ETV Bharat / state

RSS ನವರು ಭಾರತದ ನಿಜವಾದ ತಾಲಿಬಾನಿಗಳು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ - ಆರ್​ಎಸ್​ಎಸ್​ ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಆಕ್ರೋಶ

ತಾಲಿಬಾನಿಗಳು ಯಾವ ರೀತಿ ಅವರ ಧರ್ಮ ಪಾಲನೆ ಮಾಡುತ್ತಾರೋ ಅದೇ ರೀತಿ ಭಾರತದಲ್ಲಿ RSS ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಗಂಭೀರ ಆರೋಪ ಮಾಡಿದ್ದಾರೆ.

kpcc-president-r-dhruvanarayana-outrage-against-rss
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ
author img

By

Published : Aug 18, 2021, 4:09 PM IST

ಚಾಮರಾಜನಗರ: ದೇಶದ ನಿಜವಾದ ತಾಲಿಬಾನಿಗಳು ಆರ್​ಎಸ್ಎಸ್ ನವರು ಎಂದು CAA ವಿರೋಧಿಗಳು ಅಫ್ಘಾನಿಸ್ತಾನ ನೋಡಿ ತಿಳಿಯಲಿ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಾಲಿಬಾನಿಗಳು ಯಾವ ರೀತಿ ಅವರ ಧರ್ಮ ಪಾಲನೆ ಮಾಡುತ್ತಾರೋ ಅದೇ ರೀತಿ, ಭಾರತದಲ್ಲಿ ಆರ್ ಎಸ್ ಎಸ್ ಮಾಡುತ್ತಿದೆ. ತಾಲಿಬಾನಿಗೂ ಸಿಎಎಗೂ ಹೇಗೆ ಸಂಬಂಧ ಕಲ್ಪಿಸುತ್ತಾರೆ. ತಾಲಿಬಾನ್​​​​​​ನಿಂದ ದೇಶಕ್ಕೆ ಆಗುವ ಅನಾಹುತದ ಬಗ್ಗೆ ಕಟ್ಟೆಚ್ಚರ ವಹಿಸುವ ಕುರಿತು ಸಂಸದರು ಯೋಚಿಸಲಿ ಎಂದು ಕಿವಿಮಾತು ಹೇಳಿದರು.

ಅಸ್ಸೋಂಗೆ ಬಾಂಗ್ಲಾದೇಶದಿಂದ ಮುಸ್ಲಿಂರೇ ಜಾಸ್ತಿ ಬಂದಿದ್ದಾರೆ ಎಂಬ ದೃಷ್ಟಿಕೋನದಿಂದ ಸಿಎಎ, ಎನ್ ಆರ್ ಸಿ ಜಾರಿಗೆ ತಂದರು. ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ತಿಳಿದ ಬಳಿಕ ಸುಮ್ಮನಾದರು. ಮೊದಲೇ ಬಿಜೆಪಿ ಕೋಮುವಾದಿ ಪಕ್ಷ. ಆ ಕೋಮುವಾದಿತನವನ್ನೇ ಇಟ್ಟುಕೊಂಡು ಮಾತನಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಓದಿ: ನೆರೆ ಸಂತ್ರಸ್ತರಿಗೆ ಕೂಡಲೇ ಸೂಕ್ತ ಪರಿಹಾರ ಬಿಡುಗಡೆ ಮಾಡಿ : ಸಿಎಂಗೆ ಸಿದ್ದರಾಮಯ್ಯ ಪತ್ರ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.