ETV Bharat / state

ಚಾಮರಾಜನಗರದಲ್ಲಿ 500 ರೂ.ಗೆ ಖಾಸಗಿ ಶಾಲೆಯಲ್ಲಿ ಉತ್ತಮ ಶಿಕ್ಷಣ: ಹತ್ತು ಹಲವು ವೈಶಿಷ್ಟ್ಯಗಳಿಗೂ ಸಾಕ್ಷಿ!

ಕೊರೊನಾ ಸಂಕಷ್ಟದಲ್ಲೂ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಪೋಷಕರಿಗೆ ಗಾಯದ ಮೇಲೆ ಬರೆ ಎಳೆದಂತಿದೆ. ಕೆಲವೆಡೆ ಫೀಸ್‌ ಕಟ್ಟಿದರಷ್ಟೇ ಆನ್‌ಲೈನ್ ಪಾಠ ಎಂದು ಕಟ್ಟುನಿಟ್ಟಿನ ನೀತಿ ಅನುಸರಿಸುತ್ತಿವೆ. ಆದರೆ, ಇಲ್ಲೊಂದು ಖಾಸಗಿ ಶಾಲೆ ಅತೀ ಕಡಿಮೆ ಶುಲ್ಕದಲ್ಲಿ ಯಾವ ಅಂತಾರಾಷ್ಟ್ರೀಯ ಕಾನ್ವೆಂಟಿಗೂ ಕಡಿಮೆಯಿಲ್ಲದಂತೆ ಉತ್ತಮ ಶಿಕ್ಷಣ ನೀಡುತ್ತಿದೆ.

author img

By

Published : Jul 15, 2021, 7:48 PM IST

less fees more quality education in private school in chamarajanagar district
ಚಾಮರಾಜನಗರದಲ್ಲಿ 500 ರೂ.ಗೆ ಖಾಸಗಿ ಶಾಲೆಯಲ್ಲಿ ಉತ್ತಮ ಶಿಕ್ಷಣ; ಹತ್ತು ಹಲವು ವೈಶಿಷ್ಟ್ಯಗಳಿಗೂ ಸಾಕ್ಷಿ...

ಚಾಮರಾಜನಗರ: ರಾಮಸಮುದ್ರದಲ್ಲಿರುವ ದೀನಬಂಧು ಖಾಸಗಿ ಶಾಲೆ ಅತ್ಯಲ್ಪ ಶುಲ್ಕ ಪಡೆದು ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡ್ತಿದೆ. ಎಲ್‌ಕೆಜಿಗೆ ವಾರ್ಷಿಕ 500 ರೂ. ಶುಲ್ಕವಿದ್ದು, 1ನೇ ತರಗತಿಗೆ 750 ರೂ, 5, 6, 7ನೇ ತರಗತಿಗೆ ₹1,250, 8, 9 ಹಾಗೂ ಎಸ್ಸೆಸ್ಸೆಲ್ಸಿ ಮಕ್ಕಳಿಗೆ 1,750 ವಾರ್ಷಿಕ ಶುಲ್ಕ ನಿಗದಿಯಾಗಿದೆ. ಒಮ್ಮೆಗೆ ಶುಲ್ಕ ಪಾವತಿಸಲು ಅಸಾಧ್ಯವಾದರೆ ಪಾಲಕರು, 2-3 ಕಂತುಗಳಲ್ಲೂ ನೀಡಬಹುದಾಗಿದೆ.

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮಗ ಜಯದೇವ್ ಬಡ, ಹಿಂದುಳಿದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕೆಂದು 1999ರಲ್ಲಿ ಆರಂಭಿಸಿದ ಈ ಶಾಲೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಬಂದಿದ್ದು, ಈಗ ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿ ಅವರಿಗೆ ಶಿಕ್ಷಣ ನೀಡಲಾಗುತ್ತಿದೆ. ಕನ್ನಡ ಮಾಧ್ಯಮದ ಖಾಸಗಿ ಶಾಲೆಯಾಗಿರುವುದು ಮತ್ತೊಂದು ವಿಶೇಷ.

