ಚಾಮರಾಜನಗರ: ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಥಳಿಸಿ ಕೊಂದಿರುವ ಘಟನೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿನ ಪುರಾಣಿ ಪೋಡಿನಲ್ಲಿ ನಡೆದಿದೆ.
ಬೇದಮ್ಮ (25) ಮೃತ ದುರ್ದೈವಿಯಾಗಿದ್ದು, ಪತಿ ರಾಮಣ್ಣ ಪರಾರಿಯಾಗಿದ್ದಾನೆ. ಪತಿ-ಪತ್ನಿಯಲ್ಲಿ ಹೊಂದಾಣಿಕೆ ಕೊರತೆಯಿಂದಾಗಿ ನಿತ್ಯ ಜಗಳವಾಡುತ್ತಿದ್ದರು ಎಂದು ತಿಳಿದುಬಂದಿದೆ. ಕೆಲವು ದಿನಗಳ ಹಿಂದೆಯಷ್ಟೇ ಕೋಪಿಸಿಕೊಂಡು ತವರಿಗೆ ಹೋಗಿದ್ದ ಬೇದಮ್ಮ ಮರಳಿ ಮನೆಗೆ ಬಂದಿದ್ದಳು ಎನ್ನಲಾಗಿದೆ.
ಇಂದು ಮತ್ತೇ ಇಬ್ಬರ ನಡುವೆ ಗಲಾಟೆ ನಡೆದು ಪತ್ನಿ ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ ಯಳಂದೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪರಾರಿಯಾದ ಪತಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.