ETV Bharat / state

ಡೆಪ್ಯುಟಿ ಸ್ಪೀಕರ್ ಆಗ್ತೀನಿ, ವರ್ಷದ ಬಳಿಕ ಮಿನಿಸ್ಟರ್ ಮಾಡುವ ಭರವಸೆ ಇದೆ: ಶಾಸಕ ಪುಟ್ಟರಂಗಶೆಟ್ಟಿ - ಚಾಮರಾಜನಗರ ವಿಧಾನಸಭಾ ಕ್ಷೇತ್ರ

ಈ ಹಿಂದೆ ಡೆಪ್ಯುಟಿ ಸ್ಪೀಕರ್​ ಸ್ಥಾನವನ್ನು ಪುಟ್ಟರಂಗಶೆಟ್ಟಿ ತಿರಸ್ಕರಿಸಿದ್ದರು. ಇದೀಗ ಮನವೊಲಿಕೆ ನಂತರ ಒಪ್ಪಿಕೊಂಡಿದ್ದಾರೆ.

MLA Puttarangashetty
ಶಾಸಕ ಪುಟ್ಟರಂಗಶೆಟ್ಟಿ
author img

By

Published : Jun 8, 2023, 3:25 PM IST

ಡೆಪ್ಯುಟಿ ಸ್ಪೀಕರ್ ಆಗ್ತೀನಿ, ವರ್ಷದ ಬಳಿಕ ಮಿನಿಸ್ಟರ್ ಮಾಡುವ ಭರವಸೆ ಇದೆ: ಶಾಸಕ ಪುಟ್ಟರಂಗಶೆಟ್ಟಿ

ಚಾಮರಾಜನಗರ: ಉಪಸಭಾಪತಿ ಆಗಲು ನಿರಾಕರಿಸಿದ್ದ ಚಾಮರಾಜನಗರ ಶಾಸಕ ಸಿ‌. ಪುಟ್ಟರಂಗಶೆಟ್ಟಿ ಕೊನೆಗೂ ಡೆಪ್ಯೂಟಿ ಸ್ಪೀಕರ್ ಆಗಲು ಒಪ್ಪಿದ್ದಾರೆ. ಇದನ್ನೂ ಅವರೇ ಚಾಮರಾಜನಗರದಲ್ಲಿ ಸ್ಪಷ್ಟಪಡಿಸಿದ್ದಾರೆ. ಇಂದು ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿಕೊಂಡಿದ್ದೇನೆ. ಒಂದು ವರ್ಷದ ನಂತರ ಕಾಂಗ್ರೆಸ್ ವರಿಷ್ಠರು ಸಚಿವ ಸ್ಥಾನ ಕೊಡುವ ಬಗ್ಗೆ ಮಾತು ನೀಡಿದ್ದಾರೆ. ಹಾಗಾಗಿ ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದರು.

ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿದ್ದು, ವರಿಷ್ಠರು ಹೇಳಿದ್ದನ್ನು ಒಪ್ಪಿಕೊಳ್ಳಲೇಬೇಕು. ಸಚಿವ ಸ್ಥಾನ ತಪ್ಪಿದ್ದರಿಂದ ಬೇಸರವಾದರೂ ಹೇಳಿಕೊಳ್ಳಲೂ ಆಗಲ್ಲ. ಹೈಕಮಾಂಡ್ ಕೊಟ್ಟ ಜವಾಬ್ದಾರಿ ನಿಭಾಯಿಸುತ್ತೇನೆ. ಒಂದು ವರ್ಷ ಕೆಲಸ ಮಾಡು ನಂತರ ಸಚಿವ ಸ್ಥಾನ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಕೂಡ ತಿಳಿಸಿದ್ದಾರೆ ಎನ್ನುವ ಮೂಲಕ ವರ್ಷದ ಬಳಿಕ ಸಂಪುಟ ಬದಲಾಗಲಿದೆ ಎಂಬುದನ್ನೂ ಪರೋಕ್ಷವಾಗಿ ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿಗೆ ಜಯ ಗಳಿಸಿ ಸೋಲಿಲ್ಲದ ಸರದಾರ ಎಂದು ಪುಟ್ಟರಂಗಶೆಟ್ಟಿ ಎನಿಸಿಕೊಂಡಿದ್ದು, ಜಿಲ್ಲೆಯ ಹಿರಿಯ ಶಾಸಕ ಹಾಗೂ ರಾಜ್ಯದ ಏಕೈಕ ಉಪ್ಪಾರ ಸಮುದಾಯದ ಶಾಸಕರಾಗಿದ್ದಾರೆ. ಸಂಪುಟ ರಚನೆ ವೇಳೆ ಸಾಕಷ್ಟು ಕಸರತ್ತು ನಡೆಸಿದ್ದ ಪುಟ್ಟರಂಗಶೆಟ್ಟಿ ಪ್ರಬಲ ಸಚಿವ ಸ್ಥಾನದ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದರು.

