ಚಾಮರಾಜನಗರ : ರಾಜ್ಯದ ಪ್ರಮುಖ ಮತ್ತು ಹೆಚ್ಚು ಆದಾಯ ಹೊಂದಿರುವ ದೇವಾಲಯಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೋಟ್ಯಂತರ ರೂಪಾಯಿ ನಗದು, ಕೆ.ಜಿಗಟ್ಟಲೇ ಬೆಳ್ಳಿ ಸಂಗ್ರಹವಾಗಿದೆ.
ಗುರುವಾರ ಬೆಳಗ್ಗೆಯಿಂದ ಸಂಜೆವರೆಗೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೇವಲ 27 ದಿನಗಳಲ್ಲಿ ಒಟ್ಟು 1,70,65,814 ರೂ. ಸಂಗ್ರಹವಾಗಿದೆ. ಇದರಲ್ಲಿ ನಾಣ್ಯಗಳೇ 9 ಲಕ್ಷದಷ್ಟಿದೆ. ಇದರೊಂದಿಗೆ 80 ಗ್ರಾಂ ಚಿನ್ನ ಹಾಗೂ 1.4 ಕೆಜಿ ಬೆಳ್ಳಿಯನ್ನು ಏಳುಮಲೆ ಒಡೆಯನಿಗೆ ಭಕ್ತರು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟದಲ್ಲಿ ವಿವಿಧ ಸೇವೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಾರಾಂತ್ಯ ಮತ್ತು ಸೋಮವಾರದಂದು ಭಕ್ತರ ದಂಡೇ ಹರಿದು ಬಂದು ಕೇವಲ ಚಿನ್ನದ ರಥ, ಲಡ್ಡು ಮಾರಾಟ ಹಾಗೂ ಇತರ ಸೇವೆಗಳಿಂದಲೇ ದಿನವೊಂದಕ್ಕೆ ಲಕ್ಷಾಂತರ ರೂ. ಹೆಚ್ಚು ಆದಾಯ ಬರುತ್ತಿದೆ ಎಂದು ಹೇಳಲಾಗ್ತಿದೆ.
ಓದಿ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಎಂಟು ಶಾಲೆಗಳಿಗೆ ಹಾನಿ: ಶಿಕ್ಷಣ ವ್ಯವಸ್ಥೆ ಮೇಲೆ ದುಷ್ಪರಿಣಾಮ