ಚಾಮರಾಜನಗರ: ಜಿಲ್ಲೆಯಲ್ಲಿಂದು 38 ಮಂದಿ ಸೋಂಕಿತರು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 2,619 ಕ್ಕೆ ಏರಿಕೆಯಾಗಿದ್ದು ಮಹಾಮಾರಿಗೆ ಮೂವರು ಬಲಿಯಾಗಿದ್ದಾರೆ.
27 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 518 ಆಗಿದೆ. ಐಸಿಯುನಲ್ಲಿ 12 ಮಂದಿ ದಾಖಲಾಗಿದ್ದು, 149 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 383 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಇಂದು ಪತ್ತೆಯಾದ ಸೋಂಕಿತರಲ್ಲಿ ಗುಂಡ್ಲುಪೇಟೆ ತಾಲೂಕಿನ 7 ಮಂದಿ, ಚಾಮರಾಜನಗರದ 20 , ಕೊಳ್ಳೇಗಾಲ ತಾಲೂಕಿನ 11 ಮಂದಿ ಇದ್ದಾರೆ. ಇಂದು ಬಿಡುಗಡೆಯಾದವರಲ್ಲಿ 2 ವರ್ಷ, 8 ವರ್ಷದ ಮಕ್ಕಳು ಸೇರಿದಂತೆ ಮೂವರು ವೃದ್ಧರು ಕೊರೊನಾ ಜಯಿಸಿದ್ದಾರೆ.
ಮೃತರ ವಿವರ:
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ 70 ವರ್ಷದ ವ್ಯಕ್ತಿ ಕಳೆದ ಸೆ. 1 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಚಾಮರಾಜನಗರ ತಾಲೂಕಿನ ಮೂಡಲಪುರ ಗ್ರಾಮದ 60 ವರ್ಷದ ವ್ಯಕ್ತಿ ಕಳೆದ 27 ರಂದು ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿ ಇಂದು ಸಾವನ್ನಪ್ಪಿದ್ದಾರೆ. ಕೊಳ್ಳೇಗಾಲ ತಾಲೂಕಿನ ಹೊಸೂರು ಗ್ರಾಮದ 70 ವರ್ಷದ ವ್ಯಕ್ತಿ ಕಳೆದ 25 ರಂದು ದಾಖಲಾಗಿ ಇಂದು ಅಸುನೀಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 53 ಮಂದಿ ಸೋಂಕಿತರು ಬಲಿಯಾಗಿದ್ದಾರೆ.