ETV Bharat / state

ಚಾಮರಾಜನಗರದಲ್ಲಿ ಗಾಳಿಪಟ ಉತ್ಸವ: ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆ

ದೇಸಿ ಪರಂಪರೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಚಾಮರಾಜನಗರದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿದೆ.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಧ್ಯಕ್ಷತೆಯಲ್ಲಿ ಗಾಳಿಪಟ ಉತ್ಸವದ ಕುರಿತು ಸಭೆ ನಡೆಯಿತು.
author img

By

Published : Oct 26, 2019, 9:00 AM IST

ಚಾಮರಾಜನಗರ: ಕರ್ನಾಟಕ ಜಾನಪದ ಪರಿಷತ್ ವತಿಯಿಂದ ರಾಜ್ಯ ಮಟ್ಟದ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿದೆ. ಉತ್ಸವವು ಈ ಬಾರಿ ಆಕರ್ಷಕವಾಗಿ ನಡೆಸಲು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಧ್ಯಕ್ಷತೆಯಲ್ಲಿ ನಿನ್ನೆ ಸಭೆ ನಡೆಯಿತು.

ಗಾಳಿಪಟ ಉತ್ಸವಕ್ಕೆ ಸೂಕ್ತ ಸ್ಥಳ, ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಅದಕ್ಕೆ ಪೂರಕವಾಗಿರುವ ಅವಶ್ಯಕ ರೂಪುರೇಷೆ ಹಾಗೂ ಇನ್ನಿತರ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಉತ್ಸವದಲ್ಲಿ ಗಾಳಿಪಟ ಸಂಸ್ಕೃತಿ ಹುಟ್ಟಿಕೊಂಡ ಬಗೆ ಹಾಗೂ ಉತ್ಸವಗಳ ಇತಿಹಾಸದ ಬಗೆಗೆ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಗಾಳಿಪಟ ತಯಾರಿಕೆಯ ಪ್ರಾತ್ಯಕ್ಷಿಕೆ ನಡೆಸಬೇಕು. ನೇಕಾರರು ಹಾಗೂ ಜವಳಿ ಕುಶಲಕರ್ಮಿಗಳನ್ನು ತೊಡಗಿಸಿಕೊಂಡು ವಿಭಿನ್ನವಾಗಿ ಕಾರ್ಯಕ್ರಮ ವ್ಯವಸ್ಥೆ ಮಾಡಬೇಕು. ಈ ಮೂಲಕ ಗಾಳಿಪಟ ಪರಂಪರೆಗೆ ಉತ್ತೇಜನ ನೀಡುವಂತಾಗಬೇಕು ಡಿಸಿ ಸೂಚಿಸಿದ್ದಾರೆ.

ವಯೋಮಾನದ ಅನ್ವಯ 4 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, 12 ವರ್ಷಕ್ಕಿಂತ ಕಡಿಮೆ, 13- 22, 23ಕ್ಕಿಂತ ಅಧಿಕ ವಯೋಮಾನ ಹಾಗೂ ಗುಂಪುಗಗಳಲ್ಲಿ ಸ್ಪರ್ಧೆ ಇರಲಿದ್ದು, ಎಲ್ಲಾ ವಿಭಾಗಗಳಲ್ಲೂ ಪ್ರತ್ಯೇಕವಾಗಿ ಮೊದಲ ನಾಲ್ಕು ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡಲು ಸಭೆಯಲ್ಲಿ ಚರ್ಚಿಸಲಾಗಿದೆ.

ರಾಜ್ಯದ ವಿವಿಧೆಡೆ ಈ ಉತ್ಸವವನ್ನು ಈ ಹಿಂದೆ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಆಯೋಜಿಸಿದ್ದು, ಈ ಬಾರಿ ಚಾಮರಾಜನಗರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕ ಜೀವನದಿಂದ ಮರೆಯಾಗುತ್ತಿರುವ ದೇಸಿ ಪರಂಪರೆಯನ್ನು ಉಳಿಸುವುದು ಪರಿಷತ್ತಿನ ಉದ್ದೇಶವಾಗಿದೆ.

