ಚಾಮರಾಜನಗರ: ಮುಳ್ಳುಹಂದಿಯನ್ನು ಬೇಟೆಯಾಡಿ ಬಾಯಿಗೆಲ್ಲಾ ಮುಳ್ಳು ಚುಚ್ಚಿಸಿಕೊಂಡು ಚಿರತೆಮರಿಯೊಂದು ಮೃತಪಟ್ಟಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ಜೋನ್ ವಲಯದ ಬೋಗಯ್ಯನಹುಂಡಿ ಗ್ರಾಮದಲ್ಲಿ ನಡೆದಿದೆ.
ಗುರುಸ್ವಾಮಪ್ಪ ಎಂಬುವವರಿಗೆ ಸೇರಿದ ಜಮೀನಿನಲ್ಲಿ 6-8 ತಿಂಗಳ ಚಿರತೆಯ ಕಳೇಬರ ಪತ್ತೆಯಾಗಿದ್ದು ಮೃತಪಟ್ಟು 20 ದಿನಗಳಾಗಿದೆ ಎಂದು ಅಂದಾಜಿಸಲಾಗಿದೆ. ಮೃತ ಚಿರತೆಯ ಎಲ್ಲಾ ಉಗುರುಗಳು, ಹಲ್ಲುಗಳು ಹಾಗೂ ಇತರ ಅಂಗಾಗಳು ಸುರಕ್ಷಿತವಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಚಿರತೆಯು ಮೃತಪಟ್ಟಿದ್ದ ಸ್ಥಳದ ಪಕ್ಕದಲ್ಲಿ ಮುಳ್ಳಂದಿಯ ಮುಳ್ಳುಗಳು ಹಾಗೂ ಇತರೆ ಭಾಗಗಳು ದೊರೆತಿವೆ. ಇನ್ನೂ ಶವಪರೀಕ್ಷೆ ವೇಳೆಯೂ ಹೊಟ್ಟೆಯೊಳಗೆ ಮುಳ್ಳುಹಂದಿಯ ಮುಳ್ಳುಗಳು ಹಾಗೂ ಬಾಯಿಯ ಭಾಗಗಳು ಇರುವುದರಿಂದ ಚಿರತೆ ಮುಳ್ಳುಹಂದಿಯನ್ನು ತಿಂದು ಮೃತಪಟ್ಟಿದೆ ಎಂದು ಮೇಲ್ನೋಟಕ್ಕೆ ಖಚಿತವಾಗಿದೆ.
ಇದನ್ನೂ ಓದಿ:ಚಾಮರಾಜನಗರ: ಬೇಟೆ ಹುಡುಕಿ ಬಂದು ಜಮೀನಿನ ಪಂಪ್ ಹೌಸ್‌ನಲ್ಲಿ ಚಿರತೆ ಲಾಕ್..!