ETV Bharat / state

ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ: 15 ಕಿ.ಮೀ ರಸ್ತೆ ಸರಿಪಡಿಸಿದ ಲಾರಿ ಚಾಲಕರು, ಮಾಲೀಕರ ಸಂಘ

Lorry drivers repaired road in Chamarajanagar: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಪುರದಿಂದ ಗರಿಕೆಕಂಡಿ ಗ್ರಾಮದವರೆಗಿನ ರಸ್ತೆಯನ್ನು ಲಾರಿ ಚಾಲಕರೇ ಸೇರಿಕೊಂಡು ದುರಸ್ತಿ ಮಾಡಿದ್ದಾರೆ.

repaired the 15 km road
ಕಾಯ್ದು ಕಾಯ್ದು ಸುಸ್ತಾಗಿ ತಾವೇ 15 ಕಿಮೀ ರಸ್ತೆ ಸರಿಪಡಿಸಿದ ಲಾರಿ ಚಾಲಕರು
author img

By ETV Bharat Karnataka Team

Published : Dec 1, 2023, 10:51 AM IST

Updated : Dec 1, 2023, 2:28 PM IST

ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ: 15 ಕಿ.ಮೀ ರಸ್ತೆ ಸರಿಪಡಿಸಿದ ಲಾರಿ ಚಾಲಕರು, ಮಾಲೀಕರ ಸಂಘ

ಚಾಮರಾಜನಗರ: ಕಳೆದ 10ರಿಂದ 15 ವರ್ಷಗಳಿಂದ ಜಿಲ್ಲೆಯ ಹನೂರು ತಾಲೂಕಿನ ರಾಮಪುರದಿಂದ ಗರಿಕೆಕಂಡಿ ಗ್ರಾಮದವರೆಗಿನ ರಸ್ತೆ ಹದಗೆಟ್ಟು ಹೋಗಿತ್ತು. ಇದನ್ನು ದುರಸ್ತಿ ಮಾಡಲು ಜನಪ್ರತಿನಿಧಿಗಳು, ಅಧಿಕಾರಿಗಳಿಗಾಗಿ ಲಾರಿ ಚಾಲಕರು ಕಾದು ಸುಸ್ತಾಗಿದ್ದರು. ಇದೀಗ ತಾವೇ ಆ ರಸ್ತೆಯನ್ನು ಸರಿಪಡಿಸಿದ್ದಾರೆ.

ಲಾರಿ ಚಾಲಕರು ಮತ್ತು ಮಾಲೀಕರ ಸಂಘವು ಹನೂರು ತಾಲೂಕಿನ ರಾಮಪುರ ಗ್ರಾಮದಿಂದ ಗರಿಕೆಕಂಡಿ ಗ್ರಾಮದವರೆಗಿನ ರಸ್ತೆಗೆ ಮಣ್ಣು ಹಾಕಿಸಿ ದುರಸ್ತಿ ಮಾಡಿದ್ದಾರೆ. ಈ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸಡ್ಡು ಹೊಡೆದಿದ್ದಾರೆ. ಒಟ್ಟು 15 ಕಿ.ಮೀ ದೂರದ ರಸ್ತೆಯ ಡಾಂಬರು ಕಿತ್ತು ಹೋಗಿ, ಜಲ್ಲಿ ಕಲ್ಲುಗಳೆಲ್ಲ ಮೇಲೆದ್ದು ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸತ್ಯಮಂಗಲ ವನ್ಯಪ್ರಾಣಿಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಚೆನ್ನೈ ಹೈಕೋರ್ಟ್ ಬಣ್ಣಾರಿ ದಿಂಬಂನಲ್ಲಿ ಅಧಿಕ ಭಾರದ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಆರು ಚಕ್ರದ ವಾಹನಗಳಿಗೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಿತ್ತು. ಇದರಿಂದ ಹನೂರು ಮಾರ್ಗದ ಮೂಲಕ ತಮಿಳುನಾಡಿಗೆ ಅತಿ ಹೆಚ್ಚು ಲಾರಿಗಳ ಸಂಚಾರ ಪ್ರಾರಂಭವಾದ್ದರಿಂದ ರಾಮಪುರ ಗರಿಕೆಕಂಡಿ ರಸ್ತೆ ಜಲ್ಲಿಕಲ್ಲುಗಳೆಲ್ಲ ಮೇಲೆದ್ದು ದ್ವಿಚಕ್ರವಾಹನವೂ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಅಧಿಕ ಸಂಖ್ಯೆಯಲ್ಲಿ ಲಾರಿಗಳು ಸಂಚಾರ ಪ್ರಾರಂಭಿಸಿದ ನಂತರ, ರಸ್ತೆ ಯಾವುದು, ಗುಂಡಿ ಯಾವುದು ಎಂಬುದೇ ತಿಳಿಯದಾಗಿತ್ತು. ತಮಿಳುನಾಡಿಗೆ ಜೋಳ ತುಂಬಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಇತ್ತೀಚೆಗೆ ನಡೆದಿತ್ತು.