Intro:ಗಡಿಜಿಲ್ಲೆಯಲ್ಲಿ ಈ ಬಾರಿ
ಗಾಳಿಪಟ ಉತ್ಸವ: ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ ಸ್ಪರ್ಧೆ

ಚಾಮರಾಜನಗರ: ರಾಜ್ಯ ಮಟ್ಟದ ಗಾಳಿಪಟ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, ಈ ಉತ್ಸವ ಆಕರ್ಷಕವಾಗಿ ಮೂಡಿ ಬರಲು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಯಿತು.

Body:ಕರ್ನಾಟಕ ಜಾನಪದ ಪರಿಷತ್ ಗಾಳಿಪಟ ಉತ್ಸವ ಆಯೋಜಿಸುತ್ತಿದ್ದು ಇನ್ನು ಸೂಕ್ತ ಸ್ಥಳ, ದಿನಾಂಕ ನಿಗದಿಯಾಗಿಲ್ಲ. ಗಾಳಿಪಟ ಉತ್ಸವಕ್ಕೆ ಪೂರಕವಾಗಿರುವ ಅವಶ್ಯಕ ರೂಪುರೇಷೆ ಹಾಗೂ ಇನ್ನಿತರ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಉತ್ಸವದಲ್ಲಿ ಗಾಳಿಪಟ ಸಂಸ್ಕೃತಿ ಹುಟ್ಟಿಕೊಂಡ ಬಗೆ ಹಾಗೂ ಉತ್ಸವಗಳ ಇತಿಹಾಸದ ಬಗೆಗೆ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಗಾಳಿಪಟ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ನಡೆಸಬೇಕು. ನೇಕಾರರು ಹಾಗೂ ಜವಳಿ ಕುಶಲಕರ್ಮಿಗಳನ್ನು ತೊಡಗಿಸಿಕೊಂಡು ವಿಭಿನ್ನವಾಗಿ ಕಾರ್ಯಕ್ರಮ ವ್ಯವಸ್ಥೆ ಮಾಡಬೇಕು. ಈ ಮೂಲಕ ಗಾಳಿಪಟ ಪರಂಪರೆಗೆ ಉತ್ತೇಜನ ನೀಡುವಂತಾಗಬೇಕು ಡಿಸಿ ಸೂಚಿಸಿದ್ದಾರೆ.

ವಯೋಮಾನದ ಅನ್ವಯ 4 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, 12 ವರ್ಷಕ್ಕಿಂತ ಕಡಿಮೆ, 13- 22, 23ಕ್ಕಿಂತ ಅಧಿಕ ವಯೋಮಾನ ಹಾಗೂ ಗುಂಪು ವಿಭಾಗಗಳಲ್ಲಿ ಸ್ಪರ್ಧೆ ಇರುಲಿದ್ದು, ಎಲ್ಲಾ ವಿಭಾಗಗಳಲ್ಲೂ ಪ್ರತ್ಯೇಕವಾಗಿ ಮೊದಲ ನಾಲ್ಕು ಸ್ಥಾನ ಪಡೆದವರಿಗೆ ನಗದು ಬಹುಮಾನ ಇರಲಿದೆ ಎಂದು ತಿಳಿದುಬಂದಿದೆ.

Conclusion:ರಾಜ್ಯದ ವಿವಿಧೆಡೆ ಈ ಉತ್ಸವವನ್ನು ಈ ಹಿಂದೆ ಆಯೋಜಿಸಿದ್ದು ಈ ಬಾರಿ ಚಾಮರಾಜನಗರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕ ಜೀವನದಿಂದ ಮರೆಯಾಗುತ್ತಿರುವ ದೇಸಿ ಪರಂಪರೆಯನ್ನು ಉಳಿಸುವುದು ಜಾನಪದ ಪರಿಷತ್ತಿನ ಉದ್ದೇಶವಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.