ಚಾಮರಾಜನಗರ: ಅಕ್ರಮ ಖಾತೆ ಬದಲಾವಣೆ, ಕರ್ತವ್ಯಲೋಪ ಆರೋಪದ ಮೇಲೆ ಹನೂರು ತಹಶೀಲ್ದಾರ್ ನಾಗರಾಜ್ ಅವರಿಗೆ ಕಡ್ಡಾಯ ರಜೆ ಕೊಟ್ಟು ಕರ್ತವ್ಯದಿಂದ ಬಿಡುಗಡೆಗೊಳಿಸಿ ಗ್ರೇಡ್-2 ತಹಶೀಲ್ದಾರ್ ರಾಜಾಕಾಂತ್ ಅವರನ್ನು ವರ್ಗಾವಣೆ ಮಾಡಿ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.
ಜನರಿಗೆ ಹಕ್ಕುಪತ್ರ ಮಂಜೂರಾದರೂ ಅದನ್ನು ವಿತರಿಸದೇ ಇರುವುದು, ಹಕ್ಕುಪತ್ರ ಕಡತಗಳನ್ನು ಬಾಕಿ ಉಳಿಸಿಕೊಂಡಿರುವುದು, ಅಕ್ರಮ ಖಾತೆ ವರ್ಗಾವಣೆ ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಕಳೆದ ಮೇ 13 ರಿಂದ ಜೂ.28 ರವರೆಗೆ ನಾಗರಾಜ್ ಅವರಿಗೆ ಕಡ್ಡಾಯ ರಜೆ ಕೊಟ್ಟು ಕರ್ತವ್ಯದಿಂದ ಡಿಸಿ ಬಿಡುಗಡೆಗೊಳಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ : ಜಿಲ್ಲಾಸ್ಪತ್ರೆಯಲ್ಲಿ ಮುಂದುವರೆದ ಬಾಣಂತಿಯರ ಗೋಳು
ಹನೂರಿನ ಗ್ರೇಡ್-2 ತಹಶೀಲ್ದಾರ್ ರಾಜಾಕಾಂತ್ ನಿಯಮ ಉಲ್ಲಂಘಿಸಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಪಿಂಚಣಿ ಮಂಜೂರು, ಆರ್ಆರ್ಟಿ ತಕರಾರು ಪ್ರಕರಣಗಳನ್ನು ತಡವಾಗಿ ಇತ್ಯರ್ಥಪಡಿಸುತ್ತಿದ್ದದ್ದು ಕಂಡುಬಂದಿದ್ದರಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಖಾಲಿಯಿದ್ದ ಮುನ್ಸಿಪಲ್ ತಹಶೀಲ್ದಾರ್ ಹುದ್ದೆಗೆ ವರ್ಗಾಯಿಸಲಾಗಿದೆ.