ETV Bharat / state

ನಾವ್ಯಾರೂ ಹೊರಗೆ ಹೋಗಲ್ಲ, ನಮ್ಮ ಊರಿಗೂ ಯಾರೂ ಬರಬೇಡಿ! - Punajuru Gram Panchayat of Chamarajanagar Taluk

ಚಾಮರಾಜನಗರ ತಾಲೂಕಿನ ಪುಣಜುರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಂದ್ರ ಗ್ರಾಮದ ಗಿರಿಜನ ಯುವಕರು ತಮ್ಮ ಗ್ರಾಮಕ್ಕೆ ಹೊರಗಿನಿಂದ ಯಾರೂ ಪ್ರವೇಶ ಮಾಡಬಾರದೆಂಬ ಉದ್ದೇಶದಿಂದ ರಸ್ತೆಗೆ ಮುಳ್ಳಿನ ರಾಶಿ ಹಾಕಿ ಸಂಚಾರ ಬಂದ್ ಮಾಡಿದ್ದಾರೆ.

Heaps of thorns on the road Chamarajanagar
ನಾವ್ಯಾರು ಹೊರಗೆ ಹೋಗಲ್ಲ..ನಮ್ಮ ಊರಿಗೂ ಯಾರೂ ಬರಬೇಡಿ
author img

By

Published : Mar 26, 2020, 9:16 PM IST

ಚಾಮರಾಜನಗರ: ನಾವ್ಯಾರೂ ಹೊರಗೆ ಹೋಗಲ್ಲ. ನಮ್ಮ ಊರಿಗೂ ಯಾರೂ ಬರ್ಬೇಡಿ ಎಂದು ಗಿರಿಜನರು ತಮ್ಮ ಊರಿನ‌ ರಸ್ತೆಗೆ ಮುಳ್ಳಿನ ರಾಶಿ ಸುರಿದಿರುವ ಘಟನೆ ರಂಗಸಂದ್ರದಲ್ಲಿ ನಡೆದಿದೆ.

ನಾವ್ಯಾರು ಹೊರಗೆ ಹೋಗಲ್ಲ, ನಮ್ಮ ಊರಿಗೂ ಯಾರೂ ಬರಬೇಡಿ
ಚಾಮರಾಜನಗರ ತಾಲೂಕಿನ ಪುಣಜುರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಂದ್ರ ಗ್ರಾಮದ ಗಿರಿಜನ ಯುವಕರು ಕೊರೊನಾ ಭೀತಿ ಹಿನ್ನೆಲೆಯಲ್ಲಿ ತಮ್ಮ ಗ್ರಾಮಕ್ಕೆ ಹೊರಗಿನಿಂದ ಯಾವುದೇ ವಾಹನಗಳು, ಜನರು ಬರಬಾರದೆಂದು‌ ಗ್ರಾಮದ ಪ್ರವೇಶ ರಸ್ತೆಗೆ ಮುಳ್ಳಿನ ರಾಶಿ ಹಾಕಿ ಸಂಚಾರ ಬಂದ್ ಮಾಡಿದ್ದಾರೆ. ಇನ್ನು, ಯಳಂದೂರು ತಾಲೂಕಿನ, ವೈ.ಕೆ.ಮೋಳೆ, ಕೃಷ್ಣಪುರ ಮತ್ತು ಯರಿಯೂರು ಗ್ರಾಮಗಳು ಕೂಡ ಬೇರೆ ಊರಿನಿಂದ ಬಂದವರಿಗೆ ಗ್ರಾಮಕ್ಕೆ ಪ್ರವೇಶವಿಲ್ಲ ಎಂದು‌ ನಿರ್ಬಂಧ ವಿಧಿಸಿದ್ದಾರೆ.‌ ಇಷ್ಟೇ ಅಲ್ಲದೆ ಹನೂರು ತಾಲೂಕಿನ ಪುದುರಾಮಾಪುರ, ಚಾಮರಾಜನಗರ ತಾಲೂಕಿನ ಕಾಗಲವಾಡಿ ಮೋಳೆ ಗ್ರಾಮಸ್ಥರು ಕೂಡ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.