ETV Bharat / state

ಡಿಸಿ ಆದೇಶ ಗಾಳಿಗೆ ತೂರಿದ ಗುಂಡ್ಲುಪೇಟೆ ಹೋಟೆಲ್, ರೆಸಾರ್ಟ್ ಮಾಲೀಕರು - ಗುಂಡ್ಲುಪೇಟೆ ಲೆಟೆಸ್ಟ್​ ನ್ಯೂಸ್

ದಿನದಿಂದ ದಿನಕ್ಕೆ ಕೊರೊನಾ ಪ್ರಕರಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಪ್ರವಾಸಿತಾಣ ಸೇರಿದಂತೆ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳನ್ನು ಮುಚ್ಚಲು ಆದೇಶಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹೋಟೆಲ್, ರೆಸಾರ್ಟ್​ಗಳು ಈ ಆದೇಶವನ್ನು ಗಾಳಿಗೆ ತೂರಿವೆ ಎಂಬ ಆರೋಪ ಕೇಳಿ ಬಂದಿದೆ.

Gundlupet Hotel and restaurant owners not following DC order
ಡಿಸಿ ಆದೇಶ ಗಾಳಿಗೆ ತೂರಿದ ಗುಂಡ್ಲುಪೇಟೆ ಹೋಟೆಲ್, ರೆಸಾರ್ಟ್ ಮಾಲೀಕರು
author img

By

Published : Jul 11, 2020, 1:20 PM IST

ಗುಂಡ್ಲುಪೇಟೆ: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿರುವ ಪ್ರವಾಸಿತಾಣ ಸೇರಿದಂತೆ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳನ್ನು ಮುಚ್ಚಲು ಆದೇಶಿಸಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹೋಟೆಲ್, ರೆಸಾರ್ಟ್​ಗಳು ಈ ಆದೇಶವನ್ನು ಗಾಳಿಗೆ ತೂರಿವೆ ಎಂಬ ಆರೋಪ ಕೇಳಿ ಬಂದಿವೆ.

ಡಿಸಿ ಆದೇಶ ಗಾಳಿಗೆ ತೂರಿದ ಗುಂಡ್ಲುಪೇಟೆ ಹೋಟೆಲ್, ರೆಸಾರ್ಟ್ ಮಾಲೀಕರು

ತಾಲೂಕಿನ ಮೇಲುಕಾಮನಹಳ್ಳಿ ಬಳಿಯಿರುವ ವನವಿಹಾರ್ ಮತ್ತು ಖಾನ್ ರೆಸಾರ್ಟ್​ ಮಾಲೀಕರು ಡಿಸಿ ಆದೇಶದ ನಡುವೆಯೇ ವ್ಯಾಪಾರ ನಡೆಸುತ್ತಿದ್ದು, ರೂಮ್​​ಗಳನ್ನು ಬಾಡಿಗೆಗೆ ನೀಡುತ್ತಿದ್ದಾರೆ. ಹಂಗಳ ನಾಡ ಕಚೇರಿಯ ಉಪ ತಹಸೀಲ್ದಾರ್ ರಾಜ್‍ಕುಮಾರ್ ಭೇಟಿ ನೀಡಿ ಹೋಟೆಲ್ ತೆರೆಯದಂತೆ ಸೂಚಿಸಿದ್ದರೂ ತಲೆಗೆ ಹಾಕಿಕೊಂಡಿಲ್ಲ ಎನ್ನಲಾಗುತ್ತಿದೆ.

ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರೂ ಸಹ ಹೋಟೆಲ್​​ಗಳು ರಾಜಾರೋಷವಾಗಿ ವ್ಯವಹಾರ ನಡೆಸುತ್ತಿರುವುದನ್ನು ನೋಡಿದರೆ ಸ್ಥಳೀಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.