ಚಾಮರಾಜನಗರ(ಕೊಳ್ಳೇಗಾಲ): ಕಿಲ್ಲರ್ ಕೊರೊನಾ ದಿನದಿಂದ ದಿನಕ್ಕೆ ಅಧಿಕ ಜನರಲ್ಲಿ ಹರಡುತ್ತಿದೆ. ದೇಶಾದ್ಯಂತ ಬಿಗಿ ಭದ್ರತೆ ಮಾಡಿ ಲಾಕ್ ಡೌನ್ ಮಾಡಿದ್ದರೂ ಕೊಳ್ಳೇಗಾಲದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಮಾತ್ರ ತರಕಾರಿ ಖರೀದಿಗೆ ಜನ ಗುಂಪುಗುಂಪಾಗಿ ಬಂದು ಜಾತ್ರೆ ವಾತಾವರಣ ನಿರ್ಮಿಸುತ್ತಿದ್ದಾರೆ.
ಜಿಲ್ಲಾಡಳಿತ ಸೂಚನೆಯಂತೆ ತಾಲ್ಲೂಕು ಆಡಳಿತ ಮುನ್ನೆಚ್ಚರಿಕೆ ಕ್ತಮಗಳನ್ನು ವಹಿಸುತ್ತಿದ್ದರು. ಜನತೆ ಮಾತ್ರ ಆದೇಶವನ್ನು ಗಾಳಿಗೆ ತೂರಿ, ಗುಂಪು ಗುಂಪಾಗಿ ಸೇರುತ್ತಿದ್ದು ತಾಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಧಿಕಾರಿಗಳು ಎಷ್ಟೇ ಕೂಗಿ ಬಾಯಿ ಬಡಿದುಕೊಂಡರು ತಲೆ ಕೆಡಿಸಿಕೊಳ್ಳದ ಜನ ಸಾಮಾನ್ಯರು ದಿನಬಳಕೆ ವಸ್ತುಗಳು, ತರಕಾರಿ ಕೊಳ್ಳುವುದಕ್ಕೆ ಮುಗಿ ಬೀಳುತ್ತಿರುವುದು ಅಧಿಕಾರಿಗಳಿಗೆ ನುಗಲಾರದ ತುತ್ತಾಗಿದೆ.
ಎಚ್ಚೆತ್ತ ದಂಡಾಧಿಕಾರಿ ಏನಂದ್ರು ಗೊತ್ತಾ: ಜನತಾ ಆರೋಗ್ಯಕ್ಕೆ ಎಷ್ಟೆ ಒಳಿತು ಮಾಡಿದರು ಸಾರ್ವಜನಿಕರು ಕಡೆಗಣನೆ ಮಾಡುತ್ತಿರುವುದು ಕಂಡು ಬಂದಿದೆ. ಈಗಾಗಲೇ ಬಿಗಿ ಭ್ರದತೆ ಮಾಡಿದ್ದರು ಈ ರೀತಿ ನಡೆಯುತ್ತಿದ್ದು ನಾಳೆಯಿಂದ ಯಾವುದೇ ಮೂಲಾಜಿಲ್ಲದೆ ಅಧಿಕ ಬಿಗಿ ಭದ್ರತೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.