ಕೊಳ್ಳೇಗಾಲ: ಪಟ್ಟಣದ ಮಠದ ಬೀದಿ ಬಡವಾಣೆಯ ನಿವಾಸಿಗಳು ಭಾರತದಿಂದ ಕೊರೊನಾ ಸೋಂಕು ಓಡಿಸಲು ಮಾರಮ್ಮನ ಮೊರೆ ಹೋಗಿದ್ದಾರೆ.
ಒರ್ವ ವ್ಯಕ್ತಿಗೆ ಬೇವಿನ ಸೊಪ್ಪನ್ನು ನಡು ಹಾಗೂ ತಲೆಗೆ ಕಟ್ಟಿ ಬಡವಾಣೆಯ ಪ್ರತಿ ಮನೆಯ ಬಾಗಿಲಿಗೂ ಕಳುಹಿಸಿ ನಿವಾಸಿಗಳಿಂದ ಅರಶಿಣ ಮಿಶ್ರಿತ ನೀರನ್ನು ಹಾಕುವ ಮೂಲಕ ಕೊರೊನಾ ನಿಗ್ರಹಿಸಲು ಮಾರಮ್ಮನ ಪೂಜೆ ಮಾಡಿದ್ದಾರೆ.
ಈ ಬಗ್ಗೆ ಸ್ಥಳೀಯ ನಿವಾಸಿ ಟಿ.ವಿ.ಎಸ್.ಪ್ರಭು ಮಾತನಾಡಿ, ದೇಶ ಕೊರೊನಾ ಭೀತಿ ಎದುರಿಸುತ್ತಿದೆ. ಸೊಂಕು ದಿನದಿಂದ ದಿನಕ್ಕೆ ಹರಡುತ್ತಿದೆ. ಈ ಕಾರಣ ನಾವು ನಮ್ಮೂರ ಮಾರಮ್ಮನ ಮೋರೆ ಹೋಗಿದ್ದು, ಕೊರೊನಾ ಸೋಂಕು ಹೆಚ್ಚಾಗದಂತೆ ಮಾರಿಯ ಸಂಪ್ರದಾಯ ಮಾಡುತ್ತಿದ್ದೇವೆ. ಇದರಿಂದ ಕೊರೊನಾ ತೊಲಗುತ್ತದೆ ಎಂಬುದು ನಿವಾಸಿಗಳ ಭಾವನೆಯಾಗಿದೆ ಎಂದರು.
ಸರ್ಕಾರ ಕೋವಿಡ್ -19 ತಡೆಗೆ ವಿವಿಧ ಕ್ರಮಗಳನ್ನು ತೆಗದುಕೊಂಡರೆ, ಗ್ರಾಮಾಂತರ ಪ್ರದೇಶಗಳ ಜನರು ಧಾರ್ಮಿಕ ಆಚರಣೆ ಮಾಡಿ ಕೊರೊನಾ ನಿಗ್ರಹಕ್ಕೆ ಮುಂದಾಗಿದ್ದಾರೆ.