ಕೊಳ್ಳೇಗಾಲ: ಸರ್ಕಾರ ವಾಟರ್ಮನ್ಗಳಿಗೆ ನೇರ ವೇತನ ನೀಡಬೇಕು. ಗುತ್ತಿಗೆ ಆಧಾರಿತ ವ್ಯವಸ್ಥೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ಪಟ್ಟಣದ ನಗರಸಭೆ ಕಚೇರಿ ಎದುರು ವಾಟರ್ಮನ್ಗಳು ಪ್ರತಿಭಟನೆ ನಡೆಸಿದರು.
ಸರ್ಕಾರವು ಮಲತಾಯಿ ಧೋರಣೆ ಮಾಡಬಾರದು. ನಾವು ಕೂಡ ಕಷ್ಟ ಪಟ್ಟು, ಕೆಸರು, ಮಣ್ಣನ್ನು ಮೈಗಂಟಿಸಿಕೊಂಡು ರಸ್ತೆಗಳಿದು ಕೆಲಸ ಮಾಡುತ್ತೇವೆ. ನಮ್ಮನ್ನು ಸಹ ಪರಿಗಣಿಸಿ ವಾಟರ್ಮನ್ಗಳ ಹೊರಗುತ್ತಿಗೆ ರದ್ದುಪಡಿಸಿ ನೇರ ವೇತನ ನೀಡಬೇಕೆಂದು ಒತ್ತಾಯಿಸಿದರು.

ಈ ವೇಳೆ ವಾಟರ್ಮನ್ ಪುಟ್ಟಮಲ್ಲ ಮಾತನಾಡಿ, ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ 20 ವರ್ಷಗಳಿಂದಲೂ ವಾಟರ್ಮನ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ ಇಲ್ಲಿಯವರೆಗೂ ವೇತನದಲ್ಲಿ ತಾರತಮ್ಯ ಧೋರಣೆ ಅನುಭವಿಸುತ್ತಿದ್ದೇವೆ. ಪೌರಕಾರ್ಮಿಕರಂತೆ ನಾವು ಕಷ್ಟ ಪಟ್ಟು ಕೆಲಸ ಮಾಡುತಿದ್ದೇವೆ. ಆದ್ದರಿಂದ ನೇರ ವೇತನ ನೀಡಿ, ಗುತ್ತಿಗೆ ರದ್ದುಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.