ಚಾಮರಾಜನಗರ: ಸಾಕು ನಾಯಿಗಳ ಮೂಲಕ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಬೇಟೆಗಾರನೊಬ್ಬನನ್ನು ಮಲೆಮಹದೇಶ್ವರ ವನ್ಯ ಜೀವಿ ವಲಯ ವಿಭಾಗದ ಪಿ.ಜಿ.ಪಾಳ್ಯ ಬಫರ್‍ನ ಆಂಡಿ ಪಾಳ್ಯ ಗಸ್ತಿನಲ್ಲಿ ಬಂಧಿಸಲಾಗಿದೆ.
ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಕೀರೆಪಾತಿ ಗ್ರಾಮದ ಮುತ್ತು ಬಂಧಿತ ಆರೋಪಿ. ಸಾಕು ನಾಯಿಗಳ ಮೂಲಕ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಎನ್ನಲಾಗಿದೆ.
ಕಡವೆಯೊಂದನ್ನು ಕೊಂದು ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ 30 ಕೆ.ಜಿ. ತೂಕದ ಕಡವೆಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.