ETV Bharat / state

ಧ್ರುವನಾರಾಯಣ ಹುಟ್ಟೂರಲ್ಲಿ ನೀರವ ಮೌನ: ತಂದೆ - ತಾಯಿ ಸಮಾಧಿ ಬಳಿ ಅಂತ್ಯಕ್ರಿಯೆ, ಸಕಲ ಸಿದ್ಧತೆ

author img

By

Published : Mar 11, 2023, 7:27 PM IST

Updated : Mar 11, 2023, 8:47 PM IST

ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ನಿಧನ - ಹುಟ್ಟೂರು ಹೆಗ್ಗವಾಡಿ ಗ್ರಾಮದಲ್ಲಿ ನೀರವ ಮೌನ - ತಂದೆ ತಾಯಿ ಸಮಾಧಿ ಬಳಿಯಲ್ಲೇ ಧ್ರುವನಾರಾಯಣ ಅಂತ್ಯಕ್ರಿಯೆ

kpcc-working-president-dhruvnarayana-funeral-will-held-at-chamarajnagar
ಧ್ರುವನಾರಾಯಣ ಹುಟ್ಟೂರಲ್ಲಿ ನೀರವ ಮೌನ : ತಂದೆ-ತಾಯಿ ಸಮಾಧಿ ಬಳಿ ಅಂತ್ಯಕ್ರಿಯೆ, ಸಕಲ ಸಿದ್ಧತೆ
ಧ್ರುವನಾರಾಯಣ ಹುಟ್ಟೂರಲ್ಲಿ ನೀರವ ಮೌನ: ತಂದೆ - ತಾಯಿ ಸಮಾಧಿ ಬಳಿ ಅಂತ್ಯಕ್ರಿಯೆ, ಸಕಲ ಸಿದ್ಧತೆ

ಚಾಮರಾಜನಗರ : ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಇಹಲೋಕ ತ್ಯಜಿಸಿದ್ದಾರೆ. ಅವರ ಹುಟ್ಟೂರು ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಊರ ಮಗನನ್ನು ಕಳೆದುಕೊಂಡು ಜನರು ಕಂಗಲಾಗಿದ್ದಾರೆ. ಇಲ್ಲಿನ ಹೆಗ್ಗವಾಡಿ ಗ್ರಾಮದ ತೋಟದಲ್ಲಿ ತಂದೆ - ತಾಯಿ ಸಮಾಧಿಯ ಬಳಿಯಲ್ಲೇ ಧ್ರುವನಾರಾಯಣ ಅವರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ. ಈ ಸಂಬಂಧ ಗ್ರಾಮದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ.

ನಾಳೆ ಹುಟ್ಟೂರು ಹೆಗ್ಗವಾಡಿಯಲ್ಲಿ ಅಂತ್ಯಕ್ರಿಯೆ : ಹೆಗ್ಗವಾಡಿ ಗ್ರಾಮದ ಅಂಬೇಡ್ಕರ್ ಸಮಯದಾಯ ಭವನ ಸಮೀಪ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೂ ಮುನ್ನ ಚಾಮರಾಜನಗರದ ಕಾಂಗ್ರೆಸ್ ಕಚೇರಿಗೆ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಅಲ್ಲಿ, ಪಕ್ಷದ ವತಿಯಿಂದ ಗೌರವ ಸಲ್ಲಿಸಿ ಚಾಮರಾಜನಗರದ ವಿವಿಧ ಬೀದಿಗಳಲ್ಲಿ ಅಂತಿಮ ಯಾತ್ರೆ ನಡೆಸಲಾಗುತ್ತದೆ. ರಾತ್ರಿ 8 ಗಂಟೆ ಸುಮಾರಿಗೆ ಹುಟ್ಟೂರಿಗೆ ಪಾರ್ಥಿವ ಶರೀರ ತಲುಪಲಿದೆ.

ಈ ಹಿನ್ನಲೆ ರಾತ್ರಿ ಇಡೀ ಜಾಗರಣೆ, ಭಜನೆ ಕಾರ್ಯಕ್ರಮ ನಡೆಯಲಿದೆ. ಇಂದು ರಾತ್ರಿ ಮೂರರಿಂದ ಐದು ಸಾವಿರ ಮಂದಿಗೆ ಊಟ, ಭಾನುವಾರ ಬೆಳಗ್ಗೆ 10 ಸಾವಿರ ಮಂದಿಗೆ ಉಪಹಾರ ವ್ಯವಸ್ಥೆಗೆ ಸಿದ್ಧತೆ ಮಾಡಲಾಗುತ್ತಿದೆ. ತೋಟದಲ್ಲಿನ ತಂದೆ-ತಾಯಿ ಸಮಾಧಿ ಸಮೀಪವೇ ಧ್ರುವನಾರಾಯಣ ಅವರ ಅಂತ್ಯ ಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಹಿಂದೂ ಧಾರ್ಮಿಕ ವಿಧಿ-ವಿಧಾನದಂತೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ತೋಟದಲ್ಲಿ ಹೂಳಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಭಾನುವಾರದ ನಡೆಯುವ ಅಂತ್ಯಕ್ರಿಯೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ ಸೇರಿದಂತೆ ರಾಜ್ಯದ ಕಾಂಗ್ರೆಸ್ ನಾಯಕರುಗಳು ಮತ್ತಿತರರು ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಧ್ರುವನಾರಾಯಣ ಹುಟ್ಟೂರಲ್ಲಿ ನೀರವ ಮೌನ

