ರಾಜ್ಯ ಸರ್ಕಾರದ ಕರ್ನಾಟಕ ಅರಣ್ಯ ಇಲಾಖೆಯು ವಿವಿಧ ವ್ಯಾಪ್ತಿಗಳಲ್ಲಿ ಖಾಲಿ ಇರುವ ಆನೆ ಕಾವಾಡಿಗ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಕೊಡಗು, ಚಾಮರಾಜನಗರ, ಮೈಸೂರು ಮತ್ತು ಶಿವಮೊಗ್ಗದ ಅರಣ್ಯ ವ್ಯಾಪ್ತಿಯಲ್ಲಿ ಹುದ್ದೆಗಳ ಭರ್ತಿ ನಡೆಯಲಿದೆ. ಒಟ್ಟು 19 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನೆ ನಿರ್ವಹಣೆಯಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ: ಚಾಮರಾಜನಗರ ವ್ಯಾಪ್ತಿಯಲ್ಲಿ 6, ಕೊಡಗು ಜಿಲ್ಲೆಯಲ್ಲಿ 4, ಮೈಸೂರಿನಲ್ಲಿ 5 ಮತ್ತು ಶಿವಮೊಗ್ಗದಲ್ಲಿ ನಾಲ್ಕು ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಪೌರತ್ವ ಹೊಂದಿರಬೇಕು. ಇಲ್ಲವೇ ಭಾರತದಲ್ಲಿ ಖಾಯಂ ಆಗಿ ನೆಲೆಸುವ ಉದ್ದೇಶ ಹೊಂದಿದ್ದು, ಇತರೆ ದೇಶಗಳಿಂದ ವಲಸೆ ಬಂದ ಭಾರತೀಯ ಮೂಲದ ವ್ಯಕ್ತಿ ಆಗಿರಬೇಕು. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ವ್ಯಾಪ್ತಿಯ ಅಧಿಸೂಚಿತ ಅರಣ್ಯದೊಳಗೆ ವಾಸವಾಗಿರಬೇಕು.
ವೇತನ: ಅಭ್ಯರ್ಥಿಗಳಿಗೆ ಮಾಸಿಕ 18,600 ರೂಪಾಯಿಯಿಂದ 32,600 ರೂವರೆಗೆ ವೇತನ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ಕನ್ನಡ ಮಾತನಾಡುವ, ಅರ್ಥೈಸಿಕೊಳ್ಳುವ ಜ್ಞಾನ ಹೊಂದಿರುವುದು ಕಡ್ಡಾಯ. ಗರಿಷ್ಟ ವಯೋಮಿತಿ 35 ವರ್ಷ. ಪ. ಜಾ, ಪ. ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ 40 ವರ್ಷ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಟ ವಯೋಮಿತಿ 35 ವರ್ಷವಾಗಿದೆ.
ಹುದ್ದೆ ಆಯ್ಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು. ಆನೆ ನಿರ್ವಹಣೆಯಲ್ಲಿ ಉತ್ತಮ ಅನುಭವ ಹೊಂದಿರಬೇಕು.
ಇದನ್ನೂ ಓದಿ: ಎಸ್ಬಿಐನಲ್ಲಿ 868 ಬ್ಯುಸಿನೆಸ್ ಕರೆಸ್ಪಾಂಡೆಂಟ್ ಫೆಸಿಲಿಟೇಟರ್ ಹುದ್ದೆಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವ ವಿಧಾನ: ರಾಜ್ಯ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಅಭ್ಯರ್ಥಿಗಳು ಅರ್ಜಿ ನಮೂನೆ ಪಡೆಯಬಹುದಾಗಿದೆ. ಈ ಅರ್ಜಿಯೊಂದಿಗೆ ಕೇಳಲಾಗಿರುವ ಅಗತ್ಯ ದಾಖಲಾತಿಗಳನ್ನು ಭರ್ತಿ ಮಾಡಿ ಸಂಬಂಧಿತ ಅರಣ್ಯ ವ್ಯಾಪ್ತಿಯ ಅರಣ್ಯಾಧಿಕಾರಿಗಳಿಗೆ ಖುದ್ದು ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಯಾವುದೇ ರೀತಿಯ ಸ್ವೀಕೃತಿ ಪತ್ರಗಳಲ್ಲಿ ಪಡೆಯಲಾಗುವುದಿಲ್ಲ. ಅಧಿಸೂಚನೆಯೊಂದಿಗೆ ಪ್ರಕಟಿಸಿರುವ ಅಧಿಕೃತ ಅರ್ಜಿ ನಮೂನೆಯಲ್ಲಿ ಮಾತ್ರ ಅರ್ಜಿಯನ್ನು ಬೆರಳಚ್ಚು ಅಥವಾ ಕಂಪ್ಯೂಟರ್ ಪ್ರಿಂಟ್ ಮಾಡಿಸಿ, ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆ ದಿನಾಂಕ: ಮಾರ್ಚ್ 15ರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್ 29.
ಸಂಪೂರ್ಣ ವಿವರ ಮತ್ತು ಅಧಿಕೃತ ಅಧಿಸೂಚನೆ, ಅರ್ಜಿ ಸಮೂನೆ ಸೇರಿದಂತೆ ಪ್ರಮುಖ ಮಾಹಿತಿಗೆ ಅಭ್ಯರ್ಥಿಗಳು aranya.gov.in ಅಥವಾ https://kfdrecruitment.in/ ಜಾಲತಾಣಕ್ಕೆ ಭೇಟಿ ನೀಡಿ.
ಇದನ್ನೂ ಓದಿ: ಕೆಪಿಎಸ್ಸಿ ನೇಮಕಾತಿ: 242 ಲೆಕ್ಕ ಸಹಾಯಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