ETV Bharat / state

ಸೋಮಣ್ಣ ಮತಬೇಟೆ ಶುರು; ವಸತಿ ಸಚಿವರಿಗೆ ಬೆನ್ನೆಲುಬಾಗಿ ನಿಂತ ರಾಜ್ಯ ನಾಯಕರು - ಸೋಮಣ್ಣ ಅವರು ತಮ್ಮ ಚುನಾವಣಾ ಪ್ರಚಾರ

ಎರಡು ಕ್ಷೇತ್ರದಿಂದ ಸ್ಫರ್ಧೆ ಮಾಡಲಿರುವ ವಿ.ಸೋಮಣ್ಣ ಅವರು ತಮ್ಮ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದಾರೆ.

somanna
ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ
author img

By

Published : Apr 15, 2023, 6:01 PM IST

Updated : Apr 16, 2023, 6:23 AM IST

ಚಾಮರಾಜನಗರದಲ್ಲಿ ಇಂದಿನಿಂದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮತಬೇಟೆ ಆರಂಭ

ಚಾಮರಾಜನಗರ: ವರುಣಾ ಬಳಿಕ ಚಾಮರಾಜನಗರದಲ್ಲಿ ಇಂದಿನಿಂದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಮತಬೇಟೆ ಆರಂಭಿಸಿದ್ದು, ಚಾಮರಾಜನಗರ ತಾಲೂಕಿನ‌ ಜಿಲ್ಲಾ ಪಂಚಾಯತ್​ ಕ್ಷೇತ್ರಗಳಲ್ಲಿ ಬಹಿರಂಗ ಸಭೆಗಳನ್ನು ನಡೆಸಿದರು. ಕೂಡ್ಲೂರು ಮಂಟೇಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಿದ ಸೋಮಣ್ಣ, ಆಲೂರು, ಚಂದಕವಾಡಿ, ಅರಕಲವಾಡಿ ಗ್ರಾಮಗಳಲ್ಲಿ ಬಹಿರಂಗ ಸಭೆ ನಡೆಸಿ ತಮಗೆ ಒಂದು ಅವಕಾಶ ಕೊಡುವಂತೆ ಕೈಮುಗಿದು ಪ್ರಾರ್ಥಿಸಿದರು.

ಚಂದಕವಾಡಿ ಗ್ರಾಮದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿ, ನಾನು ಕೇಳಿಕೊಂಡು ಚಾಮರಾಜನಗರಕ್ಕೆ ಬರಲಿಲ್ಲ, ಮನೆಯಲ್ಲಿ ಮಲಗಿದ್ದರೂ 20 ಸಾವಿರ ಮತಗಳ ಅಂತರದಿಂದ ಗೋವಿಂದರಾಜನಗರದಲ್ಲಿ ಗೆಲ್ಲುತ್ತಿದ್ದೆ. ವರಿಷ್ಠರು ದೂರದೃಷ್ಟಿ ಇಟ್ಟುಕೊಂಡು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ನೀವು ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ, ಹಾಗೇನಾದ್ರು ಕಳುಹಿಸಿದರೇ ನಿಮಗೇ ಲಾಸ್ ಎಂದರು.

ನಾನು ನನ್ನ ಮಗನಿಗೆ ಟಿಕೆಟ್ ಕೇಳಿದೆ, ಆದರೆ ನಿನಗೇ ಇನ್ನೂ ಶಕ್ತಿ ಇದೆ ಎಂದು ಹೇಳಿ ಎರಡು ಟಿಕೆಟ್ ಕೊಟ್ಟರು. ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕಿದ್ದು, ಪಕ್ಷಗಳನ್ನೆಲ್ಲಾ ಬದಿಗಿಟ್ಟು ನನಗೆ ಮತ ಕೊಡಿ, ನಿಮ್ಮ ಮತದ ಮೌಲ್ಯವನ್ನು ಅಭಿವೃದ್ಧಿ ಮೂಲಕ ತೋರಿಸುತ್ತೇನೆ. 13 ರ ತನಕ ಸೋಮಣ್ಣ, ಅದಾದ ಬಳಿಕ ನಾನು ನಿಮ್ಮೆಲ್ಲರ ಸೇವಕ. 24x7 ನಿಮ್ಮ ಸೇವೆ ಮಾಡುತ್ತೇನೆ. 3 ಸಾರಿ ಅವರಿಗೆ ಅವಕಾಶ ಕೊಟ್ಟಿದ್ದೀರಿ, ಒಂದು ಸಾರಿ ನನಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಗೋ ಬ್ಯಾಕ್ ಎಂದವರು ಜೊತೆ ಜೊತೆ ಜೊತೆಯಲಿ: ಟಿಕೆಟ್ ಘೋಷಣೆಗೂ ಮುನ್ನ ಗೋ ಬ್ಯಾಕ್ ಸೋಮಣ್ಣ ಎಂದಿದ್ದ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಟಿಕೆಟ್ ಘೋಷಣೆಯಾದ ಬಳಿಕ ಅಸಮಾಧಾನಗೊಂಡಿದ್ದ ಪ್ರೊ. ಮಲ್ಲಿಕಾರ್ಜುನಪ್ಪ ಮತ್ತಿತರರು ವೇದಿಕೆ ಹಂಚಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡಿದರು. ಸೋಮಣ್ಣ ಎಂದರೆ ಅಭಿವೃದ್ಧಿ, ಸೋಮಣ್ಣ ಎಂದರೆ ಕಾರ್ಯಕ್ಷಮತೆ ಎಂದು ಬ್ಯಾಟಿಂಗ್ ಬೀಸಿದರು.

