​ನಲ್ಲಿ ಗಾಂಜಾ ಸಾಗಣೆ: ಕೊಳ್ಳೇಗಾಲದಲ್ಲಿ ಇಬ್ಬರ ಬಂಧನ

ಬೈಕ್​ನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2 ಕೆಜಿ ಗಾಂಜಾ ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.

kollegal
ಬೈಕ್​​ನಲ್ಲಿ ಗಾಂಜಾ ಸಾಗಾಣಿಕೆ: ಕೊಳ್ಳೇಗಾಲದಲ್ಲಿ ಇಬ್ಬರ ಬಂಧನ
author img

By

Published : Oct 31, 2020, 7:57 AM IST

ಕೊಳ್ಳೇಗಾಲ: ಬೈಕ್​​ನಲ್ಲಿ ಅಕ್ರಮವಾಗಿ ಒಣ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹನೂರು ತಾಲೂಕಿನ ಕೌದಳ್ಳಿ ಸಮೀಪದ ಗಾಂಧಿ ನಗರದ ರಘುವರನ್( 24) ಹಾಗೂ ಗೌತಮ್ (22) ಬಂಧಿತ ಆರೋಪಿಗಳು. ಪಟ್ಟಣದ ಸಿದ್ದಯ್ಯನಪುರ ರಸ್ತೆ ಮಾರ್ಗದಲ್ಲಿ ಬಂಧಿತರು ಬೈಕ್​​ನಲ್ಲಿ ಕೌದಳ್ಳಿಯಿಂದ ಕೊಳ್ಳೇಗಾಲದ ಕಡೆಗೆ ಬ್ಯಾಗ್​​ನಲ್ಲಿ ಒಣ ಗಾಂಜಾ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್​​ಪೆಕ್ಟರ್ ತಾಜುದ್ದೀನ್ ತಂಡ ದಾಳಿ ನಡೆಸಿದೆ.

ಬಂಧಿತರಿಂದ 2 ಕೆಜಿ ಗಾಂಜಾ ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.