ಚಾಮರಾಜನಗರ : ಮನೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಳ್ಳೇಗಾಲದ ಮಂಜುನಾಥ್, ನಗರ ಬಡಾವಣೆಯ ನಿವಾಸಿ ಶಿವ ಹಾಗೂ ಯಳಂದೂರು ತಾಲೂಕಿನ ವೈ.ಕೆ.ಮೋಳೆಯ ಶ್ರೀನಿವಾಸ್ ಬಂಧಿತ ಆರೋಪಿಗಳು.
ಜ.6ರಂದು ಆದರ್ಶ ನಗರದಲ್ಲಿನ ಪಶು ವೈದ್ಯಾಧಿಕಾರಿ ಗುರು ಲಿಂಗಯ್ಯ ಎಂಬವರು ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಕೊಳ್ಳೇಗಾಲ ಸಿಪಿಐ ಶ್ರೀಕಾಂತ್, ಪಿಎಸ್ಐ ರಾಜೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ 80 ಗ್ರಾಂ ಮೌಲ್ಯದ ಎರಡು ಚಿನ್ನದ ಬಳೆ, ಒಂದು ಜೊತೆ ಓಲೆ ಹಾಗೂ 1 ನಕ್ಲೇಸ್ ವಶಕ್ಕೆ ಪಡೆದಿದ್ದಾರೆ.
ಶ್ರೀನಿವಾಸ ಎಂಬಾಯ ವೃತ್ತಿಪರ ಕಳ್ಳನಾಗಿದ್ದು, ಈತನ ಮೇಲೆ10 ಕ್ಕೂ ಹೆಚ್ಚು ಪ್ರಕರಣಗಳಿದ್ದು ಮೂರುವರೆ ವರ್ಷ ಸೆರೆವಾಸವನ್ನು ಅನುಭವಿಸಿದ್ದಾನೆ. ಇನ್ನು ಶಿವು ಕೊಲೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ವೇಳೆ ಶ್ರೀನಿವಾಸನ ಗೆಳೆತನವಾಗಿ ಇಬ್ಬರು ಕಳ್ಳತನಕ್ಕಿಳಿದಿದ್ದರು.