ಚಾಮರಾಜನಗರ: ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಇಂದು ಗುಂಡ್ಲುಪೇಟೆ ಪಟ್ಟಣ, ತೆರಕಣಾಂಬಿಯ ಪೊಲೀಸ್ ಠಾಣೆ, ಚೆಕ್ ಪೋಸ್ಟ್ಗಳನ್ನು ಪರಿಶೀಲಿಸಿ, ಸಿಬ್ಬಂದಿ ಕಾರ್ಯವೈಖರಿ ಪರಮಾರ್ಶಿಸಿದರು.
ಗುಂಡ್ಲುಪೇಟೆಯ ಐಬಿ ಬಳಿ ಇರುವ ಚೆಕ್ ಪೋಸ್ಟ್ ನಲ್ಲಿ N-95 ಮಾಸ್ಕ್, ಗ್ಲೌಸ್ ಧರಿಸದ ಹೋಂ ಗಾರ್ಡ್ ಸಿಬ್ಬಂದಿಯನ್ನು ಕಂಡು ಆತನಿಗೆ ಏಕೆ ಮಾಸ್ಕ್, ಗ್ಲೌಸ್ ಕೊಟ್ಟಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ, ಡಿವೈಎಸ್ಪಿ ಪ್ರಿಯದರ್ಶಿನಿ ತಮ್ಮ ಜೀಪಿನಲ್ಲಿರಿಸಿದ್ದ ಮಾಸ್ಕ್ ಕೊಟ್ಟರು.
ಇದಾದ ನಂತರ, ಗುಂಡ್ಲುಪೇಟೆ ಪ್ರವೇಶದ್ವಾರದ ಬಳಿಯಿರುವ ಚೆಕ್ ಪೋಸ್ಟ್ಗೆ ಭೇಟಿ ಕೊಟ್ಟು ಜನರೊಟ್ಟಿಗೆ ಸೌಜನ್ಯದಿಂದ ವರ್ತಿಸಿ, ಬೈಕ್ ನಲ್ಲಿ ಯಾರಾದರೂ ಬಂದಾಗ ಮೊದಲು ಕಾರಣ ಕೇಳಿ, ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಮುಲಾಜಿಲ್ಲದೇ ಕೇಸು ಹಾಕಿ ಎಂದು ಸಿಬ್ಬಂದಿಗೆ ಸೂಚಿಸಿದರು.
ಪೊಲೀಸ್ ಸಿಬ್ಬಂದಿ 3 ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮಾರ್ಗಸೂಚಿ ಉಲ್ಲಂಘಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಚಾಮರಾಜನಗರ ಜನರಿಗೆ ವಿನಂತಿಸುವುದೇನೆಂದರೆ ಪೊಲೀಸರಿಗೆ ಸಹಕಾರ ಕೊಡಿ ಎಂದರು.