ETV Bharat / state

ಹುಲಿಯಮ್ಮನ ದೇಗುಲ ಪ್ರವೇಶಕ್ಕೆ ಗುರುತಿನ ಚೀಟಿ, ಮುಚ್ಚಳಿಕೆ ಪತ್ರ ಕಡ್ಡಾಯ...! - Identity card

ಹುಲಿಯಮ್ಮ ದೇವಿಗೆ ಪೂಜೆ ಮಾಡಲೇಬೇಕು ಎಂಬ ಭಕ್ತರು ವಲಯ ಅರಣ್ಯಾಧಿಕಾರಿಗೆ ಮುಚ್ಚಳಿಕೆ ಬರೆದುಕೊಟ್ಟು ಗುರುತಿನ ಚೀಟಿ ಲಗತ್ತಿಸಿ ಕೊಡಬೇಕು ಎಂದು ಸಿಎಫ್ಒ ಬಾಲಚಂದ್ರ ಸೂಚಿಸಿದ್ದಾರೆ.

ಹುಲಿಯಮ್ಮನ ದೇಗುಲ ಪ್ರವೇಶಕ್ಕೆ ಗುರುತಿನ ಚೀಟಿ, ಮುಚ್ಚಳಿಕೆ ಪತ್ರ ಕಡ್ಡಾಯ!
author img

By

Published : Sep 20, 2019, 4:30 AM IST

ಚಾಮರಾಜನಗರ: ಹುಲಿ ದಾಳಿಗೊಳಗಾಗಿ ಚೌಡಹಳ್ಳಿ ಗ್ರಾಮದ ಶಿವಮಾದಯ್ಯ ಮೃತಪಟ್ಟ ಬಳಿಕ ಹುಲಿಯಮ್ಮನ ದೇಗುಲಕ್ಕೆ ಪ್ರವೇಶ ಬೇಕೆ ಬೇಕು ಎನ್ನುವವರು ಗುರುತಿನ ಚೀಟಿ ನೀಡಬೇಕಿದೆ.

ಹುಲಿಯಮ್ಮನ ದೇಗುಲ ಪ್ರವೇಶಕ್ಕೆ ಗುರುತಿನ ಚೀಟಿ, ಮುಚ್ಚಳಿಕೆ ಪತ್ರ ಕಡ್ಡಾಯ!

ಹೌದು, ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಸಮೀಪದ ಹುಲಿಯಮ್ಮ ದೇಗುಲ ಸುತ್ತಮುತ್ತ ಹುಲಿ, ಚಿರತೆ, ಆನೆಗಳ ಸಂಚಾರ ಹೆಚ್ಚಿರುವುದರಿಂದ ಮತ್ತು ಹುಲಿಯೊಂದು ವ್ಯಕ್ತಿಯೊರ್ವನನ್ನು ಕೊಂದ ಬಳಿಕ ಅರಣ್ಯ ಇಲಾಖೆ ಎಚ್ಚೆತ್ತು ಹುಲಿಯಮ್ಮ ದೇಗುಲ ಪ್ರವೇಶ ನಿರ್ಬಂಧಿಸಿದ್ದು, ಈ ಸಂಬಂಧ ಡಿಸಿ ಅವರಿಗೆ ಅರಣ್ಯ ಇಲಾಖೆ ಪ್ರಸ್ತಾವನೆಯನ್ನು ಸಲ್ಲಿಸಿದೆ‌.

ಒಂದು ವೇಳೆ ಹುಲಿಯಮ್ಮ ದೇವಿಗೆ ಪೂಜೆ ಮಾಡಲೇಬೇಕು ಎಂಬ ಭಕ್ತರು ವಲಯ ಅರಣ್ಯಾಧಿಕಾರಿಗೆ ಮುಚ್ಚಳಿಕೆ ಬರೆದುಕೊಟ್ಟು ಗುರುತಿನ ಚೀಟಿ ಲಗತ್ತಿಸಿ ಕೊಡಬೇಕು ಎಂದು ಸಿಎಫ್ಒ ಬಾಲಚಂದ್ರ ಸೂಚಿಸಿದ್ದಾರೆ.

ಹುಲಿಯಮ್ಮ ದೇವರಿಗೆ ಪ್ರಾಣಿ ಬಲಿ ಕೊಡುವ ಸಂಪ್ರದಾಯವಿದ್ದು ಬಲಿಪ್ರಾಣಿಗಳ ತ್ಯಾಜ್ಯ ಮತ್ತು ದೇಗುಲದ ಮುಂಭಾಗ ಕೆರೆ ಇರುವುದರಿಂದ ವನ್ಯಜೀವಿಗಳ ಸಂಚಾರ ದೇಗುಲ ಸುತ್ತಮುತ್ತ ಹೆಚ್ಚಿರುವುದುರಿಂದ ಭಕ್ತರು ಅಪಾಯ ತಂದೊಡ್ಡಿಕೊಳ್ಳುವುದು ಬೇಡ ಎಂಬ ಎಚ್ಚರಿಕೆ‌ ಅರಣ್ಯ ಇಲಾಖೆಯದ್ದಾಗಿದೆ.

