ETV Bharat / state

ಆದೇಶ ಕೇಳದ್ದಕ್ಕೆ ಆನೆಯ ಕಣ್ಣನ್ನೇ ಕುರುಡಾಗಿಸಿದ ಮಾವುತನ ಸ್ನೇಹಿತ!

author img

By

Published : Jun 25, 2021, 2:04 PM IST

ಮಾವುತನ ಸ್ನೇಹಿತನೊಬ್ಬ ತನ್ನ ಆದೇಶ ಕೇಳದ್ದಕ್ಕೆ ಆನೆಯ ಕಣ್ಣನ್ನೇ ಕುರುಡಾಗಿಸಿರುವ ಘಟನೆ ತಮಿಳುನಾಡಿನ ಮಧುಮಲೈನಲ್ಲಿ ನಡೆದಿದೆ.

mahout friend attack, mahout friend attack to elephant eye, mahout friend attack to elephant eye in Chamarajangar, Chamarajangar elephant news, ಆನೆಯ ಕಣ್ಣನ್ನೇ ಕುರುಡಾಗಿಸಿದ ಮಾವುತನ ಸ್ನೇಹಿತ, ಚಾಮರಾಜನಗರದಲ್ಲಿ ಆನೆಯ ಕಣ್ಣನ್ನೇ ಕುರುಡಾಗಿಸಿದ ಮಾವುತನ ಸ್ನೇಹಿತ, ಚಾಮರಾಜನಗರ ಆನೆ ಸುದ್ದಿ,
ಆನೆಯ ಕಣ್ಣನ್ನೇ ಕುರುಡಾಗಿಸಿದ ಮಾವುತನ ಸ್ನೇಹಿತ

ಚಾಮರಾಜನಗರ/ಮಧುಮಲೈ: ಆನೆಯು ತನ್ನ ಆದೇಶ ಕೇಳದ್ದಕ್ಕೆ ಕುಪಿತಗೊಂಡ ಮಾವುತನ ಗೆಳೆಯ ಆನೆಯ ಎಡಗಣ್ಣನ್ನೇ ಕುರುಡಾಗಿಸಿರುವ ಅಮಾನವೀಯ ಘಟನೆ ಬಂಡೀಪುರಕ್ಕೆ ಹೊಂದಿಕೊಂಡಂತಿರುವ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರದಲ್ಲಿ ನಡೆದಿದೆ.

ಚೇರನ್ ಎಂಬ 35 ವರ್ಷದ ಕುಮ್ಕಿ ಆನೆಯು ಸಂಪೂರ್ಣ ದೃಷ್ಟಿಯನ್ನೇ ಕಳೆದುಕೊಂಡಿದೆ. ಆನೆಯು ತನ್ನ ಆದೇಶ ಕೇಳಲಿಲ್ಲವೆಂಬ ಕಾರಣಕ್ಕೆ ರವಿ ಎಂಬಾತ ಕಣ್ಣಿಗೆ ಹೊಡೆದಿದ್ದಾನೆ ಎನ್ನಲಾಗಿದೆ. ಕೆಲ ವರ್ಷಗಳ ಹಿಂದೆ ಚೇರನ್ ಆನೆಯ ಬಲಗಣ್ಣು ಕೂಡ ಗಾಯಗೊಂಡು ಕಾಣಿಸುತ್ತಿರಲಿಲ್ಲ. ಈಗ ಮಾವುತನ ಗೆಳೆಯ ಮಾಡಿದ ಅಮಾನವೀಯ ಕೃತ್ಯಕ್ಕೆ ಚೇರನ್ ಸಂಪೂರ್ಣ ಕುರುಡಾಗಿದೆ.

ಈ ಕುರಿತು, ಪರಿಸರವಾದಿ ಜೋಸೆಫ್ ಹೂವರ್ ಈಟಿವಿ ಭಾರತದೊಂದಿಗೆ ಮಾತನಾಡಿ, ತನ್ನದಲ್ಲದ ತಪ್ಪಿಗೆ ಆನೆ ಅಂಧತ್ವಕ್ಕೆ ಒಳಗಾಗಿದೆ. ಎರಡು ವರ್ಷಗಳಿಂದಲೂ ಮಾವುತನ ಬದಲಿಗೆ ಆತನ ಸ್ನೇಹಿತನೇ ಅಕ್ರಮವಾಗಿ ಆನೆ ಪಾಲನೆ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು, ಅಲ್ಲಿನ ಆರ್​ಎಫ್ಒ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಅಮಾನವೀಯ ಕೃತ್ಯದ ಬಗ್ಗೆ ಅಲ್ಲಿನ ಸಿಎಂ, ಪರಿಸರ ಹೋರಾಟಗಾರ್ತಿ ಮನೇಕಾ ಗಾಂಧಿ ಗಮನಕ್ಕೆ ತರಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.