ETV Bharat / state

Crime news: ಪತ್ನಿಗೆ ಚಾಕುವಿನಿಂದ ಇರಿದು‌ ರಸ್ತೆಯಲ್ಲಿ ಮಲಗಿದ ಪತಿ.. ಗಲಾಟೆಗೆ ಕಾರಣ ನಿಗೂಢ - ಚಾಮರಾಜನಗರ ಗ್ರಾಮಾಂತರ ಠಾಣಾ ಪೊಲೀಸರು

ರಸ್ತೆಯಲ್ಲಿ ನಶೆಯಲ್ಲಿ ಮಲಗಿದ್ದ ಆರೋಪಿಯನ್ನು ಚಾಮರಾಜನಗರ ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Injured woman
ಗಾಯಗೊಂಡ ಮಹಿಳೆ
author img

By

Published : Jun 15, 2023, 5:34 PM IST

ಚಾಮರಾಜನಗರ: ಪತ್ನಿಗೆ ಮನಬಂದಂತೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರ ತಾಲೂಕಿನ‌ ಅಮಚವಾಡಿ ಗ್ರಾಮದಲ್ಲಿ ನಡೆದಿದೆ.‌ ಕುಮಾರ್ ಎಂಬಾತ ಹಲ್ಲೆ ಮಾಡಿದ್ದು, ಸುಧಾಮಣಿ ಎಂಬವರು ತೀವ್ರವಾಗಿ ಗಾಯಗೊಂಡು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.‌ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಬುಧವಾರ ತಡರಾತ್ರಿ ಪತ್ನಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದು ತಲೆ, ಬೆನ್ನು, ಕೈಗಳಿಗೆ ತೀವ್ರ ಪೆಟ್ಟು ಬಿದ್ದಿದೆ.‌

ಹಲ್ಲೆ ಮಾಡಿ ಮಲಗಿದ್ದ ಕುಮಾರನನ್ನು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ, ನಶೆಯಿಂದ ಇನ್ನೂ ಇಳಿಯದ ಪರಿಣಾಮ ಯಾವುದೇ ವಿಚಾರಣೆ ಇನ್ನೂ ನಡೆಸಿಲ್ಲ ಎಂದು ತಿಳಿದುಬಂದಿದೆ. ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ತೆಪ್ಪ ಸವಾರನಿಗೆ ಹಲ್ಲೆ: ಮದ್ಯದ ನಶೆಯಲ್ಲಿದ್ದ ಪ್ರವಾಸಿಗರು ಹಲ್ಲೆ ನಡೆಸಿರುವ ಘಟನೆ ಕೊಳ್ಳೇಗಾಲದ ಶಿವನಸಮುದ್ರ‌‌ದ ಕಾವೇರಿ ನದಿಯಲ್ಲಿ ನಡೆದಿದೆ.‌ ಶಿವನಸಮುದ್ರ‌‌ದ ಭೈರನಾಯಕ ಎಂಬ ತೆಪ್ಪದ ಸವಾರ ಗಾಯಗೊಂಡಿದ್ದಾನೆ. ಕೊಳ್ಳೇಗಾಲದ ಶಿವನಸಮುದ್ರ‌‌ಕ್ಕೆ ಬಂದಿದ್ದ ಬೆಂಗಳೂರಿನ‌ ಬನ್ನೇರುಘಟ್ಟ ಮೂಲದ ಯುವಕರ ಗುಂಪು ಕಾವೇರಿ ನದಿಯಲ್ಲಿ ಅಪಾಯಕಾರಿಯಾಗಿ ಆಟ ಆಡುತ್ತಿದ್ದದ್ದನ್ನು ಪ್ರಶ್ನಿಸಿದ್ದಕ್ಕೆ ಕಲ್ಲು, ಕೈಗಳಿಂದ ಹೊಡೆದಿದ್ದಾರೆ. ಸದ್ಯ, ಬೈರನಾಯಕ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲಾಗಿದ್ದು ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅತ್ತೆಗೆ ಚಾಕುವಿನಿಂದ ಇರಿದ ಅಳಿಯ: ಹೆಂಡತಿಯನ್ನು ಮನೆಗೆ ಕಳುಹಿಸಿಲ್ಲ ಎಂದು ಗಂಡ ಅತ್ತೆ ಮನೆಗೆ ಹೋಗಿ ಅತ್ತೆಗೆ ಚೂರಿಯಿಂದ ಇರಿದ ಘಟನೆ ಬೆಂಗಳೂರಿನ ಬೆಳ್ಳಂದೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಕೋಲಾರ ಮೂಲದ ಮನೋಜ್​ ಎನ್ನುವಾತ ಆರೋಪಿಯಾಗಿದ್ದು, ಈ ಕಳೆದ ಮೂರು ವರ್ಷಗಳ ಹಿಂದೆ ಮಂಡ್ಯ ಮೂಲದ ವರ್ಷಿತಾ ಎಂಬ ಯುವತಿಯನ್ನು ಪ್ರೀತಿಸಿ, ಮನೆಯವರ ವಿರೋಧದ ನಡುವೆ ಮದುವೆ ಮಾಡಿಕೊಂಡಿದ್ದರು.

