ಚಾಮರಾಜನಗರ: ಹನೂರು ತಾಲೂಕಿನ ಅಂಚಿಪಾಳ್ಯ ಗ್ರಾಮದ ಜಮೀನೊಂದರಲ್ಲಿ ಮೆಣಸಿನಕಾಯಿ ಫಸಲಿನ ನಡುವೆ ಮತ್ತೇರಿಸುವ ಗಾಂಜಾ ಬೆಳೆದಿರುವುದು ಕಂಡು ಬಂದಿದೆ.
ಖಚಿತ ಮಾಹಿತಿ ಮೇರೆಗೆ, ಅಂಚಿಪಾಳ್ಯ ಗ್ರಾಮದಲ್ಲಿ ರಾಜೇಂದ್ರನ್@ಅರ್ಜುನ್ ಎಂಬಾತ ತನ್ನ ಜಮೀನಿನ ಮೆಣಸಿನಕಾಯಿ ಫಸಲಿನ ಮಧ್ಯೆ ಬೆಳೆದಿದ್ದ 6 ಗಾಂಜಾ ಗಿಡಗಳನ್ನು ರಾಮಾಪುರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಾರ್ಯಾಚರಣೆ ವೇಳೆ 9 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದು, ಇವು 15 ಕೆ.ಜಿ ತೂಕ ಹೊಂದಿವೆ.
ಪೊಲೀಸರು ದಾಳಿ ಮಾಡಿದ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ರಾಜೇಂದ್ರನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒದಿ: ಕೊಳ್ಳೇಗಾಲ: ಆಸ್ಪತ್ರೆಗೆಂದು ಬಂದ ಗೃಹಿಣಿ ಮಗುವಿನೊಂದಿಗೆ ನಾಪತ್ತೆ!