ETV Bharat / state

ಕೊಳ್ಳೇಗಾಲ: ಜೀವನದಲ್ಲಿ ಜುಗುಪ್ಸೆಗೊಂಡು ಯುವಕ ನೇಣಿಗೆ ಶರಣು - Kempanapalya village of Kollegala taluk

ಕೊಳ್ಳೇಗಾಲ ತಾಲ್ಲೂಕಿನ ಕೆಂಪನಪಾಳ್ಯ ಗ್ರಾಮದಲ್ಲಿ ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ.

Kollegala: Boy who fed up in life committed suicide
ಕೊಳ್ಳೇಗಾಲ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕ ನೇಣಿಗೆ ಶರಣು
author img

By

Published : Jan 3, 2021, 9:24 PM IST

ಕೊಳ್ಳೇಗಾಲ: ಜೀವನದಲ್ಲಿ ಜುಗುಪ್ಸೆಗೊಂಡ ಯುವಕನೊಬ್ಬ ನೇಣಿಗೆ ಕೊರಳೊಡ್ಡಿದ ಘಟನೆ ತಾಲ್ಲೂಕಿನ ಕೆಂಪನಪಾಳ್ಯ ಗ್ರಾಮದಲ್ಲಿ ನಡೆದಿದೆ.

ಕೆಂಪನಪಾಳ್ಯ ಗ್ರಾಮದ ಜಯಶಂಕರ್‌ ಮಗನಾದ ವಿಶಾಲ್(20) ಮೃತ ದುರ್ದೈವಿ. ಈತನ ತಾಯಿ ಮುಡುಕುತೊರೆಯಲ್ಲಿ ಪೂಜೆ ಮುಗಿಸಿ ಹಿಂತಿರುಗಿ ಬಂದಿದ್ದಾರೆ. ಈ ವೇಳೆ ಮನೆಯ ಬಾಗಿಲು ತೆರೆದು ನೋಡಿದಾಗ ಮಗನ ದೇಹ ನೇಣು ಬಿಗಿದ ಸ್ಥಿತಿಯಲ್ಲಿದ್ದುದನ್ನು ಕಂಡು ಗಾಬರಿಯಿಂದ‌ ಕೂಗಿಕೊಂಡಿದ್ದಾರೆ. ಆಗ ಅಲ್ಲಿ ನೆರೆದ ಜನರು ವಿಶಾಲ್‌ನನ್ನು ಫ್ಯಾನ್‌ನಿಂದ ಕೆಳಕ್ಕಿಳಿಸಿ ಪಟ್ಟಣದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಪರಿಶೀಲಿಸಿ ಆತ ಸಾವಿಗೀಡಾಗಿದ್ದಾನೆ ಎಂದು ತಿಳಿಸಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.