ರಾಮಾಪುರ ಹಾಗೂ ಹನೂರು ಪಟ್ಟಣಕ್ಕೆ ಆಗಮಿಸುತ್ತಿದ್ದ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ಅನೇಕ. ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಬರಲೂ ಸಹ ಸಾಧ್ಯವಾಗದೇ ರೋಗಿಗಳು ಸಹ ಪರದಾಡಿದ ಉದಾಹರಣೆಗಳಿವೆ. ಆದರೂ ಕೂಡ ಸಂಬಂಧಪಟ್ಟ ಶಾಸಕರು ಹಾಗೂ ಅಧಿಕಾರಿಗಳು ರಸ್ತೆ ಅಭಿವೃದ್ಧಿಪಡಿಸಲು ವಿಫಲರಾಗಿದ್ದರಿಂದ ರಾಮಾಪುರ ಲಾರಿ ಅಸೋಸಿಯನ್ ಮಾಲೀಕರು ತಾವೇ ತಮ್ಮ ಸ್ವಂತ ಹಣದಲ್ಲಿ ಮಣ್ಣು ಹಾಕಿ ಗುಂಡಿ ಮುಚ್ಚಿಸುವ ಮೂಲಕ ತಮ್ಮ ವಾಹನಗಳ ಸುರಕ್ಷತೆಯನ್ನು ಕಾಪಾಡಿಕೊಂಡಿದ್ದಾರೆ.

"ಕಳೆದ ಮೂರು ಅವಧಿಯಲ್ಲಿ ನರೇಂದ್ರ ಶಾಸಕರಾಗಿದ್ದರು. ಅವರು ರಸ್ತೆ ಅಭಿವೃದ್ಧಿಪಡಿಸಲಿಲ್ಲ. ಇದೀಗ ಜೆಡಿಎಸ್ ಮಂಜುನಾಥ್ ಶಾಸಕರಾಗಿ ಆಯ್ಕೆಯಾಗಿ ಆರು ತಿಂಗಳು ಕಳೆದರೂ ಸಹ ರಸ್ತೆ ಅಭಿವೃದ್ಧಿಪಡಿಸಿಲ್ಲ. ಇದರಿಂದ ಬೇಸತ್ತ ಲಾರಿ ಅಸೋಸಿಯನ್ ಮಾಲೀಕರು ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಲಾರಿ ಮಾಲೀಕರಿಂದ ಹಣ ಸಂಗ್ರಹಿಸಿ ಎರಡೂವರೆ ಲಕ್ಷ ರೂ ವೆಚ್ಚದಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಲಾಗಿದೆ" ಎಂದು ರಾಮಾಪುರ ಲಾರಿ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ತಿಳಿಸಿದರು.

ಇದನ್ನೂ ಓದಿ: ಬಾಳೆ ತೋಟದಲ್ಲಿ ಚೆಂದುಳ್ಳಿ ಚೆಲುವೆಯರ ಮೈಮಾಟ! ದೃಷ್ಟಿ ಆಗಬಾರದೆಂದು ಶಿವಮೊಗ್ಗದ ರೈತನ ಐಡಿಯಾ!-ವಿಡಿಯೋ

Last Updated : Dec 1, 2023, 2:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.