ETV Bharat / state

ವಿದ್ಯುತ್, ಹಣ, ಅಕ್ಕಿ ಬಳಿಕ ಟಿವಿ ಬಹುಮಾನ ಘೋಷಿಸಿದ ಡಿ‌‌.ಕೆ.ಶಿವಕುಮಾರ್

ಚಾಮರಾಜನಗರದ ಹನೂರಿನಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದ್ದು, ಮತದಾರರಿಗೆ ಕಾಂಗ್ರೆಸ್‌ ಅಧ್ಯಕ್ಷ ಡಿಕೆಶಿ ಮತ್ತಷ್ಟು 'ಉಚಿತ'ಗಳ ಘೋಷಣೆ ಮಾಡಿದರು.

KPCC Working President DK Shivakumar spoke to the media
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು.
author img

By

Published : Feb 21, 2023, 7:25 PM IST

Updated : Feb 21, 2023, 8:27 PM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಚಾಮರಾಜನಗರ: 200 ಯೂನಿಟ್ ಉಚಿತ ವಿದ್ಯುತ್, ಮನೆಯ ಮಹಿಳಾ ಯಜಮಾನಿಗೆ 2 ಸಾವಿರ ಹಣ ನೀಡುವ ಪ್ರಣಾಳಿಕೆಯ ಜೊತೆಗೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೊಸದೊಂದು ಘೋಷಣೆ ಮಾಡಿ ಮತ ಸೆಳೆಯುವ ಕಸರತ್ತು ನಡೆಸಿದರು. ಹನೂರಿನಲ್ಲಿ ಪ್ರಜಾಧ್ವನಿ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, "ತಾಲೂಕಿನಲ್ಲಿ ಅತಿ ಹೆಚ್ಚು ನೋಂದಣಿ ಮಾಡಿದ 10 ಮಂದಿಗೆ ವೈಯಕ್ತಿಕವಾಗಿ ಬೊಂಬಾಟ್ ಟಿವಿ ಗಿಫ್ಟ್ ನೀಡುತ್ತೇನೆ. ಪಕ್ಷ ಯಾವುದೇ ಇರಲಿ, ಎಲ್ಲರ ಮನೆ ಬಾಗಿಲಿಗೆ ತೆರಳಿ ಕಾಂಗ್ರೆಸ್ ಪ್ರಣಾಳಿಕೆಯನ್ನು ತಿಳಿಸಿ" ಎಂದರು.

"ಹೊರಗಿನಿಂದ ಬಂದಿರುವ ಕೆಲವರು ಕ್ಷೇತ್ರದ ಜನರಿಗೆ ಹಣ ಸೇರಿದಂತೆ ಮತ್ತಿತರ ಆಮಿಷ ತೋರಿಸುತ್ತಿದ್ದಾರೆ" ಎಂದು ಶಾಸಕ ನರೇಂದ್ರ ಹೇಳಿದರು. "ಬಿಜೆಪಿ ಅವರಾಗಲೀ, ಜೆಡಿಎಸ್‌ನವರಾಗಲೀ ಯಾರೇ ಆಗಲೀ ದುಡ್ಡು ಕೊಟ್ಟರೆ ಇಸ್ಕೊಳಿ ಓಟ್ ಮಾತ್ರ ಕಾಂಗ್ರೆಸ್‌ಗೆ ಹಾಕಿ" ಎಂದು ಹೇಳಿದರು.

ಪೊಲೀಸರಿಗೆ ಡಿಕೆಶಿ ಎಚ್ಚರಿಕೆ: ಸಚಿವ ಅಶ್ವಥ್‌ ನಾರಾಯಣ್ ಎಲ್ಲಿ ಕೊಲೆ ಪ್ರಚೋದನೆ ಹೇಳಿಕೆ ಕೊಟ್ಟರೋ ಅಲ್ಲಿಯೇ ಕೇಸ್​ ದಾಖಲಿಸಿ, ಅವರನ್ನು ಬಂಧಿಸಬೇಕು ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು. ಒಬ್ಬ ಮಂತ್ರಿಯಾಗಿ ಮಾಜಿ ಸಿಎಂ ಕೊಲೆಗೆ ಪ್ರಚೋದನೆ ಕೊಟ್ಟಿದ್ದಾರೆ. ಕ್ಷಮಾಪಣೆ ಕೇಳುವುದೆಲ್ಲ ಬೇಡ, ಭಾರತದ ಕಾನೂನನ್ನು ಸರ್ಕಾರ ಪ್ರಯೋಗಿಸಲಿ ಎಂದರು.

ಅಶ್ವಥ್ ನಾರಾಯಣ ತನ್ನ ಹೇಳಿಕೆಗೆ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ. ಆತ ಅರೆಸ್ಟ್ ಆಗದಿದ್ದರೆ ಪೊಲೀಸ್ ಅಧಿಕಾರಿಗಳೂ ಕೂಡ ಹೊಣೆ. ಅವರು ರಿಟೈರ್ ಆದರೂ ಸಮಸ್ಯೆ ಎದುರಿಸಬೇಕಾಗುತ್ತದೆ. ಟಿಪ್ಪುವನ್ನು ಯಾರೋ ಗೌಡ ಕೊಂದ ಎಂದೆಲ್ಲಾ ಹೇಳುತ್ತಿದ್ದಾರೆ. ಅವರು ಯಾವ ಇತಿಹಾಸ ಹೇಳುತ್ತಿದ್ದಾರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕುಲಪತಿಯಾಗಲು 15-20 ಕೋಟಿ ರೂ ಕೊಡಬೇಕು ಅಂತ ಪ್ರತಾಪ್ ಸಿಂಹ ಹೇಳ್ತಾರೆ. ಪಿಎಸ್ಐ ಪ್ರಶ್ನೆ ಪತ್ರಿಕೆಗಳು ಲೀಕ್ ಆಗುತ್ತವೆ. ಸರ್ಕಾರದ ಆಡಳಿತ ವೈಫಲ್ಯದಿಂದ ಎಲ್ಲವೂ ಆಗುತ್ತಿವೆ. ಇದಕ್ಕೆ ಬಿಜೆಪಿ ಸರ್ಕಾರವೇ ಕಾರಣ ಎಂದು ದೂರಿದರು. ಬಿಜೆಪಿಯ ಆಡಳಿತ ವೈಫಲ್ಯದಿಂದ ಕೋಮು ಗಲಭೆ, ಸಂಘರ್ಷ ನಡೆಯುತ್ತಿದ್ದು ಯಾವ ಉದ್ಯಮಿಯೂ ಹೂಡಿಕೆ ಮಾಡಲು ಮನಸ್ಸು ಮಾಡುತ್ತಿಲ್ಲ. ಎಲ್ಲರೂ ತಮಿಳುನಾಡು, ಆಂಧ್ರದ ಕಡೆ ಹೋಗುತ್ತಿದ್ದಾರೆ ಎಂದರು.

ಇದನ್ನೂಓದಿ: ವಿಜಯಪುರ ನಗರದ 141 ಎಕರೆ ಪ್ರದೇಶದಲ್ಲಿ ವೈನ್​ ಪಾರ್ಕ್​ ನಿರ್ಮಾಣ: ಸಚಿವ ಮುನಿರತ್ನ

Last Updated : Feb 21, 2023, 8:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.