ಪ್ರಾರಂಭದಲ್ಲಿ ಚೆನ್ನಾಗಿಯೇ ನಡೆಯುತ್ತಿದ್ದ ಸಂಸಾರದಲ್ಲಿ ಕಾಲಕ್ರಮೇಣ ಗಲಾಟೆ ಶುರುವಾಗಿದೆ. ಮೊದಲಿಗೆ ದುಡಿಯುತ್ತಿದ್ದ ಮನೋಜ್​, ಆಮೇಲೆ ಕುಡಿಯುವ ಚಟ ಬೆಲೆಸಿಕೊಂಡು, ಹೆಂಡತಿ ಮೇಲೆ ಅನುಮಾನ ಪಟ್ಟು, ದೈಹಿಕ ಹಿಂಸೆ ಕೊಡಲು ಪ್ರಾರಂಭಿಸಿದ್ದನು. ಗಂಡನಿಗೆ ವರ್ಷಿತಾ ಎಷ್ಟೇ ಬುದ್ಧಿ ಹೇಳಿದ್ದರು ಮನೋಜ್​ ಕೇಳಿರಲಿಲ್ಲ. ಇದರಿಂದ ಬೇಸತ್ತ ವರ್ಷಿತಾ ತವರು ಮನೆಗೆ ತೆರಳಿದ್ದಳು. ತವರಿಗೆ ಬಂದಿದ್ದ ವರ್ಷಿತಾಗೆ ಮನೆಯ ಹಿರಿಯರು ಬುದ್ಧಿ ಹೇಳಿ ವಾಪಸ್​ ಗಂಡನ ಮನೆಗೆ ಕಳುಹಿಸಿದ್ದರು. ಆದರೆ ಮನೋಜ್​ ಮಾತ್ರ ಮತ್ತದೇ ಹಳೆಯ ಚಾಳಿಯನ್ನೇ ಮುಂದುವರಿಸಿದ್ದನು. ವರ್ಷಿತಾ ಮತ್ತೆ ತವರು ಮನೆಗೆ ಬಂದು ಸೇರಿದ್ದರು. ಮತ್ತೆ ಬಂದ ವರ್ಷಿತಾ ಆರು ತಿಂಗಳೂ ಕಳೆದರೂ ವಾಪಸ್​ ಗಂಡನ ಮನೆಗೆ ಹಿಂತಿರುಗಲಿಲ್ಲ. ಇದರಿಂದ ಕೋಪಗೊಂಡ ಮನೋಜ್​ ಹೆಂಡತಿಗೆ ಕಾಲ್​ ಮಾಡಿದ್ದನು, ಆಗ ಅತ್ತೆ ವರ್ಷಿತಾ ನಿನ್ನ ಜೊತೆ ಬರೋದಿಲ್ಲ, ಕಾಲ್​ ಮಾಡೋದು, ಮೆಸೇಜ್​ ಮಾಡೋದು ಬಿಡು ಎಂದಿದ್ದರು. ಇದರಿಂದ ಕೋಪಗೊಂಡ ಮನೋಜ್​ ಮನೆಗೆ ಬಂದು ಅತ್ತೆಗೆ ಚೂರಿಯಿಂದ ಇರಿದಿದ್ದನು. ಅತ್ತೆ ಗೀತಾ ಹಲ್ಲೆಗೊಳಗಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಂಡತಿಯೇ ಗಂಡನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಎಸ್ಕೇಪ್​ ಆಗಿದ್ದ ಮನೋಜ್​ನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಶಾರ್ಟ್​ ಸರ್ಕ್ಯೂಟ್​ನಿಂದ ಮಕ್ಕಳಿದ್ದ ಶಾಲಾ ವಾಹನಕ್ಕೆ ಬೆಂಕಿ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.