ಕೊಳ್ಳೆಗಾಲ/ಚಾಮರಾಜನಗರ: ಕೊರೊನಾ ಬಾರದಂತೆ ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ವರ್ಗ ಒಂದು ಕಡೆಯಾದರೆ, ಗ್ರಾಮೀಣ ಪ್ರದೇಶದ ಜನರು ಮಾತ್ರ ಕೊರೊನಾ ಕಾಯಿಲೆಯಿಂದ ಬಚಾವಾಗಲು ಮೌಢ್ಯತೆಯ ಮೊರೆ ಹೋಗಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಮೌಢತ್ಯೆಯ ಮೊರೆ ಹೋದ ಜನ ಕೊರೊನಾ ವೈರಸ್ ತಡೆಗೆ ಸರ್ಕಾರ ವಿವಿಧ ಮುನ್ನೆಚ್ಚರಿಕೆ ವಹಿಸಿ ಜನರಲ್ಲಿ ಜಾಗೃತಿ ಮೂಡಿಸಿದರೂ ಜನರು ಅದನ್ನು ಎಲ್ಲ ಕಡೆ ಪಾಲನೆ ಮಾಡುತ್ತಿಲ್ಲ. ಕೊಳ್ಳೆಗಾಲ ತಾಲೂಕಿನ ಬೆಂಡರಹಳ್ಳಿ ಗ್ರಾಮದಲ್ಲಿ ಕೋವಿಡ್-19 ಬಾರದಿರಲಿ ಎಂದು ಸಂಪ್ರದಾಯದ ಹೆಸರಿನಲ್ಲಿ ಮೌಢ್ಯತೆಗೆ ಮಾರು ಹೋಗಿರುವ ಜನ ಗ್ರಾಮದ ಪ್ರತಿ ಮನೆ ಮನೆಗಳಿಗೂ ಕೊರೊನಾ ವೈರಸ್ ನಂತಿರುವ ದತ್ತೂರಿ ಗಿಡದ ಮುಳ್ಳು ಕಾಯಿಯ ಜೊತೆಗೆ ಬೇವಿನ ಎಲೆಗಳನ್ನು ಅರಿಶಿನ ,ಕುಂಕುಮ ಹಾಕಿ ಪೂಜೆ ಸಲ್ಲಿಸಿ ಮನೆಯ ಬಾಗಿಲ ಮುಂದೆ ಕಟ್ಟಿದ್ದಾರೆ.ಸರ್ಕಾರದ ಜೊತೆ ವೈದ್ಯ ವರ್ಗ, ಪೌರಕಾರ್ಮಿಕರು, ಪೊಲೀಸ್ ಇಲಾಖೆ ಕೊರೊನಾ ತೊಲಗಿಸಲು ಶ್ರಮಿಸುತ್ತಿದ್ದಾರೆ. ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ಜನ ಈ ರೀತಿಯ ಕ್ರಮಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂಬುದು ಪ್ರಶ್ನೆ.