ETV Bharat / state

ಗ್ರಹಣದಲ್ಲೂ ಮಾದಪ್ಪನ ದರ್ಶನ, ಶಿವಗಂಗೆಯಲ್ಲಿ ಮೋಕ್ಷದ ನಂತರ ಅವಕಾಶ!

ಇಂದು ಕಂಕಣ ಸೂರ್ಯ ಗ್ರಹಣ ಹಿನ್ನಲೆ ರಾಜ್ಯದ ವಿವಿಧ ದೇವಾಲಯಗಳಲ್ಲಿ ಗ್ರಹಣ ಸಮಯದಲ್ಲಿ ದೇವರ ದರ್ಶನ ನಿಷೇಧಿಸಲಾಗಿತ್ತು. ಗ್ರಹಣ ನಂತರ ವಿಶೇಷ ಪೂಜೆ ಸಲ್ಲಿಸಲಾಯಿತು.

edwedde
ಗ್ರಹಣದಲ್ಲೂ ಮಾದಪ್ಪನ ದರ್ಶನ,ಇತ್ತ ಶಿವಗಂಗೆಯಲ್ಲಿ ಗ್ರಹಣ ನಂತರ ದೇವರ ದರ್ಶನ!
author img

By

Published : Dec 26, 2019, 6:25 PM IST

ಚಾಮರಾಜನಗರ: ಪ್ರಸಿದ್ಧ ತೀರ್ಥಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗ್ರಹಣದ ಸಮಯದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಸಹಸ್ರಾರು ಮಂದಿ ಮಾದಪ್ಪನ ದರ್ಶನ ಪಡೆದರು.

ಗ್ರಹಣದಲ್ಲೂ ಮಾದಪ್ಪನ ದರ್ಶನ,ಇತ್ತ ಶಿವಗಂಗೆಯಲ್ಲಿ ಗ್ರಹಣ ನಂತರ ದೇವರ ದರ್ಶನ!
ಬೆಳಗ್ಗೆ 6 ಗಂಟೆ ಒಳಗೆ ಮಹದೇಶ್ವರನಿಗೆ ಅಭಿಷೇಕ- ಪೂಜೆ ಮುಗಿಯುವುದರಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಯ್ಯಪ್ಪ ಮಾಲಾಧಾರಿಗಳು, ಅಮಾವಾಸ್ಯೆ ಪೂಜೆ ಸಲ್ಲಿಸುವ ಭಕ್ತರು ಮಲೆಮಹದೇಶ್ವರನ ದರ್ಶನ ಪಡೆದರು. ಇನ್ನು, ಪ್ರಸಾದ ವಿತರಣೆಯಲ್ಲೂ ಯಾವುದೇ ಬದಲಾವಣೆ ಇಲ್ಲದಿದ್ದರಿಂದ‌‌ ದರ್ಶನ ಪಡೆದ ಭಕ್ತರು ಪ್ರಸಾದ ಸೇವಿಸಿದರು. ಜಿಲ್ಲೆಯ ಎಲ್ಲ ದೇಗುಲಗಳು ಗ್ರಹಣ ಕಾಲದಲ್ಲಿ ಮುಚ್ಚಿದವು. ಗ್ರಹಣ ಬಿಟ್ಟ ಬಳಿಕ ದೇಗುಲ ಶುದ್ಧಿಗೊಳಿಸಿ, ವಿಶೇಷ ಪೂಜೆ ಸಲ್ಲಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.‌ ಇನ್ನೂ ಸೂರ್ಯಗ್ರಹಣ ಹಿನ್ನಲೆ ಪುರಾಣ ಪ್ರಸಿದ್ಧ ದಕ್ಷಿಣ ಕಾಶಿ ಶಿವಗಂಗೆಯ ಶ್ರೀ ಹೊನ್ನಾದೇವಿ ಸಮೇತ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಾಲಯಗಳನ್ನು ಮುಚ್ಚಲಾಗಿತ್ತು. ಸೂರ್ಯಗ್ರಹಣ ಮುಕ್ತಾಯವಾದ ಮೇಲೆ ದೇವಾಲಯವನ್ನ ಸ್ವಚ್ಚಗೊಳಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಟ್ಟರು.

Intro:ಗ್ರಹಣದಲ್ಲೂ ಮಾದಪ್ಪನ ದರ್ಶನ ಪಡೆದ ಭಕ್ತಸಾಗರ: ಉಳಿದ ದೇಗುಲಗಳಲ್ಲಿ ಪೂಜೆ ಆರಂಭ!

ಚಾಮರಾಜನಗರ: ಪ್ರಸಿದ್ಧ ತೀರ್ಥಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗ್ರಹಣದ ಸಮಯವೂ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಸಹಸ್ರಾರು ಮಂದಿ ಮಾದಪ್ಪನ ದರ್ಶನ ಪಡೆದರು.

