ಚಾಮರಾಜನಗರ: ಅಕ್ರಮವಾಗಿ ಕೇರಳ ಲಾಟರಿ ಮಾರುತ್ತಿದ್ದ ವ್ಯಕ್ತಿಯನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಇಲವಾಲ ನಿವಾಸಿ ಶ್ರೀನಿವಾಸರಾವ್ ಬಂಧಿತ ಆರೋಪಿ. ಈತ ಮೈಸೂರಿನಿಂದ ಆಗಾಗ್ಗೆ ಹನೂರು, ರಾಮಾಪುರ, ಅಜ್ಜೀಪುರಕ್ಕೆ ಬಂದು ಕೇರಳ ಲಾಟರಿಗಳನ್ನು ಮಾರಾಟ ಮಾಡಿ ತೆರಳುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 160 ಲಾಟರಿ ಟಿಕೆಟ್ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲಾದ್ಯಂತ ಹರಡಿದೆಯಾ ಕೇರಳ ಲಾಟರಿ ದಂಧೆ?
ಕೇರಳ ಲಾಟರಿ ಜಿಲ್ಲಾದ್ಯಂತ ಹರಡಿದೆ ಎನ್ನುವುದಕ್ಕೆ ರಾಮಾಪುರದ ಅಕ್ರಮ ಲಾಟರಿ ಮಾರಾಟ ಪತ್ತೆ ಹಚ್ಚಿರುವುದು ಸಾಕ್ಷಿಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಗುಂಡ್ಲುಪೇಟೆಯಲ್ಲಿ 900 ಟಿಕೆಟ್ನೊಂದಿಗೆ ಲಾಟರಿ ಮಾರಾಟಗಾರನನ್ನು ಬಂಧಿಸಿದ್ದರು.