ಶಾಸಕ ಸಿ ಪುಟ್ಟರಂಗಶೆಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್​ ಅಧಿಕಾರಕ್ಕೆ ಬಂದಾಗ ಉಪ್ಪಾರ ಸಮಾಜದ ಏಕೈಕ ಶಾಕಸರಾಗಿರುವ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಕಾಂಗ್ರೆಸ್​ ಪಕ್ಷದ ನಾಯಕರು ಭರವಸೆ ನೀಡಿದ್ದರು. ಆದರೆ ಸಂಪುಟ ರಚನೆ ಕಸರತ್ತಿನಲ್ಲಿ ಕೊನೇ ಘಳಿಗೆಯಲ್ಲಿ ಆಕಾಂಕ್ಷಿಯಾಗಿದ್ದ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಇವರಿಗೆ ಸಚಿವ ಸ್ಥಾನ ತಪ್ಪಿದಾಗ ಉಪ್ಪಾರ ಸಮಾಜದವರು ಹಾಗೂ ಇವರ ಅಭಿಮಾನಿಗಳು ರಸ್ತೆಯಲ್ಲಿ ಕುಳಿತು ಪ್ರತಿಭಟನೆಯನ್ನೂ ಮಾಡಿದ್ದರು.

ಸಿದ್ದರಾಮಯ್ಯ ಅವರು ವಿಧಾನಸಭಾ ಚುನಾವಣೆಗೆ ಕ್ಷೇತ್ರಕ್ಕಾಗಿ ಅಲೆದಾಡುತ್ತಿದ್ದಾಗ ಚಾಮರಾಜನಗರದಿಂದ ಸ್ಪರ್ಧಿಸುವಂತೆ ಪುಟ್ಟರಂಗಶೆಟ್ಟಿ ಸಿದ್ದರಾಮಯ್ಯ ಅವರಿಗೆ ಆಹ್ವಾನವನ್ನೂ ನೀಡಿದ್ದರು. ಅಂತಹ ಅಭಿಮಾನಿಗೆ ಸಿದ್ದರಾಮಯ್ಯ ಹಾಗೂ ಹೈಕಮಾಂಡ್​ ಸಚಿವ ಸ್ಥಾನವನ್ನು ನೀಡದೆ ಇರುವುದಕ್ಕೆ ಡೆಪ್ಯುಟಿ ಸ್ಪೀಕರ್​ ಸ್ಥಾನವನ್ನು ನೀಡುವುದಾಗಿ ಹೇಳಿದ್ದರು. ಆದರೆ ಪುಟ್ಟರಂಗಶೆಟ್ಟಿ ಮಾತ್ರ ತಮಗೆ ಡೆಪ್ಯುಟಿ ಸ್ಪೀಕರ್​ ಸ್ಥಾನ ಬೇಡ, ಶಾಸಕನಾಗಿಯೇ ಮುಂದುವರಿಯುತ್ತೇನೆ ಎಂದು ಹೇಳಿದ್ದರು.​

ಡೆಪ್ಯುಟಿ ಸ್ಪೀಕರ್​ ಸ್ಥಾನದಲ್ಲಿದ್ದರೆ ಅಲ್ಲಿ ಕಾರ್ಯದ ಒತ್ತಡದಿಂದ ನನ್ನ ಕ್ಷೇತ್ರಕ್ಕೆ ಶಾಸಕನಾಗಿ ಕೆಲಸ ಮಾಡಲು ಕಷ್ಟವಾಗುತ್ತದೆ. ನನ್ನ ಜನ ನನ್ನ ಕೈಗೆಟುಕುವಂತಿರುವುದಿಲ್ಲ. ನನಗೆ ಸಚಿವ ಸ್ಥಾನ ನೀಡಬೇಕು ಎನ್ನುವು ನನ್ನ ಕ್ಷೇತ್ರದ ಜನರ ಆಸೆ. ಯಾವಾಗಲು ಜನರ ಜೊತೆ ಬೆರೆತು ಕೆಲಸ ಮಾಡುವವನು ನಾನು. ಹಾಗಾಗಿ ನನಗೆ ಡೆಪ್ಯುಟಿ ಸ್ಪೀಕರ್​ ಸ್ಥಾನ ಬೇಡ ಎಂದು ತಿರಸ್ಕರಿಸಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್​ ಅಹ್ಮದ್​ ಅವರು ಡೆಪ್ಯುಟಿ ಸ್ಪೀಕರ್​ ಸ್ಥಾನವನ್ನು ಒಪ್ಪಿಕೊಳ್ಳುವಂತೆ ಮನವೊಲಿಸುವ ಪ್ರಯತ್ನವನ್ನು ಮಾಡಿದ್ದರು. ಆದರೆ ಈಗ ಸಿದ್ದರಾಮಯ್ಯ ಅವರ ಮಾತಿಗೆ, ಒಂದು ವರ್ಷದ ನಂತರ ಸಚಿವ ಸ್ಥಾನ ನೀಡುವ ಭರವಸೆಗೆ ಒಪ್ಪಿ ಡೆಪ್ಯುಟಿ ಸ್ಪೀಕರ್​ ಸ್ಥಾನವನ್ನು ಸಿ ಪುಟ್ಟರಂಗಶೆಟ್ಟಿ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಡೆಪ್ಯುಟಿ ಸ್ಪೀಕರ್ ಹುದ್ದೆ ಬೇಡ ಎಂದು ಸಿದ್ದರಾಮಯ್ಯಗೆ ಹೇಳಿದ್ದೀನಿ: ಶಾಸಕ ಪುಟ್ಟರಂಗಶೆಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.