ETV Bharat / state

ಯುಪಿ ಮಾದರಿಯಂತೆ ಸುತ್ತೂರು ಶ್ರೀಗಳನ್ನು ರಾಜ್ಯದ ಸಿಎಂ ಮಾಡಿ: ಭಕ್ತರ ಒತ್ತಾಯ! - ಯುಪಿ ಮಾದರಿ ಸುತ್ತೂರು ಶ್ರೀಗಳನ್ನು ಸಿಎಂ ಮಾಡಿ

ಶಿಕ್ಷಣ, ಆರೋಗ್ಯ, ನಿರ್ಗತಿಕರಿಗೆ ಆಶ್ರಯ, ಸಂಸ್ಕೃತಿ ಪೋಷಕರಾಗಿ, ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುವ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿರುವ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ರೈತ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಆಲೂರು ಮಲ್ಲು ಆಗ್ರಹಿಸಿದರು.

make-jagadguru-sri-shivarathri-deshikendra-mahaswamiji-cm-of-the-state
ಸುತ್ತೂರು ಶ್ರೀ
author img

By

Published : Jan 30, 2021, 3:48 PM IST

ಚಾಮರಾಜನಗರ: ಉತ್ತರ ಪ್ರದೇಶ ಮಾದರಿಯಲ್ಲಿ ಸುತ್ತೂರು ಶ್ರೀಗಳನ್ನು ರಾಜ್ಯದ ಸಿಎಂ ಆಗಿ ಮಾಡಬೇಕೆಂದು ರೈತ ಹಿತರಕ್ಷಣಾ ಹೋರಾಟ ಸಮಿತಿ‌ ಅಧ್ಯಕ್ಷ ಆಲೂರು ಮಲ್ಲು ಒತ್ತಾಯಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ, ನಿರ್ಗತಿಕರಿಗೆ ಆಶ್ರಯ, ಸಂಸ್ಕೃತಿ ಪೋಷಕರಾಗಿ, ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುವ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿರುವ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಯುಪಿ ಮಾದರಿಯಲ್ಲಿ ಸುತ್ತೂರು ಶ್ರೀಗಳನ್ನು ಸಿಎಂ ಮಾಡಿ

12ನೇ ಶತಮಾನದಲ್ಲಿ ಸಮಸಮಾಜದ ಕನಸನ್ನು ಕಂಡ ಬಸವೇಶ್ವರರ ಮಾರ್ಗದಲ್ಲಿ ಶಿಕ್ಷಣ, ಸಂಸ್ಕೃತಿ, ಆಧ್ಯಾತ್ಮಿಕ ನೆಲೆಯಲ್ಲಿ ಕ್ರಾಂತಿಕಾರಕ‌ ಬದಲಾವಣೆಯನ್ನು ತಂದ ಸುತ್ತೂರು ಶ್ರೀಗಳನ್ನು ಸಿಎಂ ಮಾಡಿದರೆ ಭ್ರಷ್ಟಾಚಾರ ಮುಕ್ತ, ನಿರುದ್ಯೋಗ ಮುಕ್ತ ಹಾಗೂ‌‌ ಹಸಿವು ಮುಕ್ತ ರಾಜ್ಯವನ್ನಾಗಿಸುವುದರಲ್ಲಿ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.