ಚಾಮರಾಜನಗರ: ಇದೇ ಜೂನ್ 1ರಿಂದ ರಾಜ್ಯಾದ್ಯಂತ ದೇಗುಲಗಳು ಭಕ್ತರಿಗೆ ಮುಕ್ತವಾಗುತ್ತಿದ್ದು, ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ಅನುವು ಮಾಡಿಕೊಡುವ ಕುರಿತು ಸ್ಥಳೀಯ ಶಾಸಕ ಆರ್.ನರೇಂದ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆಮಹದೇಶ್ವರ ದೇಗುಲ ತೆರೆದರೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ತಮಿಳುನಾಡು, ಕೇರಳದಿಂದಲೂ ಭಕ್ತರು ಬರಲಿದ್ದಾರೆ. ಹೀಗೆ ಬರುವವರಿಗೆ ದಾಸೋಹ ಕಲ್ಪಿಸದಿದ್ದರೆ ಹಿಂದಿನಿಂದ ನಡೆದು ಬಂದ ಸಂಪ್ರದಾಯಕ್ಕೆ ಧಕ್ಕೆಯಾಗಲಿದೆ. ಒಂದು ವೇಳೆ ದರ್ಶನಕ್ಕೂ ಅವಕಾಶ ಕೊಟ್ಟು, ದಾಸೋಹವನ್ನೂ ಮಾಡಿದರೆ ಕೊರೊನಾ ಸೋಂಕು ಹೆಚ್ಚಾಗಲಿದೆ.
ಈಗ ಚಾಲನೆಗೊಂಡಿರುವ ಆನ್‌ಲೈನ್ ದರ್ಶನದ ವ್ಯವಸ್ಥೆಯನ್ನು ಇನ್ನೂ 15 ದಿನ ಇಲ್ಲವೇ 1 ತಿಂಗಳಿಗೆ ವಿಸ್ತರಿಸಬೇಕು. ಕೊರೊನಾ ಹತೋಟಿಗೆ ಬಂದ ಬಳಿಕ ದೇವಾಲಯಗಳಿಗೆ ಭಕ್ತರಿಗೆ ಪ್ರವೇಶವನ್ನ ಕಲ್ಪಿಸಬೇಕು. ಅಲ್ಲದೆ ದೇಗುಲ ತೆರೆಯಿರಿ ಎಂದ ಸರ್ಕಾರ, ಚರ್ಚ್ ಹಾಗೂ ಮಸೀದಿ ತೆರೆಯಬಾರದು ಎಂದಿರುವುದು ಸರಿಯಲ್ಲ ಎಂದಿದ್ದಾರೆ.