ಚಾಮರಾಜನಗರದಲ್ಲಿ 500 ರೂ.ಗೆ ಖಾಸಗಿ ಶಾಲೆಯಲ್ಲಿ ಉತ್ತಮ ಶಿಕ್ಷಣ; ಹತ್ತು ಹಲವು ವೈಶಿಷ್ಟ್ಯಗಳಿಗೂ ಸಾಕ್ಷಿ

ಅನಾಥ ಮಕ್ಕಳು, ತಂದೆ ಇಲ್ಲವೇ ತಾಯಿ ಕಳೆದುಕೊಂಡವರು, ಶಿಕ್ಷಣಕ್ಕೆ ಪೂರಕ ವಾತಾವರಣವಿಲ್ಲದ ಮಕ್ಕಳಿಗೆ ಊಟ, ವಸತಿಯೊಂದಿಗೆ ಶಿಕ್ಷಣ ನೀಡಲಾಗುತ್ತಿದೆ‌. ಈ ವರ್ಷದಲ್ಲಿ 430 ಮಕ್ಕಳು ದಾಖಲಾಗಿದ್ದಾರೆ. ಒಂದು ತರಗತಿಗೆ 35 ವಿದ್ಯಾರ್ಥಿಗಳನ್ನಷ್ಟೇ ದಾಖಲು ಮಾಡಿಕೊಳ್ಳಲಾಗುತ್ತದೆ. ಪ್ರತಿ ಮಗುವಿನ ಕಲಿಕೆಯ ಮೇಲೆ ನಿಗಾ ಇಡಲು ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿ ಮಗುವಿನ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿಕೊಡುತ್ತಿದೆ.

ಇದನ್ನೂ ಓದಿ: ಅಧಿಕಾರ ಕೈತಪ್ಪುವ ಭಯಕ್ಕೆ ಜಿಲ್ಲೆಗೆ ಕಾಲಿಡದ ಸಿಎಂಗಳು..‘ಇಸ್ತಕಪಾಲ್ ಮರ್ಯಾದೆ’ ಪಡೆದಿದ್ದು ಸಿದ್ದು ಮಾತ್ರ

ದಾನಿಗಳ ನೆರವಿನಿಂದಲೇ ಈ ಖಾಸಗಿ ಶಾಲೆ ನಡೆಯುತ್ತಿದ್ದು, ವಿಶಾಲ ಆಟದ ಮೈದಾನ, ಅಗತ್ಯ ಪೀಠೋಪಕರಣಗಳ ಜೊತೆಗೆ ಸುಸಜ್ಜಿಯ ಪ್ರಯೋಗಾಲಯಗಳಿವೆ. ಜೊತೆಗೆ, ಸೈನ್ಸ್ ಪಾರ್ಕ್, ವಿಜ್ಞಾನ ಮನೆ ಎಂಬ ಸೈನ್ಸ್ ಮ್ಯೂಸಿಯಂ ಕೂಡ ಇದ್ದು ಮಕ್ಕಳು ಪ್ರಯೋಗಾತ್ಮಕವಾಗಿ ಕಲಿಕೆ ನಡೆಸಲಿದ್ದಾರೆ.‌ ಮಧ್ಯಾಹ್ನದ ಬಿಸಿಯೂಟ ಉಚಿತವಾಗಿ ನೀಡುತ್ತಿದ್ದು, ಕೊರೊನಾ ಕಾಲದಲ್ಲಿ ಆನ್‌ಲೈನ್ ತರಗತಿಗಳನ್ನು ಪರಿಣಾಮಕಾರಿಗೆ ನಡೆಸಲಾಗುತ್ತಿದೆ.

ಇಂಡೋ ಮಿಮ್ ಎಂಬ ಸಂಸ್ಥೆಯು 2014 ರಿಂದ ದೀನಬಂಧು ಶಾಲೆಗೆ ಪ್ರತಿ ತಿಂಗಳು ಆರ್ಥಿಕ ಸಹಾಯ ನೀಡಿತ್ತಿದೆ. ಇಲ್ಲಿನ ಶಿಕ್ಷಕರಿಗೆ ಕೊರೊನಾ ಕಾಲದಲ್ಲಿ ವೇತನ ಕಡಿತ ಮಾಡಿಲ್ಲ. ಶುಲ್ಕದ ಬರೆ, ಡೊನೇಷನ್ ಹಾವಳಿ ನಡುವೆ ದಾನಿಗಳ ಸಹಕಾರ ಪಡೆದು ಖಾಸಗಿ ಕನ್ನಡ ಮಾಧ್ಯಮ ಶಾಲೆಯೊಂದು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಮಾದರಿ ಮತ್ತು ಅನುಕರಣೀಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.