Body:ಬೆಳಗ್ಗೆ 6 ಗಂಟೆ ಒಳಗೆಯೇ ಮಹದೇಶ್ವರನಿಗೆ ಅಭಿಷೇಕ- ಪೂಜೆ ಮುಗಿಯುವುದರಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಯ್ಯಪ್ಪ ಮಾಲಾಧಾರಿಗಳು, ಅಮಾವಾಸ್ಯೆ ಪೂಜೆ ಸಲ್ಲಿಸುವ ಭಕ್ತರು ಮಲೆಮಹದೇಶ್ವರನ ದರ್ಶನ ಪಡೆದರು. ಇನ್ನು, ಪ್ರಸಾದ ವಿತರಣೆಯಲ್ಲೂ ಯಾವುದೇ ಬದಲಾವಣೆ ಇಲ್ಲದಿದ್ದರಿಂದ‌‌ ದರ್ಶನ ಪಡೆದ ಭಕ್ತರು ಪ್ರಸಾದ ಸೇವಿಸಿದರು.

ಸಂಜೆ 4-6 ರವರೆಗೆ ದೇಗುಲ ಶುದ್ದೀಕರಣಗೊಳಿಸಿ ಅಭಿಷೇಕ ಮತ್ತು ಸಾಯಂಕಾಲದ ವಿಶೇಷ ಪೂಜೆಗಳು ನಡೆಯಲಿವೆ ಎಂದು ಅರ್ಚಕ ಮೂಲಗಳು ತಿಳಿಸಿವೆ.

ಜಿಲ್ಲೆಯ ಎಲ್ಲಾ ದೇಗುಲಗಳು ಗ್ರಹಣ ಕಾಲದಲ್ಲಿ ಮುಚ್ಚಿತ್ತು. ಗ್ರಹಣ ಬಿಟ್ಟ ಬಳಿಕ ದೇಗುಲವನ್ನು ಶುದ್ಧಿಗೊಳಿಸಿ, ವಿಶೇಷ ಪೂಜೆ ಸಲ್ಲಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.‌ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲೂ ಬೆಳಗ್ಗೆಯಿಂದ ಗ್ರಹಣ ಮುಗಿಯುವವರೆಗೇ ದೇವರ ದರ್ಶನಕ್ಕೆ ನಿರ್ಬಂಧಿಸಲಾಗಿತ್ತು. ಪ್ರವಾಸಿಗರು ದೇಗುಲ ಬಂದಾಗಿದ್ದರಿಂದ ಚುಮು- ಚುಮು ಚಳಿಯಲ್ಲಿ ಪೃಕೃತಿಯ ರಮ್ಯತೆ ಸವಿದರು ಎಂದು ದೇಗುಲದ ಅರ್ಚಕರಾದ ಕೆ.ವಾಸು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಗ್ರಹಣ ಕಾಲದಲ್ಲಿ ನವಗ್ರಹ ಹೋಮ, ಜಪ ಗ್ರಹಣ ಬಿಟ್ಟ ಬಳಿಕ ರಾಯರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಿಳಿಗಿರಿರಂಗನಾಥ ದೇಗುಲ, ಚಾಮರಾಜೇಶ್ವರ, ಹರಳುಕೋಟೆ ಆಂಜನೇಯ ಮತ್ತು ಜನಾರ್ದನಸ್ವಾಮಿ, ಗುಂಡ್ಲುಪೇಟೆಯ ಕೆಬ್ನೇಕಟ್ಟೆ ಶನೀಶ್ವರ, ಶಿಂಷಾ ಮಾರಮ್ಮನ ದೇಗುಲಗಳು ಬಂದ್ದಾಗಿತ್ತು.

ಒಣಕೆ ನಿಲ್ಲಿಸಿದವರು ಹಲವರು: ಗ್ರಹಣ ಕಾಲದಲ್ಲಿ ಹಿತ್ತಾಳೆ ಇಲ್ಲವೇ ಕಂಚಿನ ಹರಿವಾಣದ ಮೇಲೆ ಒಣಕೆ ನಿಲ್ಲಿಸಿದ ಘಟನೆ ಜಿಲ್ಲೆಯ ವಿವಿಧೆಡೆ ನಡೆಯಿತು. ಗ್ರಹಣ ಕಾಲದಲ್ಲಿ ಹೆಚ್ಚು ಗುರುತ್ವಾಕರ್ಷಣೆ ಇರುವುದರಿಂದ ಒಣಕೆ ನಿಲ್ಲಲಿದ್ದು ಗ್ರಹಣ ಬಿಟ್ಟ ಬಳಿಕ ಒಣಕೆ ಬೀಳಲಿದೆ ಎಂಬುದು ಗ್ರಾಮೀಣ ಭಾಗದ ನಂಬಿಕೆಯಾಗಿದೆ.‌

Conclusion:ಒಣಕೆ ಬಿದ್ದ ಬಳಿಕ ತಮಗೆ ಯಾವುದೇ ಕೆಡುಕಾಗದಿರಲೆಂದು ಸ್ನಾನ‌ ಮಾಡಿ ಪೂಜೆ ಸಲ್ಲಿಸುವುದು ವಾಡಿಕೆ‌.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.