ಚಾಮರಾಜನಗರ: ತಮಿಳುನಾಡಿಗೆ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಹನೂರು ತಾಲೂಕಿನ ಗಡಿಭಾಗದ ನಾಲಾರೋಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಸೇಲಂ ಜಿಲ್ಲೆಯ ಶೆಟ್ಟಿಯೂರು ಗ್ರಾಮದ ಕನಕರಾಜು ಬಂಧಿತ ಆರೋಪಿ. ಈರೋಡ್ನಿಂದ ನಾಲಾರೋಡ್ ಮೂಲಕ ತಮಿಳುನಾಡಿನ ಕೋಟೆಮಾಳಕ್ಕೆ ಗಾಂಜಾ ಸಾಗಿಸುತ್ತಿದ್ದಾಗ ರಾಮಾಪುರ ಪಿಐ ಮನೋಜ್ ಕುಮಾರ್ ನೇತೃತ್ವದಲ್ಲಿ ಲಿಂಗರಾಜು, ಬೊಮ್ಮೆಗೌಡ ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಕನಕರಾಜ ಈ ಹಿಂದೆಯೂ ತಮಿಳುನಾಡಿಗೆ ಗಾಂಜಾ ಸಾಗಿಸುತ್ತಿದ್ದ ಎನ್ನಲಾಗ್ತಿದೆ.
ಬಂಧಿತನಿಂದ 6 ಕೆಜಿ ಒಣ ಗಾಂಜಾ ವಶಪಡಿಸಿಕೊಂಡಿದ್ದು, ರಾಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.