ಚಾಮರಾಜನಗರ: ಕೊರೊನಾ ಪರೀಕ್ಷೆ 48,020 ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 515ಕ್ಕೆ ಇಳಿದಿದೆ. ಕಳೆದ 1 ವಾರದಿಂದ 500ರ ಸಮೀಪವೇ ಸಕ್ರಿಯ ಪ್ರಕರಣಗಳಿರುವ ಮೂಲಕ ಕೊರೊನಾ ಆತಂಕ ಕಡಿಮೆಯಾಗಿದೆ.
![Increased number of cure for corona nfection](https://etvbharatimages.akamaized.net/etvbharat/prod-images/kn-cnr-04-corona-count-av-7202614_09092020182834_0909f_1599656314_936.jpg)
ಇಲ್ಲಿಯವರೆಗೆ 2771 ಸೋಂಕಿತ ಪ್ರಕರಣ ವರದಿಯಾಗಿದ್ದು, 2,200 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇವರಲ್ಲಿ, ಬರೋಬ್ಬರಿ 365 ಮಂದಿ ಹೋಂ ಐಸೋಲೇಷನ್ನಲ್ಲಿದ್ದು, ಕೋವಿಡ್ ಜಯಿಸಿದ್ದಾರೆ.
ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರು ಜಿಲ್ಲೆಯಲ್ಲಿ 37,324 ಮಂದಿ ಇದ್ದಾರೆ.
ಇಂದಿನ ಬುಲೆಟಿನ್: ಇಂದು 46 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 49 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 57 ಮಂದಿ ಬಲಿಯಾಗಿದ್ದು, 504 ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ.