ETV Bharat / state

ವಿದ್ಯುತ್ ಅವಘಡದಿಂದಾಗಿ ಸುಟ್ಟು ಭಸ್ಮವಾದ ಮನೆ: ಮಹಿಳೆಯ‌ ಜೀವನ ಬೀದಿ ಪಾಲು

ಚಿಲಕವಾಡಿ ಗ್ರಾಮದ ಶಾರದಮ್ಮ‌ ಎಂಬುವರಿಗೆ ಸೇರಿದ ಮನೆಯು ವಿದ್ಯುತ್‌ ಅವಘಡದಿಂದಾಗಿ ಬೆಂಕಿ ಹೊತ್ತಿ ಸಂಪೂರ್ಣ ಭಸ್ಮವಾಗಿದೆ. ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ಮಹಿಳೆಯ ಜೀವನ ಬೀದಿ ಪಾಲಾಗಿದ್ದು,‌ ಇಲ್ಲಿನ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

house burned due to electrical disruption
ವಿದ್ಯುತ್ ಅವಘಡದಿಂದಾಗಿ ಸುಟ್ಟು ಭಸ್ಮವಾದ ಮನೆ....ಮಹಿಳೆಯ‌ ಜೀವನ ಬೀದಿ ಪಾಲು
author img

By

Published : May 3, 2020, 4:38 PM IST

ಕೊಳ್ಳೇಗಾಲ: ಶಾರ್ಟ್‌ ಸರ್ಕ್ಯೂಟ್​​ನಿಂದಾಗಿ ಅಗ್ನಿ ಅವಘಡ ಸಂಭವಿಸಿ, ಮನೆಯೊಂದು ಸಂಪೂರ್ಣ ಭಸ್ಮವಾಗಿರುವ ಘಟನೆ ತಾಲೂಕಿನ ಚಿಲಕವಾಡಿಯಲ್ಲಿ ತಡರಾತ್ರಿ ಜರುಗಿದೆ.

ವಿದ್ಯುತ್ ಅವಘಡದಿಂದಾಗಿ ಸುಟ್ಟು ಭಸ್ಮವಾದ ಮನೆ: ಮಹಿಳೆಯ‌ ಜೀವನ ಬೀದಿ ಪಾಲು

ಚಿಲಕವಾಡಿ ಗ್ರಾಮದ ಶಾರದಮ್ಮ‌ ಎಂಬುವರಿಗೆ ಸೇರಿದ ಮನೆಯು ವಿದ್ಯುತ್‌ ಅವಘಡದಿಂದಾಗಿ, ಬೆಂಕಿ ಹೊತ್ತಿ ಸಂಪೂರ್ಣ ಭಸ್ಮವಾಗಿದೆ. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಬೆಂಕಿಯಲ್ಲಿ ಮನೆ ಹೊತ್ತಿ ಉರಿಯುವುದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಬೆಂಕಿಯನ್ನು ನಂದಿಸಿದ್ದಾರೆ. ಮನೆಯಲ್ಲಿ ಶಾರದಮ್ಮ ಒಂಟಿಯಾಗಿ ಜೀವನ ನಡೆಸುತ್ತಿದ್ದು, ಅದೃಷ್ಟವಶಾತ್ ಶಾರದಮ್ಮ ಸಮೀಪದಲ್ಲಿದ್ದ ಸಂಬಂಧಿಕರ‌ ಮನೆಗೆ ತೆರಳಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನೂ ಬೆಂಕಿಯಲ್ಲಿ ಹಣ, ಚಿನ್ನ, ಮನೆಯ ಸಾಮಾಗ್ರಿಗಳು,‌ ದಿನಸಿ, ಬಟ್ಟೆ ಸಂಪೂರ್ಣ ‌ಸುಟ್ಟು ಕರಲಾಗಿದೆ. ಇದ್ದರಿಂದ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ಮಹಿಳೆ ಜೀವನ ಬೀದಿ ಪಾಲಾಗಿದ್ದು,‌ ಇಲ್ಲಿನ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.