ETV Bharat / state

ಈರುಳ್ಳಿ ಮೂಟೆ ಮಧ್ಯದಲ್ಲಿ ಸ್ಪಿರಿಟ್ ಸಾಗಣೆ.. ಸಿಕ್ಕಿಬಿದ್ದ ಕಳ್ಳರು - ಚಾಮರಾಜನಗರ ಕ್ರೈಂ ನ್ಯೂಸ್

ಈರುಳ್ಳಿ ಮೂಟೆಗಳ ಮಧ್ಯೆ ಸ್ಪಿರಿಟ್ ಸಾಗಿಸುತ್ತಿದ್ದ ಖದೀಮರನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ.

ಸ್ಪಿರಿಟ್ ಸಾಗಾಟ
ಸ್ಪಿರಿಟ್ ಸಾಗಾಟ
author img

By

Published : Nov 4, 2022, 7:30 PM IST

ಚಾಮರಾಜನಗರ: ಈರುಳ್ಳಿ ಮೂಟೆಗಳ ಮಧ್ಯದಲ್ಲಿ ಸ್ಪಿರಿಟ್ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಶುಕ್ರವಾರ ಚಾಮರಾಜನಗರ ತಾಲೂಕಿನ ಪುಣಜನೂರು ಚೆಕ್ ಪೋಸ್ಟ್​ನಲ್ಲಿ ನಡೆದಿದೆ.

ಕೇರಳ ಮೂಲದ ಹರಿ ಹಾಗೂ ವಿನೋದ್ ಬಂಧಿತ ಆರೋಪಿಗಳು‌. ಈಚರ್ ವಾಹನದಲ್ಲಿ ಇವರು ಈರುಳ್ಳಿ ಸಾಗಿಸುವ ಸೋಗಿನಲ್ಲಿ ಸ್ಪಿರಿಟ್ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಪಿಐ ಆನಂದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರಿಂದ 7 ಸಾವಿರ ಲೀಟರ್ ಸ್ಪಿರಿಟ್ ಹಾಗೂ ಈಚರ್ ವಾಹವನ್ನು ವಶಪಡಿಸಿಕೊಳ್ಳಲಾಗಿದೆ. ಕೇರಳಕ್ಕೆ ಇವರು ಈ ಸ್ಪಿರಿಟ್ ಸಾಗಣೆ ಮಾಡುತ್ತಿದ್ದರು ಎನ್ನಲಾಗಿದ್ದು, ಚಾಮರಾಜನಗರ ಪೂರ್ವ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

(ಓದಿ:ನಿತ್ಯ ಕೋತಿ ಉಪಟಳದಿಂದ ರೋಸಿಹೋದ ಕನ್ನೇರಿ ಜನ: ಕಾಳುಕಡಿ, ಕಾಫಿ ಬೀಜ ಮಂಗಗಳ ಪಾಲು)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.