ವರುಣ ಬಗ್ಗೆ ಹೆಚ್ಚು ಗಮನ ಕೊಡಬೇಕಿರುವುದರಿಂದ ಚಾಮರಾಜನಗರಕ್ಕೆ ಹೆಚ್ಚು ಬರಲಾಗಲ್ಲ, ಇಲ್ಲಿನ ಮುಖಂಡರು, ಕಾರ್ಯಕರ್ತರೇ ಓಡಾಡಿ ಬಿಜೆಪಿ ಸಾಧನೆಗಳನ್ನು ತಿಳಿಸಿ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕೆಂದು ಸೋಮಣ್ಣ ಕೋರಿದರು. ಒಟ್ಟಿನಲ್ಲಿ ಸೋಮಣ್ಣ ಅವರ ಚಾಮರಾಜನಗರದ ಮತಬೇಟೆ ಆರಂಭವಾಗಿದ್ದು, ತಮ್ಮದೇ ಸ್ಟೈಲಿನಲ್ಲಿ ಮುಖಂಡರ ಮೂಲಕ ಮತ ಬೇಟೆ ಆರಂಭಿಸಿದ್ದು ಕಾರ್ಯಕರ್ತರಲ್ಲಿ ಯುದ್ದೋತ್ಸಾಹ ತುಂಬಿದ್ದಾರೆ.

ವರುಣಾಗೆ ಸಿಎಂ- ಚಾಮರಾಜನಗರಕ್ಕೆ ಬಿಎಸ್ ವೈ : ವರುಣಾ ಹಾಗೂ ಚಾಮರಾಜನಗರದಲ್ಲಿ ಸಚಿವ ಸೋಮಣ್ಣ ಅಭ್ಯರ್ಥಿಯಾಗಿಸುವ ಮೂಲಕ ಬಿಜೆಪಿ ಹೂಡಿರುವ ಪ್ಲಾನ್ ಗೆ ಈಗ ಸಿಎಂ ಹಾಗೂ ಮಾಜಿ ಸಿಎಂ ಎಂಟ್ರಿಯಾಗುತ್ತಿದ್ದು, ಕೈ ಪಡೆಗೆ ಟಕ್ಕರ್ ಕೊಡಲು ಪ್ಲಾನ್ ಮಾಡಲಾಗಿದೆ. ವಸತಿ ಸಚಿವ ವಿ.ಸೋಮಣ್ಣ ಇದೇ 17 ರಂದು ವರುಣದಲ್ಲಿ ಮತ್ತು 19ಕ್ಕೆ ಚಾಮರಾಜನಗರದಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದು, ಕ್ಷೇತ್ರಗಳಲ್ಲಿ ಬಿಜೆಪಿ ಸುನಾಮಿ ಎಬ್ಬಿಸಲು ನಾಮಪತ್ರ ಸಲ್ಲಿಕೆ ವೇಳೆ ಘಟಾನುಘಟಿಗಳು ಜೊತೆಯಾಗಲಿದ್ದಾರೆ.

ವರುಣ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆಯಾಗಲಿದ್ದು ಚಾಮರಾಜನಗರದಲ್ಲಿ ಉಮೇದುವಾರಿಕೆ ಫೈಲ್ ಮಾಡುವಾಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೋಮಣ್ಣಗೆ ಜೊತೆಯಾಗಲಿದ್ದಾರೆ.

ಜಾತಿ ಸಮೀಕರಣ-ಎಚ್ಚರ ವಹಿಸಿದ ಸೋಮಣ್ಣ: ಶನಿವಾರದಿಂದ ಚಾಮರಾಜನಗರದಲ್ಲಿ ಮತಬೇಟೆ ಆರಂಭಿಸಿರುವ ಸೋಮಣ್ಣ ಜಾತಿ ಲೆಕ್ಕಾಚಾರ ಹಾಗೂ ಒಳೇಟುಗಳು ಬೀಳದಂತೆ ಜಾಗೃತರಾಗಿದ್ದು, ಎಲ್ಲಾ‌ ಸಮುದಾಯದ ಮುಖಂಡರನ್ನು ತಮ್ಮ ಪ್ರಚಾರದ ವೇಳೆ ಕರೆದೊಯ್ಯುತ್ತಿದ್ದಾರೆ. ಅಸಮಾಧಾನಗೊಂಡ ಎಲ್ಲರ ಬಂಡಾಯವನ್ನು ಶಮನಗೊಳಿಸಿ ಹಾದಿ ಸರಳ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಹೊನ್ನಾಳಿಯಿಂದ ಡಿಜಿ ಶಾಂತನಗೌಡ, ಜಗಳೂರಿನಲ್ಲಿ ಚಿಕ್ಕಪ್ಪನಹಳ್ಳಿ ದೇವೇಂದ್ರಪ್ಪಗೆ ಕಾಂಗ್ರೆಸ್​​ ಟಿಕೆಟ್

Last Updated : Apr 16, 2023, 6:23 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.