ETV Bharat / state

ಬದುಕಿಗೆ ನರೇಗಾ ಕೂಲಿ ಆಸರೆ.. ಪದವೀಧರರು, ಕಲಾವಿದರು, ಕ್ರೀಡಾಪಟುಗಳು 'ಕಾಯಕಬಂಧು'!! - ಚಾಮರಾಜನಗರದಲ್ಲಿ ಕೂಲಿ ಕಾರ್ಮಿಕರಾದ ಪದವೀಧರರು

ಕಾಮಗಾರಿ ನಡೆಯುವ ಸ್ಥಳದಲ್ಲಿ ಕೆಲಸದ ಸ್ಥಳವನ್ನು ಅಳತೆ ಮಾಡುವುದು, ಕಾರ್ಮಿಕರ ಹಾಜರಾತಿ, ಎನ್‌ಎಂಆರ್‌ ತೆಗೆಸುವುದು, ಖಾತೆಗೆ ಕೂಲಿ ಹಣ ಜಮಾ ಮಾಡಿಸುವುದು ಸೇರಿ ಮೇಲ್ವಿಚಾರಣೆ ಮಾಡುವುದರ ಜತೆಗೆ ಅವರಿಗೆ ನೆರವಾಗುವುದು ‘ಕಾಯಕಬಂಧು’ವಿನ ಕೆಲಸ..

Graduates become Coolie in Chamarajanagar
ಕೂಲಿ ಕಾರ್ಮಿಕರಾದ ಪದವೀಧರರು
author img

By

Published : Jul 3, 2021, 3:38 PM IST

ಚಾಮರಾಜನಗರ : ಕೊರೊನಾ ತಂದೊಡ್ಡಿದ್ದ ಸಂಕಷ್ಟದಿಂದ ಬದುಕು ಸಾಗಿಸುವುದೇ ದುಸ್ತರ ಎಂಬ ಹೊತ್ತಿನಲ್ಲಿ ಸಾವಿರಾರು ಮಂದಿಗೆ ನರೇಗಾ ಆಸರೆಯಾಗಿದೆ. ಇವರಲ್ಲಿ ಕಲಾವಿದರು, ಪದವೀಧರರು, ಕ್ರೀಡಾಪಟುಗಳು, ಅಂಗವಿಕಲರು ಫಲಾನುಭವಿಗಳಾಗಿದ್ದಾರೆ.

ಬಿ.ಇಡ್, ಬಿಎ, ಎಂಎ, ಎಂಬಿಎ ಓದುತ್ತಿರುವ ಹಾಗೂ ಓದು ಮುಗಿಸಿರುವ ಹತ್ತಾರು ಪದವೀಧರರು, ಸೋಬಾನೆ ಕಲಾವಿದರು, ಸಹಾಯಕ ಚಿತ್ರ ನಿರ್ದೇಶಕ, ವಾಲಿಬಾಲ್ ಕ್ರೀಡಾಪಟುಗಳು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ನೌಕರಿ ಇಲ್ಲದೇ ಪರಿತಪಿಸುತ್ತಿದ್ದ ಇವರಿಗೆ ಉದ್ಯೋಗ ಖಾತ್ರಿ ಆಸರೆಯಾಗಿದೆ.

ಬೀದಿಗೆ ಬಂದ ಬದುಕಿಗೆ ನರೇಗಾ ಆಸರೆ

ಸೋಬಾನೆ ಸೇರಿದಂತೆ ಜಾನಪದ ಕಲಾವಿದರು, ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುತ್ತಿದ್ದವರು, ಹೊಗೇನಕಲ್​ನಲ್ಲಿ ತೆಪ್ಪ ಓಡಿಸುತ್ತಿದ್ದ 57 ಮಂದಿಯೂ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವೆಡೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಕೂಡ ನರೇಗಾದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಅಂಗವಿಕಲರು ಕೂಡ ಉದ್ಯೋಗ ಮಾಡಲು ಹಿಂಜರಿದಿಲ್ಲ.

ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳುವ ಕಾಮಗಾರಿಗಳಲ್ಲಿ ಕೂಲಿ ಕಾರ್ಮಿಕರಿಗೆ ನೆರವಾಗುವುದರ ಜತೆಗೆ ತಾನೂ ಕೂಡ ಕೆಲಸ ಮಾಡುವುದು ಕಾಯಕ ಬಂಧುವಿನ ಕರ್ತವ್ಯವಾಗಿದ್ದು, 25 ಮಂದಿ ಕೂಲಿ ಕಾರ್ಮಿಕರಿಗೆ ಒಬ್ಬ ‘ಕಾಯಕ ಬಂಧು’ ಇರುತ್ತಾರೆ.

ಕಾಮಗಾರಿ ನಡೆಯುವ ಸ್ಥಳದಲ್ಲಿ ಕೆಲಸದ ಸ್ಥಳವನ್ನು ಅಳತೆ ಮಾಡುವುದು, ಕಾರ್ಮಿಕರ ಹಾಜರಾತಿ, ಎನ್‌ಎಂಆರ್‌ ತೆಗೆಸುವುದು, ಖಾತೆಗೆ ಕೂಲಿ ಹಣ ಜಮಾ ಮಾಡಿಸುವುದು ಸೇರಿ ಮೇಲ್ವಿಚಾರಣೆ ಮಾಡುವುದರ ಜತೆಗೆ ಅವರಿಗೆ ನೆರವಾಗುವುದು ‘ಕಾಯಕಬಂಧು’ವಿನ ಕೆಲಸ.

ಈ ಕಾಯಕ ಬಂಧುವಿಗೆ ದಿನಕ್ಕೆ 289 ರೂ. ಕೂಲಿ ನೀಡಲಾಗುತ್ತದೆ. ಕಾರ್ಮಿಕರ ಮೇಲ್ವಿಚಾರಣೆಗಾಗಿ ತಲಾ 4 ರೂ. ನಂತೆ 25 ಮಂದಿಗೆ 100 ರೂ. ನೀಡಲಾಗುತ್ತಿದೆ. ಪದವೀಧರರು, ಶಿಕ್ಷಕರು ಕಾಯಕಬಂಧುಗಳಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೋವಿಡ್‌ ಸಮಯದಲ್ಲಿ ಎಲ್ಲೂ ಕೆಲಸ ಸಿಗದ ಕಾರಣ ಅನಿವಾರ್ಯತೆಯಿಂದ ನರೇಗಾ ಯೋಜನೆಯಡಿ ಇವರು ಕೆಲಸ ಮಾಡುತ್ತಿದ್ದಾರೆ. ಬದುಕು ದೂಡಲು ಸಿಕ್ಕ ಕೂಲಿ ಕೆಲಸವನ್ನು ಒಲ್ಲೇ ಎಂದು ಅಹಂ ಪ್ರದರ್ಶಿಸದೇ ಉದ್ಯೋಗ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.