ETV Bharat / state

ಕೊಳ್ಳೇಗಾಲ: ಚಲಿಸುವ ಬಸ್​ನಲ್ಲಿ ವಾಂತಿ ಮಾಡೋವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವು - Kollegala crime news

ಚಲಿಸುತ್ತಿದ್ದ ಬಸ್​ನಿಂದ ಬಿದ್ದ ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಗೆ ಕರೆತರುವಾಗಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

man dies after falling off moving bus
ಚಲಿಸುವ ಬಸ್​ನಿಂದ ಆಯತಪ್ಪಿ ಬಿದ್ದು ಮೈಸೂರಿನ ನಿವಾಸಿ ಸಾವು
author img

By

Published : Oct 9, 2021, 7:27 AM IST

ಕೊಳ್ಳೇಗಾಲ: ಬಸ್​ನಲ್ಲಿ ವಾಂತಿ ಮಾಡಲು ಮುಂದಾದ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಹನೂರು ತಾಲೂಕಿನ ಪೊನ್ನಾಚಿ ಕ್ರಾಸ್ ಬಳಿ ನಡೆದಿದೆ.

ಮೈಸೂರಿನ ಅಶೋಕ ಪುರಂ ನಿವಾಸಿ ಉಮೇಶ್(61) ಎಂಬುವವರು ಸಾವನ್ನಪ್ಪಿದ ವ್ಯಕ್ತಿ. ಇವರು ಪಶು ಸಂಗೋಪನಾ ಇಲಾಖೆಯ ನಿವೃತ್ತ ನೌಕರರಾಗಿದ್ದಾರೆ. ಎಂದಿನಂತೆ ಅಮಾವಾಸ್ಯೆಯ ಪೂಜೆಗೆಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಸಾರಿಗೆ ಬಸ್​ನಲ್ಲಿ ತೆರಳುವಾಗ ಪೊನ್ನಚ್ಚಿ ಕ್ರಾಸ್ ಬಳಿ ವಾಂತಿ ಬಂದಂತಾಗಿದೆ ಎಂದು ಬಸ್ ಬಾಗಿಲ ಬಳಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಚಲಿಸುತ್ತಿದ್ದ ಬಸ್‌ನ ಬಾಗಿಲು ಕಳಚಿಕೊಂಡಿದ್ದು ಉಮೇಶ್ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.

ಚಲಿಸುತ್ತಿದ್ದ ಬಸ್​ನಿಂದ ಬಿದ್ದ ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಉಮೇಶ್​ರನ್ನು ತಪಾಸಣೆ ನಡೆಸಿದ ವೈದ್ಯರು ಮಾರ್ಗ ಮಧ್ಯೆಯೇ ಆತ ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಈ ಸಂಬಂಧ ಮಲೆಮಹದೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ:ಯುವತಿಯ ವಿಚಾರಕ್ಕೆ ಸಹಪಾಠಿಗಳ ಮಧ್ಯೆ ಜಗಳ: ಓರ್ವನ ಕೊಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.