1 ದಿನ ಮುಂಚೆ ಹುಟ್ಟೂರಿನ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದ ಧ್ರುವನಾರಾಯಣ : ಆರ್‌.ಧ್ರುವನಾರಾಯಣ ನಿಧನದ ಸುದ್ದಿ ರಾಜಕೀಯ ವಲಯದಲ್ಲಿ ದೊಡ್ಡ ಆಘಾತವನ್ನೇ ಉಂಟು ಮಾಡಿದ್ದರೆ ಇನ್ನೊಂದೆಡೆ ಶುಕ್ರವಾರವಷ್ಟೇ ಹುಟ್ಟೂರಿನ ಮನೆಯಲ್ಲಿ ವಿಶ್ರಾಂತಿ ಪಡೆದು ಶನಿವಾರ ಧ್ರುವನಾರಾಯಣ ಅವರು ಇಲ್ಲ ಎಂಬ ಮಾತನ್ನು ಗ್ರಾಮಸ್ಥರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

ನಂಜನಗೂಡಿನಲ್ಲಿ ಪಕ್ಷದ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಹೆಗ್ಗವಾಡಿಗೆ ಬಂದು ವಿಶ್ರಾಂತಿ ಪಡೆದು ಎಳನೀರು ಸೇವಿಸಿ ಹೋಗಿದ್ದರು. ಈಗ ಅವರಿಲ್ಲ ಎನ್ನುವುದನ್ನು ನಮಗೆ ನಂಬಲಾಗುತ್ತಿಲ್ಲ. ತಮ್ಮ ದೇಹದ ಒಂದು ಭಾಗವೇ ಇಲ್ಲವೇನೋ ಎಂಬಾಂತಾಗಿದೆ. ಅವರು ಜನರ ಕಷ್ಟ ಕಾರ್ಪಣ್ಯಕ್ಕೆ ನೆರವಾಗುತ್ತಿದ್ದರು. ಮನೆಯ ಸದಸ್ಯರಂತಿದ್ದರು ಎಂದು ಅವರ ಒಡನಾಟ ನೆನೆದು ಜನರು ಕಣ್ಣೀರು ಹಾಕುತ್ತಿದ್ದಾರೆ.

ಧ್ರುವ ನಾರಾಯಣ ಅಂತಿಮ ದರ್ಶನ ಪಡೆದ ಗಣ್ಯರು : ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದುಬಂದಿತ್ತು. ಇಲ್ಲಿನ ವಿಜಯನಗರದ ನಿವಾಸಕ್ಕೆ ತಮ್ಮ ನೆಚ್ಚಿನ ನಾಯಕನನ್ನು ನೋಡಲು ಜನರು ದೌಡಾಯಿಸಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ದಾವಣಗೆರೆಯ ಪ್ರಜಾಧ್ವನಿ ಯಾತ್ರೆಯನ್ನು ರದ್ದುಗೊಳಿಸಿ ಹೆಲಿಕಾಪ್ಟರ್​ ಮೂಲಕ ಮೈಸೂರಿಗೆ ಆಗಮಿಸಿ ಧ್ರುವ ನಾರಾಯಣ ಅವರ ದರ್ಶನ ಪಡೆದರು. ಅಷ್ಟೇ ಅಲ್ಲದೆ ಸುತ್ತೂರು ಶ್ರೀ ಹಾಗೂ ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಸಚಿವ ಸೋಮಣ್ಣ, ಶಾಸಕ ಮಹೇಶ್, ಯತೀಂದ್ರ ಸಿದ್ದರಾಮಯ್ಯ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವಾರು ಗಣ್ಯರು ಮೃತರ ಅಂತಿಮ‌ ದರ್ಶನ ಪಡೆದರು.

ಇದನ್ನೂ ಓದಿ : ಅಂದು ಮಹಾದೇವಪ್ರಸಾದ್ ಇಂದು ಧ್ರುವನಾರಾಯಣ್​: ಬಲಿಷ್ಠ ನಾಯಕರನ್ನು ಕಳೆದುಕೊಂಡ ಕಾಂಗ್ರೆಸ್​

Last Updated : Mar 11, 2023, 8:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.