ETV Bharat / state

ಕೊಳ್ಳೇಗಾಲ: ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದ ನಾಲ್ವರ ಬಂಧನ - ನಾಲ್ವರು ದರೋಡೆ ಕೋರರ ಬಂಧಿಸಿದ ಕೊಳ್ಳೇಗಾಲ ಪೊಲೀಸರು

ತಮಿಳುನಾಡು ಮೂಲದ ಶಿವು ಹಾಗೂ ಸ್ನೇಹಿತ ದಿನೇಶ್ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಮಧುವನಹಳ್ಳಿಯ ಮುಖ್ಯ ರಸ್ತೆಯ ಬಳಿ, ಕಾರಿನಲ್ಲಿ ಬಂದ ಆರೋಪಿಗಳು ಶಿವು ಹಾಗೂ ದಿನೇಶ್ ಅವರ ಕಾರು ಅಡ್ಡಗಟ್ಟಿ ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದರು.

ನಾಲ್ವರು ದರೋಡೆ ಕೋರರ ಬಂಧನ
ನಾಲ್ವರು ದರೋಡೆ ಕೋರರ ಬಂಧನ
author img

By

Published : Feb 22, 2022, 10:04 PM IST

ಕೊಳ್ಳೇಗಾಲ(ಚಾಮರಾಜನಗರ): ಕಾರು ಅಡ್ಡಗಟ್ಟಿ‌ ಅದರಲ್ಲಿದ್ದವರನ್ನ ಸುಲಿಗೆ‌ಮಾಡಿ ಪರಾರಿಯಾಗಿದ್ದ ನಾಲ್ವರು ಖತರ್ನಾಕ್ ದರೋಡೆಕೋರರನ್ನು ಹೆಡೆಮುರಿಕಟ್ಟುವಲ್ಲಿ ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಭರತ್ ಅಲಿಯಾಸ್ ಹುಳಿಮಾವು, ಹನುಮೇಗೌಡ, ಕಿರಣ್, ಪ್ರತಾಪ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಆರೋಪಿಗಳು ಕಳೆದ ತಿಂಗಳು ಕಾರು ಅಡ್ಡಗಟ್ಟಿ‌ ಕಾರಿನಲ್ಲಿದ್ದವರ ಹಣ ಮತ್ತು ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.

ತಮಿಳುನಾಡು ಮೂಲದ ಶಿವು ಹಾಗೂ ಸ್ನೇಹಿತ ದಿನೇಶ್ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಮಧುವನಹಳ್ಳಿಯ ಮುಖ್ಯ ರಸ್ತೆಯ ಬಳಿ, ಕಾರಿನಲ್ಲಿ ಬಂದ ಆರೋಪಿಗಳು ಶಿವು ಹಾಗೂ ದಿನೇಶ್ ಅವರ ಕಾರು ಅಡ್ಡಗಟ್ಟಿ ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದರು.

ಬಳಿಕ ಶಿವು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ‌ ಹಿನ್ನೆಲೆ ಡಿವೈಎಸ್​​ಪಿ ಜಿ.ನಾಗರಾಜು ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದ ಸಿಪಿಐ ಶಿವರಾಜ್ ‌ಮುಧೋಳ್, ಪಿಎಸ್ಐ ಮಂಜುನಾಥ್, ವೀರಣ್ಣಾರಾಧ್ಯ, ವಿ ಚೇತನ್ ಒಳಗೊಂಡಂತೆ ಎರಡು ಪ್ರತ್ಯೇಕ ತಂಡಗಳಾಗಿ ತನಿಖೆ ಕೈಗೊಂಡಿದ್ದರು.

ಇದನ್ನೂ ಓದಿ : 11 ವರ್ಷದ ಬಾಲಕನ ಚಿಕಿತ್ಸೆಗೆ 31 ಲಕ್ಷ ರೂ. ದೇಣಿಗೆ ನೀಡಿ ಹೃದಯವಂತಿಕೆ ಮೆರೆದ ಕೆ ಎಲ್ ರಾಹುಲ್​

ತಿಂಗಳುಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಾರು ಹಾಗೂ ದೋಚಿಕೊಂಡು ಹೋಗಿದ್ದ ಫೋನ್ ವಶಕ್ಕೆ ಪಡೆದಿದ್ದಾರೆ‌.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.