ಚಾಮರಾಜನಗರ: ನರಹಂತಕ ಹುಲಿರಾಯನನ್ನು ಸೆರೆಹಿಡಿದ ಬಳಿಕ ಹುಂಡಿಪುರದ ಜಮೀನೊಂದರಲ್ಲಿ ಚಿರತೆ ಕಾಣಿಸಿಕೊಂಡು ಮತ್ತೆ ಆತಂಕ ಉಂಟುಮಾಡಿದೆ.
ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯ ಹುಂಡಿಪುರ ಗ್ರಾಮಸ್ಥರಿಗೆ ಒಂದಾದ ನಂತರ ಮತ್ತೊಂದು ಪೀಕಲಾಟ ಶುರುವಾಗಿದೆ. ಈ ಹಿಂದೆ ನರಹಂತಕ ಹುಲಿ ಹೆಜ್ಜೆ ಗುರುತಿದ್ದ ಹೆಚ್.ಪಿ.ಮಹೇಂದ್ರ ಎಂಬವರ ಜಮೀನಿನಲ್ಲಿ ಈಗ ಚಿರತೆ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಗಾಬರಿಗೊಂಡಿದ್ದಾರೆ.

ಬಂಡೀಪುರ ಬಳಿಕ ಬಿಆರ್ಟಿಯಲ್ಲಿ ಹುಲಿ ಭೀತಿ: ಇನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಳಿಕ ಈಗ ಬಿಳಿಗಿರಿ ರಂಗನತಿಟ್ಟು ವ್ಯಾಪ್ತಿಯ ಚಾಮರಾಜನಗರ ತಾಲೂಕಿನ ಹೊಂಗಲವಾಡಿ ಗ್ರಾಮದಲ್ಲಿ ಗುರುಸಿದ್ದಯ್ಯ ಎಂಬವರ ಹಸುವನ್ನು ಹುಲಿಯೊಂದು ತಿಂದುಹಾಕಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಮನೆಮಾಡಿದೆ.