ETV Bharat / state

ಬೇವಿನಮರದಲ್ಲಿ ಹಾಲಿನ ರೂಪದ ದ್ರವ... ಪವಾಡ ಪವಾಡ ಅನ್ನುತ್ತ ಸರಿರಾತ್ರಿಯಲ್ಲೇ ಬಂದ್ರು ಜನ! - ಬೇವಿನ ಮರದಲ್ಲಿ ಸುರಿಯುತ್ತಿದೆ ಹಾಲು

ಬೇವಿನ ಮರದಿಂದ ಹೊರಬರುತ್ತಿರುವ ಹಾಲಿನ ರೂಪದ ದ್ರವವನ್ನ ಪವಾಡ ಎಂದು ನಂಬಿದ ಜನ ತಂಡೋಪತಂಡವಾಗಿ ಆಗಮಿಸಿ ವೀಕ್ಷಿಸುತ್ತಿದ್ದಾರೆ.

ಬೇವಿನ ಮರದಿಂದ ಜಿನುಗುತ್ತಿದೆ ಹಾಲಿನ ರೂಪದ ದ್ರವ
author img

By

Published : Nov 1, 2019, 11:31 PM IST

ಚಾಮರಾಜನಗರ: ಬೇವಿನಮರದಿಂದ ಹಾಲಿನ ರೂಪದ ದ್ರವ ಬರುವುದನ್ನು ವೀಕ್ಷಿಸಲು ಸರಿರಾತ್ರಿಯೇ ಜನರು ನಾ ಮುಂದು ತಾಮುಂದು ಅಂತಾ ದೌಡಾಯಿಸಿದ ದೃಶ್ಯ ಹನೂರು ತಾಲೂಕಿನ ರಾಮಾಪುರದಲ್ಲಿ ಕಂಡುಬಂದಿದೆ.

ಬೇವಿನ ಮರದಿಂದ ಜಿನುಗುತ್ತಿದೆ ಹಾಲಿನ ರೂಪದ ದ್ರವ

ರಾಮಾಪುರ- ದಿನ್ನಹಳ್ಳಿ ರಸ್ತೆಯಲ್ಲಿನ ಬೇವಿನಮರವೊಂದರಲ್ಲಿ ಹಾಲಿನ ರೂಪದ ದ್ರವ ಜಿನುಗುತ್ತಿದ್ದು, ಸಸ್ಯಲೋಕದ ವೈಜ್ಞಾನಿಕ ಸತ್ಯ ಅರಿಯದ ಮುಗ್ದರು ಬೇವಿನ ಮರದಲ್ಲಿ ಹಾಲು ಬರುತ್ತಿದೆ ಎಂದು ನಂಬಿ‌ ರಾತ್ರಿಯಾದರೂ ಟಾರ್ಚ್ ಹಿಡಿದುಕೊಂಡು ತಂಡೋಪತಂಡವಾಗಿ ಬಂದು ಇದು ದೇವಿ ಪವಾಡ ಅನ್ನುತ್ತ ಕಣ್ತುಂಬಿಕೊಳ್ಳುತ್ತಿದ್ದಾರೆ.

ಹಾಲು ಬರುತ್ತಿರುವುದು ಇಂದು ಸಂಜೆ ದಾರಿಹೋಕನೋರ್ವನಿಂದ ತಿಳಿದಿದ್ದು, ರಾತ್ರಿ ವೇಳೆಗೆ ಕಾಡ್ಗಿಚ್ಚಿನಂತೆ ಹಬ್ಬಿದ್ದು ಬೇವಿನ ಮರವನ್ನು ಕಾಣಲು ಜನ ಮುಗಿಬೀಳುತ್ತಿದ್ದಾರೆ. ಆದರೆ, ಸಸ್ಯವಿಜ್ಞಾನದ ಪ್ರಕಾರ ಕೀಟಗಳಿಂದ ಎದುರಾಗುವ ರೋಗವನ್ನು ನಿಯಂತ್ರಿಸಿಕೊಳ್ಳಲು ಈ ದ್ರವ ನೆರವಾಗಲಿದೆ. ಕೀಟಗಳು ಮರವನ್ನು ಕಚ್ಚಿ ರಂಧ್ರ ಕೊರೆದಾಗ ಈ ದ್ರವ ಬರಲಿದ್ದು, ಕೀಟಬಾಧೆಯಿಂದ ದೂರವಾಗಲು ಮರ ಸ್ವಯಂ ರಕ್ಷಣೆಗೆ ಮುಂದಾಗಲಿದೆ ಎಂದು ಹೇಳುತ್ತಾರೆ.

ಯುವಜನತೆ ಇನ್ನಾದರೂ ಗ್ರಾಮಸ್ಥರಿಗೆ ವೈಜ್ಞಾನಿಕ ಸತ್ಯವನ್ನು ತಿಳಿಸಬೇಕಿದೆ.

Intro:ಜನ ಮರುಳೋ- ಜಾತ್ರೆ ಮರುಳೋ: ಬೇವಿನಮರದ ಹಾಲು ನೋಡಲು ಸರಿರಾತ್ರಿಯಲ್ಲೇ ಬಂದ ಜನರು!

ಚಾಮರಾಜನಗರ: ಬೇವಿನಮರದಲ್ಲಿ ಹಾಲಿನ ರೂಪದ ದ್ರವ ಬರುವುದನ್ನು ಕಾಣಲು ಸರಿರಾತ್ರಿಯೇ ಜನರು ದೌಡಾಯಿಸಿದ ಘಟನೆ ಹನೂರು ತಾಲೂಕಿನ ರಾಮಾಪುರದಲ್ಲಿ ನಡೆದಿದೆ.

Body:ರಾಮಾಪುರ- ದಿನ್ನಹಳ್ಳಿ ರಸ್ತೆಯಲ್ಲಿನ ಬೇವಿನಮರವೊಂದರಲ್ಲಿ ದ್ರವ ಬರುತ್ತಿದ್ದು
ಸಸ್ಯಲೋಕದ ವೈಜ್ಞಾನಿಕ ಸತ್ಯ ಅರಿಯದ ಮುಗ್ಧರು ಬೇವಿನ ಮರದಲ್ಲಿ ಹಾಲು ಬರುತ್ತಿದೆ ಎಂದು ನಂಬಿ‌ ರಾತ್ರಿಯಾದರೂ ಟಾರ್ಚ್ ಹಿಡಿದುಕೊಂಡು ತಂಡೋಪತಂಡವಾಗಿ " ದೇವಿಯ ಪವಾಡ" ವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ

ಹಾಲು ಬರುತ್ತಿರುವುದು ಇಂದು ಸಂಜೆ ದಾರಿಹೋಕನೋರ್ವನಿಂದ ತಿಳಿದಿದ್ದು ರಾತ್ರಿ ವೇಳೆಗೆ ಕಾಡ್ಗಿಚ್ಚಿನಂತೆ ಹಬ್ಬಿ ಬೇವಿನಮರವನ್ನು ಕಾಣಲು ಮುಗಿಬೀಳುತ್ತಿದ್ದಾರೆ. ಆದರೆ, ಸಸ್ಯವಿಜ್ಞಾನದ ಪ್ರಕಾರ ಕೀಟಗಳಿಂದ ಎದುರಾಗುವ ರೋಗವನ್ನು ನಿಯಂತ್ರಿಸಿಕೊಳ್ಳಲು ಈ ದ್ರವ ನೆರವಾಗಲಿದ್ದು ಕೀಟಗಳು ಮರವನ್ನು ಕಚ್ಚಿ ರಂಧ್ರ ಕೊರೆದಾಗ ಈ ದ್ರವ ಬರಲಿದ್ದು
ಕೀಟಬಾಧೆಯಿಂದ ದೂರವಾಗಲು ಮರ ಸ್ವಯಂರಕ್ಷಣೆಗೆ ಮುಂದಾಗಲಿದೆ .

Conclusion:ಯುವಜನತೆ ಇನ್ನಾದರೂ ಗ್ರಾಮಸ್ಥರಿಗೆ ವೈಜ್ಞಾನಿಕ ಸತ್ಯವನ್ನು ತಿಳಿಸಿ ಅಜ್ಞಾನದಿಂದ ದೂರ ಮಾಡಬೇಕಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.