ಇನ್ನು, ಸರ್ವೇಸಾಮಾನ್ಯವಾಗಿ ಭಕ್ತರ ಸೋಗಿನಲ್ಲಿ ಬರುವ ಪುಂಡರು ದೇಗುಲ ಆವರಣದಲ್ಲೇ ಗುಂಡು-ತುಂಡು ಪಾರ್ಟಿ ಮಾಡುವುದಕ್ಕೆ ದೇಗುಲ ಪ್ರವೇಶ ನಿರ್ಬಂಧಿಸಿರುವುದರಿಂದ ಬ್ರೇಕ್ ಬಿದ್ದಂತಾಗಿದೆ.

Intro:ಹುಲಿಯಮ್ಮನ ದೇಗುಲ ಪ್ರವೇಶಕ್ಕೆ ಗುರುತಿನ ಚೀಟಿ, ಮುಚ್ಚಳಿಕೆ ಪತ್ರ ಕಡ್ಡಾಯ!

ಚಾಮರಾಜನಗರ: ಹುಲಿ ದಾಳಿಗೊಳಾಗಿ ಚೌಡಹಳ್ಳಿ ಗ್ರಾಮದ ಶಿವಮಾದಯ್ಯ ಮೃತಪಟ್ಟ ಬಳಿಕ ಹುಲಿಯಮ್ಮನ ದೇಗುಲಕ್ಕೆ ಪ್ರವೇಶ ಬೇಕೆಬೇಕು ಎನ್ನುವವರು ಗುರುತಿನ ಚೀಟಿ ನೀಡಬೇಕಿದೆ.

Body:ಹೌದು, ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಸಮೀಪದ ಹುಲಿಯಮ್ಮ ದೇಗುಲ ಸುತ್ತಮುತ್ತ ಹುಲಿ, ಚಿರತೆ, ಆನೆಗಳ ಸಂಚಾರ ಹೆಚ್ಚಿರುವುದರಿಂದ ಮತ್ತು ಹುಲಿಯೊಂದು ವ್ಯಕ್ತಿಯೊರ್ವನನ್ನು ಕೊಂದ ಬಳಿಕ ಅರಣ್ಯ ಇಲಾಖೆ ಎಚ್ಚೆತ್ತು ಹುಲಿಯಮ್ಮ ದೇಗುಲ ಪ್ರವೇಶ ನಿರ್ಬಂಧಿಸಿದ್ದು, ಈ ಸಂಬಂಧ ಡಿಸಿ ಅವರಿಗೆ ಅರಣ್ಯ ಇಲಾಖೆ ಪ್ರಸ್ತಾವನೆಯನ್ನು ಸಲ್ಲಿಸಿದೆ‌.

ಒಂದು ವೇಳೆ ಹುಲಿಯಮ್ಮ ದೇವಿಗೆ ಪೂಜೆ ಮಾಡಲೇ ಬೇಕು ಎಂಬ ಭಕ್ತರು ವಲಯ ಅರಣ್ಯಾಧಿಕಾರಿಗೆ ಮುಚ್ಚಳಿಕೆ ಬರೆದುಕೊಟ್ಟು ಗುರುತಿನ ಚೀಟಿ ಲಗತ್ತಿಸಿ ಕೊಡಬೇಕು ಎಂದು ಸಿಎಫ್ಒ ಬಾಲಚಂದ್ರ ಸೂಚಿಸಿದ್ದಾರೆ.

ಹುಲಿಯಮ್ಮ ದೇವರಿಗೆ ಪ್ರಾಣಿ ಬಲಿ ಕೊಡುವ ಸಂಪ್ರದಾಯವಿದ್ದು ಬಲಿಪ್ರಾಣಿಗಳ ತ್ಯಾಜ್ಯ ಮತ್ತು ದೇಗುಲದ ಮುಂಭಾಗ ಕೆರೆ ಇರು ವುದರಿಂದ ವನ್ಯಜೀವಿಗಳ ಸಂಚಾರ ದೇಗುಲ ಸುತ್ತಮುತ್ತ ಹೆಚ್ಚಿರುವುದುರಿಂದ ಭಕ್ತರು ಅಪಾಯ ತಂದೊಡ್ಡಿಕೊಳ್ಳುವುದು ಬೇಡ ಎಂಬ ಎಚ್ಚರಿಕೆ‌ ಅರಣ್ಯ ಇಲಾಖೆಯದ್ದಾಗಿದೆ.

Conclusion:ಇನ್ನು, ಸರ್ವೇಸಾಮಾನ್ಯವಾಗಿ ಭಕ್ತರ ಸೋಗಿನಲ್ಲಿ ಬರುವ ಪುಂಡರು ದೇಗುಲ ಆವರಣದಲ್ಲೇ ಗುಂಡು-ತುಂಡು ಪಾರ್ಟಿ ಮಾಡುವುದಕ್ಕೆ ದೇಗುಲ ಪ್ರವೇಶ ನಿರ್ಬಂಧಿಸಿರುವುದರಿಂದ ಬ್ರೇಕ್ ಬಿದ್ದಂತಾಗಿದೆ.

ಬೈಟ್- ಬಾಲಚಂದ್ರ, ಬಂಡೀಪುರ ಸಿಎಫ್ಒ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.